ಪುತ್ತೂರು:ರಸ್ತೆ ಕಾಂಕ್ರಿಟೀಕರಣಗೊಳಿಸುವ ಸಮಯದಲ್ಲಿ ರಸ್ತೆಯ ಅಂಚಿಗೆ ತುಂಬಿಸಲು ರಸ್ತೆ ಹಾಕಿರುವ ಮಣ್ಣು ಮಳೆ ನೀರಿನೊಂದಿಗೆ ಕೊಚ್ಚಿಕೊಂಡು ಪಕ್ಕದ ಮನೆಯ ಅಂಗಲದಲ್ಲಿ ತುಂಬಿಕೊಂಡಿರುವ ಘಟನೆ ಕೇಪುಳುವಿನಲ್ಲಿ ನಡೆದಿದೆ.
ಕೇಪುಳು, ಸಿದ್ಯಾಳ, ಊರಮಾಲ್ ರಸ್ತೆ ಕಾಂಕ್ರಿಟೀಕರಣಗೊಂಡ ಬಳಿಕ ರಸ್ತೆ ಇಕ್ಕೆಲಗಳಿಗೆ ತುಂಬಿಸಲು ರಸ್ತೆ ಬದಿಯಲ್ಲಿ ರಾಶಿ ಹಾಕಿದ್ದ ಹಾಗೆಯೇ ಇದ್ದು ಜು.6ರಂದು ಸುರಿದ ಬಾರಿ ಮಳೆಗೆ ಮಣ್ಣು ಮಳೆಯ ನೀರಿನೊಂದಿಗೆ ಕೊಚ್ಚಿಕೊಂಡು ಪಕ್ಕದಲ್ಲಿರುವ ಬಾಳಪ್ಪ ಪೂಜಾರಿಯವರ ಮನೆಯ ಅಂಗಲಕ್ಕೆ ಹರಿದುಹೋಗಿದೆ. ಬಳಿಕ ಅವರ ಮನೆಯ ಕೆಲಸದಾಳುಗಳು ಮಳೆಯ ನೀರನ್ನು ಚರಂಡಿಗೆ ಹರಿಯುವಂತೆ ಮಾಡಿದ್ದಾರೆ.