ಹಿರೆಬಂಡಾಡಿ: ಸರ್ಕಾರಿ ಪ್ರೌಢಶಾಲೆ ಹಿರೇಬಂಡಾಡಿ ಇಲ್ಲಿ 9ನೇ ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಯಿತು.
ಮುಖ್ಯಶಿಕ್ಷಕ ಹರಿಕಿರಣ್ ಕೆ.ರವರು ಯೋಗ ಪ್ರಾರ್ಥನೆ ನೆರವೇರಿಸಿದರು. ಸಮಾಜ ವಿಜ್ಞಾನ ಶಿಕ್ಷಕಿ ಲಲಿತಾರವರು ದೀಪೊಜ್ವಲನೆ ಮಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ ಬಿ.ರವರು ಯೋಗ ದಿನಾಚರಣೆ ಔಚಿತ್ಯ ಹಾಗೂ ಯೋಗದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಶಾಲಾ ಮುಖ್ಯಗುರು ಹರಿಕಿರಣ್ ಕೆ. ಯೋಗದ ವಿವಿಧ ಭಂಗಿಗಳ ಪ್ರಾತ್ಯಕ್ಷಿಕೆಯೊಂದಿಗೆ ಯೊಗಾಭ್ಯಾಸ ನಡೆಸಿಕೊಟ್ಟರು. ಕುಳಿತು ಮಾಡುವ ಆಸನಗಳು, ನಿಂತು ಮಾಡುವ ಆಸನಗಳು, ಹೊಟ್ಟೆಯ ಮೇಲೆ ಮಲಗಿ ಮಾಡುವ ಆಸನಗಳು, ಬೆನ್ನ ಮೇಲೆ ಮಲಗಿ ಮಾಡುವ ಆಸನಗಳು, ಅಮೃತಾಸನ ಪ್ರಾಣಾಯಾಮ ಧ್ಯಾನ ಮೊದಲಾದ ಯೋಗದ ಹಂತಗಳನ್ನು ಮಾಡಲಾಯಿತು.
ಕನ್ನಡ ಶಿಕ್ಷಕಿ ಶ್ವೇತ ಕುಮಾರಿ ಎಸ್. ಸ್ವಾಗತಿಸಿದರು, ವಿಜ್ಞಾನ ಶಿಕ್ಷಕ ಮನೋಹರ ಎಂ. ವಂದಿಸಿದರು, ಇಂಗ್ಲೀಷ್ ಶಿಕ್ಷಕ ವಸಂತ್ ಕುಮಾರ್ ಸಹಕರಿಸಿದರು. ಹಿಂದಿ ಶಿಕ್ಷಕಿ ಆರತಿ ವೈ ಡಿ. ನಿರೂಪಿಸಿದರು. ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಯೋಗ ಅಭ್ಯಾಸದ ಪೂರ್ಣ ಪ್ರಯೋಜನ ಪಡೆದುಕೊಂಡರು.