ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ರಾಷ್ಟ್ರಮಟ್ಟದ ಇನ್ಸ್ಪೈರ್ ಅವಾರ್ಡ್ ಗೆ ಆಯ್ಕೆ

0

ಪುತ್ತೂರು: ಭಾರತ ಸರ್ಕಾರದ ಡಿಪಾರ್ಟ್ಮೆಂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಹಾಗೂ ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ ಇಂಡಿಯಾ ಇವರ ಸಂಯೋಗದಲ್ಲಿ ಇನ್ಸ್ಪೈರ್ ಅವಾರ್ಡ್ ಮಾನಕ ಇವರು 2021- 22ರಲ್ಲಿ ನಡೆಸಿದ ಇನ್ಸ್ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ ಕುಮಾರಿ ಅಭಿಲಾಷ
ದೋಟ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ʼA Novel Plant Based Stain for Histological Studiesʼ ಎಂಬ ವಿಷಯದಲ್ಲಿ ಅಭಿಲಾಷಾ ಅವರು ಪ್ರಾಜೆಕ್ಟ್ ನ್ನು ತಯಾರಿಸಿದ್ದಾರೆ. ಸಂಸ್ಥೆಯ ಉಪ ಪ್ರಾಂಶುಪಾಲ ವಸಂತ ಮೂಲ್ಯ ಇವರ ಸಹಕಾರದೊಂದಿಗೆ ವಿಜ್ಞಾನ ಶಿಕ್ಷಕಿ ಸಿಂಧು ವಿ ಕೆ ಇವರು ಮಾರ್ಗದರ್ಶನ ನೀಡಿರುತ್ತಾರೆ. ಅಭಿಲಾಷ ದೋಟ ಇವರು ಪ್ರಸ್ತುತ ಬಲ್ಮಠ ಪದವಿಪೂರ್ವ ಕಾಲೇಜು ಮಂಗಳೂರು ಇಲ್ಲಿ ದ್ವಿತೀಯ ಪಿಯುಸಿ ಅಧ್ಯಯನ ಮಾಡುತ್ತಿದ್ದಾರೆ. ಈಕೆ ಸ್ಮಿತಾ. ಪಿ.ಜಿ ಹಾಗೂ ಲಕ್ಷ್ಮಣ ದೋಟ ದಂಪತಿಯ ಪುತ್ರಿ.

LEAVE A REPLY

Please enter your comment!
Please enter your name here