ನಾಯಕನಾಗಿ ದೀಕ್ಷಣ್, ಉಪನಾಯಕನಾಗಿ ಜಯರಾಜ್ ಆಯ್ಕೆ
ಹಿರೆಬಂಡಾಡಿ: ಮೊಬೈಲ್ ಫೋನ್‌ಗಳನ್ನು ಬಳಸಿ ವಿದ್ಯುನ್ಮಾನ ಮತಯಂತ್ರದ ಮಾದರಿಯಲ್ಲಿ ಶಾಲಾ ಸಂಸತ್ತಿಗೆ ಚುನಾವಣೆಯು ಸಮಾಜ ವಿಜ್ಞಾನ ಶಿಕ್ಷಕ ಲಲಿತಾ ಕೆ. ಇವರ ಮಾರ್ಗದರ್ಶನದಲ್ಲಿ ಸರಕಾರಿ ಪ್ರೌಢಶಾಲೆ ಹಿರೆಬಂಡಾಡಿಯಲ್ಲಿ ನಡೆಯಿತು. ಶಾಲಾ ನಾಯಕನಾಗಿ ೧೦ನೇ ತರಗತಿಯ ದೀಕ್ಷಣ್ ಹಾಗೂ ಉಪನಾಯಕನಾಗಿ ೯ನೇ ತರಗತಿಯ ಜಯರಾಜ್ ಆಯ್ಕೆಯಾದರು.
ನಂತರ ನಡೆದ ಸಂಪುಟ ವಿಸ್ತರಣೆಯಲ್ಲಿ ಗೃಹಮಂತ್ರಿಯಾಗಿ ದೀಕ್ಷಿತ್, ಸಹಾಯಕ ಗೃಹ ಮಂತ್ರಿಗಳಾಗಿ ಗುರುಪ್ರಣಯಿ ಮತ್ತು ಸುಮನ್, ಶಿಕ್ಷಣ ಮಂತ್ರಿಯಾಗಿ ನೆಬಿಸತುಲ್ ಮಿಸ್ರಿಯ, ಸಹಾಯಕ ಶಿಕ್ಷಣ ಮಂತ್ರಿಗಳಾಗಿ ಸಾಜಿದಾ ಮತ್ತು ಸ್ನೇಹಿತ್, ವಾರ್ತಾ ಮಂತ್ರಿಯಾಗಿ ಬಿ.ಸಮೀಳ, ಸಹಾಯಕ ಶಿಕ್ಷಣ ಮಂತ್ರಿಗಳಾಗಿ ಹಿತಸ್ವಿ ಮತ್ತು ಹಫೀಝ, ಸಾಂಸ್ಕೃತಿಕ ಮಂತ್ರಿಯಾಗಿ ಪ್ರಿಯಾಂಕ, ಸಹಾಯಕ ಸಾಂಸ್ಕೃತಿಕ ಮಂತ್ರಿಗಳಾಗಿ ಫಾತಿಮತ್ ಆಶಿಫಾ ಮತ್ತು ಎ.ಆಯಿಷತುಲ್ ಸಹದಿಯ, ಕ್ರೀಡಾ ಮಂತ್ರಿಯಾಗಿ ಚರಣ್, ಸಹಾಯಕ ಕ್ರೀಡಾ ಮಂತ್ರಿಯಾಗಿ ದೀಕ್ಷಿತಾ ಎಲ್. ಮತ್ತು ದಿವಾನ್, ನೀರಾವರಿ ಮಂತ್ರಿಯಾಗಿ ಮನ್ವಿತ್ ಪಿ.ಎಸ್., ಸಹಾಯಕ ನೀರಾವರಿ ಮಂತ್ರಿಗಳಾಗಿ ಜಿತೀಶ್ ಮತ್ತು ಭವಿಷ್, ಸ್ವಚ್ಛತಾ ಮಂತ್ರಿಗಳಾಗಿ ಮೇಘ ಮತ್ತು ಜಿತೇಶ್ ಎಸ್., ಸಹಾಯಕ ಸ್ವಚ್ಛತಾ ಮಂತ್ರಿಗಳಾಗಿ ಎನ್.