ಬಹುಜನ ಚಳುವಳಿಯ ನೇತಾರ ಡೀಕಯ್ಯರ ಪ್ರತಿಮೆ ಅನಾವರಣ

0

ಉಪ್ಪಿನಂಗಡಿ: ವರ್ಷದ ಹಿಂದೆ ಸಾವನ್ನಪ್ಪಿದ ಬಹುಜನ ಚಳುವಳಿಯ ನೇತಾರ, ಶೋಷಿತ ವರ್ಗದ ಹಿತಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಡೀಕಯ್ಯ ಪೊಯ್ಯರವರ ಪ್ರತಿಮೆಯನ್ನು ಶಾಸಕ ಹರೀಶ್ ಪೂಂಜಾರವರು ಅನಾವರಣಗೊಳಿಸಿದರು.
ಪದ್ಮುಂಜದ ಪೊಯ್ಯ ಸಂಗಮ್ ವಿಹಾರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸ್ವ ಹಿತಕ್ಕಿಂತ ಸಮಾಜದ ಹಿತಕ್ಕಾಗಿ ಶ್ರಮಿಸಿದ ಮಂದಿಯನ್ನು ಸಮಾಜ ಮರೆಯುವುದಿಲ್ಲ ಎನ್ನುವುದಕ್ಕೆ ಡೀಕಯ್ಯ ರವರೇ ಸಾಕ್ಷಿ. ಅವರು ಪ್ರತಿಮೆಯ ರೂಪದಲ್ಲಿ ಜನ ಮಾನಸದಲ್ಲಿ ಸದಾ ನೆನಪಾಗಿರುತ್ತಾರೆ ಎಂದು ಪೂಂಜಾ ವಿವರಿಸಿದರು.

ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಡೀಕಯ್ಯ ರವರ ಸಾವಿನ ಬಗ್ಗೆ ಅವರ ಮನೆಯವರು ವ್ಯಕ್ತಪಡಿಸುವ ಸಂಶಯದ ನಿವಾರಣೆಗೆ ನಡೆಸಲಾಗುತ್ತಿರುವ ಸಿಒಡಿ ತನಿಖೆ ತ್ವರಿತಗತಿಯಲ್ಲಿ ನಡೆಯಬೇಕಾಗಿದೆ. ಅದಕ್ಕಾಗಿ ನಾನು ಬೆಳ್ತಂಗಡಿ ಶಾಸಕರೊಡಗೂಡಿ ಧ್ವನಿ ಎತ್ತಲಿರುವೆವು ಎಂದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಚಿಂತಕ ಲೋಲಾಕ್ಷ, ಕಣಿಯೂರು ಗ್ರಾ.ಪಂ. ಅಧ್ಯಕ್ಷೆ ಗಾಯತ್ರಿ, ಸದಸ್ಯೆ ಸುಮತಿ, ಎಂ. ದೇವದಾಸ್, ಮೋಹನಾಂಗಯ್ಯ ಸ್ವಾಮಿ, ಕಾಂತಪ್ಪ ಅಲಂಗಾರ್, ಅಣ್ಣು ಸಾಧನ, ಮೊದಲಾದವರು ಉಪಸ್ಥಿತರಿದ್ದರು.
ಕೊದಂಡರಾಮಯ್ಯ ಸ್ವಾಗತಿಸಿದರು. ಡಾ. ಆಶಾಲತಾ ಪಿ ವಂದಿಸಿದರು. ಅಚ್ಚುಶ್ರೀ ಬಾಂಗೇರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here