ಪುತ್ತೂರು: ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಗುರುಪೂರ್ಣಿಮೆ ಹಬ್ಬವನ್ನು ಜು.3ರಂದು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ವಿವೇಕಾನಂದ ಪದವಿ ಕಾಲೇಜಿನ ಹಿರಿಯ ಸಂಸ್ಕೃತ ಅಧ್ಯಾಪಕ ಡಾ. ಶ್ರೀಶ ಕುಮಾರ್ ಮಾತನಾಡಿ ಭಗವಾನ್ ವೇದವ್ಯಾಸರಿಗೆ ಪರಂಪರಾಗತವಾಗಿ ಸಲ್ಲಿಸುತ್ತಿರುವ ನಮನವೇ ಗುರುಪೂರ್ಣಿಮೆ. ಸರ್ವ ವ್ಯಾಪಾಕನಾದ ಭಗವಂತ ಮಹಾವಿಷ್ಣುವಿನ ಒಂದು ಅಂಶವೆಂದು ವೇದವ್ಯಾಸರನ್ನು ಹೇಳಲಾಗುತ್ತದೆ ಹಾಗೂ ಪ್ರತಿವರ್ಷ ಆಷಾಢ ಶುಕ್ಲ ಹುಣ್ಣಿಮೆಯಂದು ವ್ಯಾಸ ಜಯಂತಿಯನ್ನು ಗುರುಪೂರ್ಣಿಮೆಯಾಗಿ ಆಚರಿಸಲಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಗುರುಪೂರ್ಣಿಮೆಯ ಮಹತ್ವವನ್ನು ತಿಳಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಲಾ ಸಂಚಾಲಕ ಭರತ್ ಪೈ ಮಾತನಾಡಿ ವಿದ್ಯಾರ್ಥಿಗಳ ಏಳಿಗೆಯಲ್ಲಿ ಗುರುವಿನ ಪಾತ್ರ ಮತ್ತು ಗುರು- ಶಿಷ್ಯರ ಬಾಂಧವ್ಯ ಅಮೂಲ್ಯವಾದುದು ಎಂದರು.
ಶಾಲಾ ಪ್ರಾಂಶುಪಾಲೆಸಿಂಧೂ ವಿ. ಜಿ, ಉಪಪ್ರಾಂಶುಪಾಲೆ ಹೇಮಾವತಿ ಎಮ್. ಎಸ್ ಹಾಗೂ ಶಿಕ್ಷಕ- ಶಿಕ್ಷಕೇತರ ಬಂಧುಗಳು ಉಪಸ್ಥಿತರಿದ್ದರು.