ರೋಟರಿ ವಲಯ ಐದರ ಝೋನಲ್ ಲೆಪ್ಟಿನೆಂಟ್ ಆಗಿ ಪ್ರೊ.ಝೇವಿಯರ್ ಡಿ’ಸೋಜ

0

ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ಝೋನಲ್ ಲೆಪ್ಟಿನೆಂಟ್(ವಲಯ ಸೇನಾನಿ) ಆಗಿ ರೋಟರಿ ಕ್ಲಬ್ ಪುತ್ತೂರು ಇದರ ಮಾಜಿ ಅಧ್ಯಕ್ಷ ಪ್ರೊ.ಝೇವಿಯರ್ ಡಿ’ಸೋಜರವರು ನೇಮಕಗೊಂಡಿದ್ದಾರೆ.

ಬಂಟ್ವಾಳ ತಾಲೂಕಿನ ಕನ್ಯಾನದಲ್ಲಿ ಜನಿಸಿದ ಪ್ರೊ|ಝೇವಿಯರ್ ಡಿ’ಸೋಜರವರು ತಮ್ಮ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣವನ್ನು ಕರೋಪಾಡಿ ಮತ್ತು ಕನ್ಯಾನದಲ್ಲಿ ಪೂರೈಸಿದ್ದು, ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿ.ಎ ಪದವಿ, ಮಂಗಳೂರು ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬಳಿಕ ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರ್, ಯಲ್ಲಾಪುರ, ಬೆಟ್ಟಂಪಾಡಿ, ಬೈಂದೂರು ಮತ್ತು ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದು, ಬೆಟ್ಟಂಪಾಡಿ, ವಿಟ್ಲ ಹಾಗೂ ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 2020 ಜುಲೈ 31 ರಂದು ನಿವೃತ್ತರಾಗಿದ್ದರು.

1986 ರಲ್ಲಿ ಯಲ್ಲಾಪುರ ಆರ್.ಐ.ಡಿ 317 ರೋಟರಿ ಕ್ಲಬ್ ಸೇರಿದ್ದರು ಮತ್ತು 1989-90 ರಲ್ಲಿ ಅದರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 2009ರಲ್ಲಿ ರೋಟರಿ ಕ್ಲಬ್ ಪುತ್ತೂರಿಗೆ ಸೇರಿದ ಝೇವಿಯರ್ ಡಿ’ಸೋಜರವರು ಕ್ಲಬ್ ನಲ್ಲಿ ಕಾರ್ಯದರ್ಶಿ, ನಿರ್ದೇಶಕ, ಚೇರ್ ಮ್ಯಾನ್ ಹೀಗೆ ಬಹುತೇಕ ಎಲ್ಲಾ ಸ್ಥಾನಗಳನ್ನು ಅಲಂಕರಿಸಿರುತ್ತಾರೆ. 2014-15ರಲ್ಲಿ ಕಾರ್ಯದರ್ಶಿಯಾಗಿ, 2020-21ರಲ್ಲಿ ಅಧ್ಯಕ್ಷರಾಗಿದ್ದರು. ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮಹತ್ವಾಕಾಂಕ್ಷಿ ಯೋಜನೆ ರೋಟರಿ ಕ್ಲಬ್ ಪುತ್ತೂರು ಡಯಾಲಿಸಿಸ್ ಸೆಂಟರ್ ಪ್ರಾಜೆಕ್ಟ್ ಅನ್ನು ಪೂರ್ಣಗೊಳಿಸಲಾಗಿತ್ತು. 2022-23ನೇ ಸಾಲಿನ ಸದಸ್ಯತ್ವ ಅಭಿವೃದ್ಧಿ ವಿಚಾರ ಸಂಕಿರಣದ ಸಂಘಟನಾ ಸಮಿತಿಯ ಚೇರ್ ಮ್ಯಾನ್ ಆಗಿಯೂ ಕರ್ತವ್ಯ ನಿರ್ವಹಿಸಿರುತ್ತಾರೆ.

ಕೂರ್ನಡ್ಕ ನಿವಾಸಿ ಝೇವಿಯರ್ ಡಿ’ಸೋಜರವರ ಪತ್ನಿ ಶಿಕ್ಷಣ ಇಲಾಖೆಯಲ್ಲಿ ಬಿ.ಐ.ಇ.ಆರ್.ಟಿ ಆಗಿರುವ ಶ್ರೀಮತಿ ತನುಜಾ, ಪುತ್ರ ದುಬೈಯಲ್ಲಿ ನೆಲೆಸಿರುವ ಅಭಿಲಾಷ್ ಜೋಯಲ್, ಸೊಸೆ ವಿಲ್ಮಾ ಗ್ಲೆನ್, ಯುಕೆಯ ಆಕ್ಸ್ಫರ್ಡ್ ಬ್ರೂಕ್ಸ್ ನಲ್ಲಿ ಅಂತರರಾಷ್ಟ್ರೀಯ ಆತಿಥ್ಯ, ಈವೆಂಟ್ಸ್ ಮತ್ತು ಪ್ರವಾಸೋದ್ಯಮ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಓದುತ್ತಿರುವ ಅಖಿಲ್ ರೊಯ್ ಡಿ ಸೋಜ ರವರನ್ನು ಹೊಂದಿರುತ್ತಾರೆ.

LEAVE A REPLY

Please enter your comment!
Please enter your name here