ಲಾಡ್ಜ್‌ನಲ್ಲಿ ತಂಗಿದ್ದ ಯುವಕನ ಸಾವು

0

ಪುತ್ತೂರು:ಇಲ್ಲಿನ ಲಾಡ್ಜ್ ಒಂದರಲ್ಲಿ ರೂಮ್ ಪಡೆದು ತಂಗಿದ್ದ ವ್ಯಕ್ತಿಯೋರ್ವರು ಕುಳಿತ ಸ್ಥಿತಿಯಲ್ಲಿಯೇ ಮೃತಪಟ್ಟ ಘಟನೆ ಜು.8ರಂದು ಸಂಜೆ ಪತ್ತೆಯಾಗಿದೆ.
ಈ ಹಿಂದೆ ಮಧುರಾ ಸ್ವೀಟ್ಸ್ ಸ್ಟಾಲ್‌ನಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿಕೊಂಡಿದ್ದು ಪ್ರಸ್ತುತ ತಂಪು ಪಾನೀಯದ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಶ್ರೀನಿವಾಸ್(40ವ.)ಮೃತಪಟ್ಟವರು.ಶ್ರೀನಿವಾಸ್‌ರವರು ಕೆಲವೊಮ್ಮೆ ಮನೆಗೆ ಹೋಗದೆ ಲಾಡ್ಜ್‌ನಲ್ಲಿ ಕೊಠಡಿಯನ್ನು ಪಡೆದುಕೊಂಡು ತಂಗುತ್ತಿದ್ದರು.2 ದಿನಗಳ ಹಿಂದೆ ಲಾಡ್ಜ್‌ವೊಂದರಲ್ಲಿ ಕೊಠಡಿ ಪಡೆದುಕೊಂಡು ತಂಗಿದ್ದ ಅವರು ಕೊಠಡಿಯ ಒಳಗೆ ಕುಳಿತ ಸ್ಥಿತಿಯಲ್ಲಿಯೇ ಮೃತಪಟ್ಟಿದ್ದಾರೆ.ಅವರು ಹೃದಯಾಘಾತಕ್ಕೊಳಗಾಗಿ ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದೆ. ಪುತ್ತೂರು ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here