ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ ನಿಷೇಧಿತ ಪಿ ಎಫ್ ಐ ಸಂಘಟನೆ ಕಾರ್ಯಕರ್ತರ ಮನೆಗಳ ಮೇಲೆ ಜೂನ್ 27ರಂದು ಎನ್ ಐ ಎ ದಾಳಿ ನಡೆಸಿದೆ.
ಬೆಳ್ಳಾರೆ, ಸುಳ್ಯ, ಬೆಳ್ತಂಗಡಿ ಮೊದಲಾದಡೆ ಮುಸ್ತಫ, ಅಬೂಬಕರ್ ಸಿದ್ದಿಕ್,ಉಮ್ಮರ್ ಫಾರೂಕ್, ಮಸೂದ್ ಸೇರಿದಂತೆ ಐವರು ಆರೋಪಿಗಳಿಗೆ ಹುಡುಕಾಟ ನಡೆಸಿರುವ ಬಗ್ಗೆ ಮಾಹಿತಿ ದೊರೆತಿದೆ.
ಕೆಲವು ತಿಂಗಳ ಹಿಂದೆ ಇವರ ಪತ್ತೆಗಾಗಿ ಎನ್ ಐ ಎ ಲುಕ್ ಔಟ್ ನೋಟಿಸ್ ಹೊರಡಿಸಿತ್ತು. ಈ ಪೈಕಿ ಓರ್ವನ ಪತ್ತೆಯಾಗಿದ್ದು, ಉಳಿದ ಮೂವರ ಸುಳಿವು ಸಿಕ್ಕಿರಲಿಲ್ಲ. ಇವರ ಮೇಲೆ ಪ್ರವೀಣ್ ಹಂತಕರಿಗೆ ಅಡಗುದಾಣ ಆರ್ಥಿಕ ಸಹಕಾರ ನೀಡಿದ ಆರೋಪ ಇದೆ. ಇನ್ನು ಸೋಮವಾರಪೇಟೆಯ ಕನ್ವೆಂಟ್ ಬಾಣೆ ಹಾಗೂ ಕಲ್ಕಂದೂರು ಭಾಗದಲ್ಲಿ ದುಬಾಯಿಯಲ್ಲಿರುವ ಇಬ್ಬರು ವ್ಯಕ್ತಿಗಳ ಮನೆಗೆ ಜೂನ್ 27ರಂದು ಬೆಳಿಗ್ಗೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ ಕೆಲವು ದಾಖಲೆಗಳನ್ನು ಪರಿಶೀಲಿಸಿದ್ದಾರೆ ಎಂದು ಉದಯವಾಣಿ ವರದಿ ಮಾಡಿದೆ.