ಕಾಣಿಯೂರು: ಕುದ್ಮಾರು ಶ್ರೀ ಪಂಚಲಿಂಗೇಶ್ವರ ಮಹಿಳಾ ಮಂಡಲದ ವತಿಯಿಂದ ನಾಟಿ ವೈದ್ಯರುಗಳಿಗೆ ಸನ್ಮಾನ ಸಮಾರಂಭ ಹಾಗೂ ಉಚಿತ ಯೋಗ ಶಿಬಿರವು ಬರೆಪ್ಪಾಡಿ ದ್ವಾಕ್ರಾ ಕಟ್ಟಡದ ಸಭಾಂಗಣದಲ್ಲಿ ನಡೆಯಿತು. ಯೋಗ ಶಿಕ್ಷಕಿ ಸರಸ್ವತಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಪಂಚಲಿಂಗೇಶ್ವರ ಮಹಿಳಾ ಮಂಡಲದ ಅಧ್ಯಕ್ಷ ಶುಭಾ ಆರ್.ನೋಂಡರವರು ನಿತ್ಯ ಜೀವನದಲ್ಲಿ ಯೋಗದ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ನಾಟಿ ವೈದ್ಯರಾದ ಕುದ್ಮಾರಿನ ರೇವತಿ ಕೆರೆನಾರು ಹಾಗೂ ಕರ್ಮಿನಾ ಡಿ’ಸೋಜ ಮರಕ್ಕಡ ಕಾಮಣ ಇವರನ್ನು ಸನ್ಮಾನಿಸಲಾಯಿತು. ಶ್ರೀ ಪಂಚಲಿಂಗೇಶ್ವರ ಮಹಿಳಾ ಮಂಡಲದ ಗೌರವಾಧ್ಯಕ್ಷೆ ರೇವತಿ ಕುದ್ಮಾರುರವರು ಯೋಗದ ಮಹತ್ವದ ಬಗ್ಗೆ ವಿವರಿಸಿದರು. ಬೆಳಂದೂರು ಗ್ರಾ.ಪಂ.ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತರು, ಸ್ತ್ರೀಶಕ್ತಿ ಸಂಘದ ಪದಾಧಿಕಾರಿಗಳು ಹಾಗೂ ಸಂಜೀವಿನಿ ಒಕ್ಕೂಟ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನವ್ಯಾ ಅನ್ಯಾಡಿ ಪ್ರಾರ್ಥಿಸಿದರು. ಉಮೇಶ್ವರಿ ಅಗಳಿ ಮತ್ತು ಜ್ಞಾನೇಶ್ವರಿ ಬರೆಪ್ಪಾಡಿ ಸನ್ಮಾನಿತರ ವಿವರ ವಾಚಿಸಿದರು. ಉಮಾಶ್ರೀ ಪಳ್ಳತ್ತಾರು ಸ್ವಾಗತಿಸಿ, ಸವಿತಾ ಅಗಳಿ ವಂದಿಸಿದರು. ಪವಿತ್ರಾ ಚೆನ್ನಪ್ಪ ನೂಜಿ ಕಾರ್ಯಕ್ರಮ ನಿರೂಪಿಸಿದರು.