





ಅಧ್ಯಕ್ಷ: ಸೋಮಪ್ಪ ಗೌಡ, ಉಪಾಧ್ಯಕ್ಷ: ಪದ್ಮನಾಭ ಗೌಡ


ಕಡಬ: ಕಡಬ ತಾಲೂಕಿನ ಕುಂತೂರುಪದವು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಗೆ ನಿರ್ದೇಶಕರ ಅವಿರೋಧ ಆಯ್ಕೆ ನಡೆದಿದೆ.





ಸಾಮಾನ್ಯ ಮೀಸಲು ಸ್ಥಾನದಿಂದ ಎ.ಸೋಮಪ್ಪ ಗೌಡ ಎರ್ಮಾಳ, ಬಿ.ಪದ್ಮನಾಭ ಗೌಡ ಎರ್ಮಾಳ, ವಿ.ಯಂ.ತೋಮಸ್ ಪದವು, ದಿನಕರ ಭಟ್ ಕೆ.ಮೇರುಗುಡ್ಡೆ, ರಾಮಯ್ಯ ಗೌಡ ಬೈಲ್ಲಡ್ಡೆ ಬಲ್ಯ, ವಸಂತ ಕೆ.ಕೆದ್ದೊಟ್ಟೆ, ಸಿ.ಹೆಚ್.ಸುರೇಶ ಇಡಾಳ, ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ವನಿತಜಯಪ್ರಕಾಶ ಎನಾಜೆ, ಮಹಿಳಾ ಮೀಸಲು ಸ್ಥಾನದಿಂದ ವನಿತ ಚಂದ್ರಶೇಖರ ಕೇರ್ಪುಡೆ, ವಿಜಯಶೀನಪ್ಪ ಗೌಡ ಇಡಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದುಳಿದ ಪ್ರವರ್ಗ ಎ ಮೀಸಲು ಹಾಗೂ ಹಿಂದುಳಿದ ಪ್ರವರ್ಗ ಬಿ ಮೀಸಲು ಸ್ಥಾನದಿಂದ ಯಾವುದೇ ನಾಮಪತ್ರ ಸಲ್ಲಕೆಯಾಗದೇ ಇರುವುದರಿಂದ ಖಾಲಿಯಾಗಿದೆ. ಪರಿಶಿಷ್ಠ ಜಾತಿ ಮೀಸಲು ಸ್ಥಾನಕ್ಕೆ ಅರ್ಹ ಅಭ್ಯರ್ಥಿಗಳೇ ಇಲ್ಲದೇ ಇರುವುದರಿಂದ ಖಾಲಿಯಾಗಿದೆ.
ಅಧ್ಯಕ್ಷ/ಉಪಾಧ್ಯಕ್ಷರ ಅವಿರೋಧ ಆಯ್ಕೆ:
ಸಂಘದ ಅಧ್ಯಕ್ಷರಾಗಿ ಎ.ಸೋಮಪ್ಪ ಗೌಡ ಎರ್ಮಾಳ ಹಾಗೂ ಉಪಾಧ್ಯಕ್ಷರಾಗಿ ಬಿ.ಪದ್ಮನಾಭ ಗೌಡರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೋಮಪ್ಪ ಗೌಡ ಅವರು ಸತತ 2ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಪುತ್ತೂರು ಉಪವಿಭಾಗದ ಮಾರಾಟಾಧಿಕಾರಿ ಶೋಭಾ ಎನ್.ಎಸ್.ಅವರು ಚುನಾವಣಾಧಿಕಾರಿಯಾಗಿದ್ದರು. ಸಂಘದ ಕಾರ್ಯದರ್ಶಿ ನೀಲಯ್ಯ ಗೌಡ, ಹಾಲು ಪರೀಕ್ಷಕ ಶ್ರೇಯಸ್ ಸಹಕರಿಸಿದರು.