ದೀಪಕ್ ಮತ್ತು ಲಿಖಿತಾ, ಆಹಾರ ಮಂತ್ರಿಯಾಗಿ ದಿಶ್ವಂತ್, ಸಹಾಯಕ ಆಹಾರ ಮಂತ್ರಿಗಳಾಗಿ ಗೀತಾಪ್ರಸಾದ್ ಮತ್ತು ಪ್ರಣಮಿ, ಆರೋಗ್ಯ ಮಂತ್ರಿಯಾಗಿ ವೀಕ್ಷಾ, ಸಹಾಯಕ ಆರೋಗ್ಯ ಮಂತ್ರಿಗಳಾಗಿ ಚೈತ್ರಾ ಮತ್ತು ಯಕ್ಷಿತಾ, ಶಿಸ್ತು ಪಾಲನಾ ಮಂತ್ರಿಯಾಗಿ ರಿಫಾ ಮರಿಯಂ, ಸಹಾಯಕ ಶಿಸ್ತು ಪಾಲನಾ ಮಂತ್ರಿಗಳಾಗಿ ಎ. ಆದಿಲ್ ಅಹಮ್ಮದ್ ಮತ್ತು ಚಂದ್ರಿಕಾ, ಇಂಧನ ಮಂತ್ರಿಯಾಗಿ ಮನೀಶ್ ಎಂ, ಸಹಾಯಕ ಇಂಧನ ಮಂತ್ರಿಗಳಾಗಿ ಸಿಂಚನ್ ಮತ್ತು ಪ್ರಥ್ವಿರಾಜ್, ತೋಟಗಾರಿಕಾ ಮಂತ್ರಿಯಾಗಿ ನಿತನ್ ಕುಮಾರ್, ಸಹಾಯಕ ತೋಟಗಾರಿಕಾ ಮಂತ್ರಿಗಳಾಗಿ ಕಿಶನ್ ಎಚ್. ಮತ್ತು ಮಹಮ್ಮದ್ ಹಾಫಿಲ್, ಸಭಾಪತಿಯಾಗಿ ಸಿಂಚನಾ, ಪ್ರತಿಪಕ್ಷ ನಾಯಕರಾಗಿ ಗ್ರೇಷ್ಮಾ, ಶ್ರೀರಕ್ಷಾ ಮತ್ತು ತನುಶ್ರೀ ಆಯ್ಕೆಯಾದರು,
ವಿದ್ಯುನ್ಮಾನ ಮತ ಯಂತ್ರದ ಮಾದರಿಯ ಚುನಾವಣೆಯ ವ್ಯವಸ್ಥೆಯನ್ನು ವಿಜ್ಞಾನ ಶಿಕ್ಷಕರಾದ ಮನೋಹರ ಎಂ.ರವರು ಮಾಡಿದರು. ಚುನಾವಣಾ ಅಧಿಕಾರಿಗಳಾಗಿ ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ ಬಿ., ಇಂಗ್ಲಿಷ್ ಭಾಷಾ ಶಿಕ್ಷಕ ವಸಂತಕುಮಾರ್ ಪಿ, ಅತಿಥಿ ಶಿಕ್ಷಕರಾದ ಶ್ವೇತಾ ಕುಮಾರಿ ಎಸ್ ಮತ್ತು ಆರತಿ ವೈ.ಡಿ. ಕಾರ್‍ಯನಿರ್ವಹಿಸಿದರು. ಶಾಲಾ ಪ್ರಭಾರ ಮುಖ್ಯಶಿಕ್ಷಕ ಹರಿಕಿರಣ್ ಕೆ.ರವರು ಸಚಿವರಿಗೆ ಪ್ರಮಾಣ ವಚನ ಬೋಧಿಸಿ ಶುಭಹಾರೈಸಿದರು.