ವಿಟ್ಲ: ಶಿಕ್ಷಣವು ವ್ಯಕ್ತಿ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಗುಣಾತ್ಮಕ ಶಿಕ್ಷಣ ನೀಡುವುದು ನಮ್ಮ ಮೊದಲ ಆದ್ಯತೆ. ಈ ದೃಷ್ಟಿಯಿಂದ ಪೋಷಕರು ಶಾಲೆಯೊಂದಿಗೆ ಕೈ ಜೋಡಿಸಬೇಕು ಎಂದು ಗುಣಶ್ರೀ ವಿದ್ಯಾಲಯದ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ನಾಗರಾಜ ಶೆಟ್ಟಿ ತಿಳಿಸಿದರು. ಅವರು ಕುಳ-ಕುಂಡಡ್ಕ ಗುಣಶ್ರೀ ವಿದ್ಯಾಲಯದಲ್ಲಿ ನಡೆದ ಪೋಷಕರ ಸಭೆಯಲ್ಲಿ ಮಾತನಾಡಿದರು.
ಶಿಕ್ಷಕ -ರಕ್ಷಕ ಸಭೆಯಲ್ಲಿ ಪಾಲ್ಗೊಂಡ ಪೋಷಕರು ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಚಾಲಕರಾದ ವೇಣುಗೋಪಾಲ ಶೆಟ್ಟಿ ಮರುವಾಳ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯ ಶಿಕ್ಷಕರಾದ ರಾಜಾರಾಮ ವರ್ಮ ಪ್ರಾಸ್ತಾವಿಕವಾಗಿ ಮಾತನಾಡಿ ಶೈಕ್ಷಣಿಕ ಯೋಜನೆಗಳ ಬಗ್ಗೆ ತಿಳಿಸಿದರು.
ಶಿಕ್ಷಕಿ ಚೈತ್ರ ಲೋಕೇಶ್ ಸ್ವಾಗತಿಸಿದರು. ಕಾವ್ಯಶ್ರೀ ವಂದಿಸಿದರು. ವಾಣಿಶ್ರೀ, ಶ್ರೇಯಾ ರೈ, ಕಾವ್ಯಶ್ರೀ ಎಂ, ವನಜಾ ಆಶಯ ಗೀತೆಯನ್ನು ಹಾಡಿದರು. ರೇಣುಕ ಕಾರ್ಯಕ್ರಮ ನಿರೂಪಿಸಿದರು.