ವಿಟ್ಲ: ಖಿದ್ಮಾ ರಾಜ್ಯಮಟ್ಟದ ಕವಿಗೋಷ್ಠಿಗೆ ರಶ್ಮಿತಾ ಸುರೇಶ್ ಜೋಗಿಬೆಟ್ಟುರವರು ಆಯ್ಕೆಯಾಗಿದ್ದಾರೆ. ಸಮಾರಂಭವು ಜು.9 ರಂದು ಬೆಂಗಳೂರಿನ ಚಾಮರಾಜಪೇಟೆ ರಸ್ತೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆಯಲಿದೆ.
ಸಮಾರಂಭದ ಅಂಗವಾಗಿ ರಾಜ್ಯಮಟ್ಟದ ಕವಿಗೋಷ್ಠಿ ಏರ್ಪಡಿಸಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ 30 ಮಂದಿ ಕವಿ – ಕವಯತ್ರಿಯರು ಭಾಗವಹಿಸಿದ್ದರು. ಈ ಪೈಕಿ ಬಂಟ್ವಾಳ ತಾಲೂಕಿನ ರಶ್ಮಿತಾ ಸುರೇಶ್ ಜೋಗಿಬೆಟ್ಟು ಅವರು ಆಯ್ಕೆಯಾಗಿದ್ದಾರೆ ಎಂದು ಖಿದ್ಮಾ ಪೌಂಡೇಶನ್ ನ ರಾಜ್ಯ ಸಂಚಾಲಕ ಅಮೀರ್ ಬನ್ನೂರು ತಿಳಿಸಿದ್ದಾರೆ.