ಸವಣೂರು : ಮುರುಕಲು ಕಾಲು ಸಂಕಕ್ಕೆ ತಾತ್ಕಾಲಿಕ ಪರಿಹಾರ ಕಲ್ಪಿಸಿದ ಗ್ರಾ.ಪಂ.

0

ಸುದ್ದಿ ಬಿಡುಗಡೆ ವರದಿಯ ಫಲಶೃತಿ

ಸವಣೂರು : ಸವಣೂರು ಗ್ರಾಮದ ಕೆಡೆಂಜಿ ಅರೆಲ್ತಡಿ ಹಾಗೂ ಸುತ್ತಮುತ್ತಲಿನ ಪರಿಸರದ ಜನರು ಮತ್ತು ಶಾಲಾ ಮಕ್ಕಳು ಸವಣೂರು ಪೇಟೆಯನ್ನು ಹತ್ತಿರದಲ್ಲಿ ಸಂಪರ್ಕಿಸುವ ಪಟ್ಟೆ
ಎಂಬಲ್ಲಿರುವ ಕಾಲು ಸಂಕವೊಂದು ಅಪಾಯವನ್ನು ಆಹ್ವಾನಿಸುತ್ತಿರುವ ಕುರಿತು ಸುದ್ದಿಬಿಡುಗಡೆ ಜು.7ರಂದು ವರದಿ ಪ್ರಕಟಿಸಿತ್ತು. ಇದೀಗ ಗ್ರಾ.ಪಂ.ವತಿಯಿಂದ ಕಬ್ಬಿಣದ ಕೈಕಂಬಿಗಳನ್ನು ಅಳವಡಿಸುವ ಮೂಲಕ ಪರಿಹಾರ ಕಲ್ಪಿಸಿದೆ.

ಈ ಕಾಲು ಸಂಕವನ್ನು ಬಳಸಿಕೊಂಡು ನೂರಾರು ವಿದ್ಯಾರ್ಥಿಗಳು ಸವಣೂರಿನ ವಿವಿಧ ವಿದ್ಯಾಸಂಸ್ಥೆಗಳಿಗೆ ಹೋಗುತ್ತಿದ್ದಾರೆ.ಈ ಕಾಲು ಸಂಕಕ್ಕೆ ಎರಡು ವರ್ಷದ ಹಿಂದೆ ಬೃಹತ್‌
ಮರವೊಂದು ಸಿಲುಕಿ ಭಾಗಶಃ ಹಾನಿಯಾಗಿತ್ತು. ಜತೆಗೆ ಕಾಲು ಸಂಕ ದಾಟುವಾಗ ಬಳಸುವ ಕಾಲುಸಂಕದ ಕೈಕಂಬಿಗಳೂ ಮುರಿದು ಹೋಗಿ,ಶಾಲಾ ಮಕ್ಕಳು ಹೋಗುವಾಗ
ಅಪಾಯಕಾರಿಯಾಗಿ ಪರಿಣಮಿಸಿತ್ತು.ಈ ಕುರಿತು ಸಾರ್ವಜನಿಕ ಹಿತದೃಷ್ಟಿಯಿಂದ ಪತ್ರಿಕೆ ವರದಿ ಮಾಡಿತ್ತು.ಇದೀಗ ಗ್ರಾ.ಪಂ.ಕಬ್ಬಿಣದ ಕೈ ಕಂಬಿಗಳನ್ನು ಅಳವಡಿಸಿ ಸಮಸ್ಯೆ
ಪರಿಹರಿಸಿದೆ.

ಶಾಶ್ವತ ಪರಿಹಾರಕ್ಕೆ ಮನವಿ
ಇಲ್ಲಿ ಹೊಸ ಕಾಲುಸಂಕ ನಿರ್ಮಿಸುವುದು ಅತೀ ಅಗತ್ಯವಾಗಿದೆ. ಇಲ್ಲಿ ಹೊಸ ಕಾಲು ಸಂಕ ಅಥವಾ ಶಾಲಾ ಸಂಪರ್ಕ ಸೇತು ಯೋಜನೆಯಡಿ ಕಿರು ಸೇತುವೆ ನಿರ್ಮಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಈ ಭಾಗದ ಜನತೆ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here