ಅಧ್ಯಕ್ಷ: ಕರುಣಾಕರ ಶೆಟ್ಟಿ ಕೊಮ್ಮಂಡ, ಉಪಾಧ್ಯಕ್ಷೆ: ಅನಿತಾ ತಿಮ್ಮಪ್ಪ ನಾಯ್ಕ ಕೂವೆಂಜ
ಪುತ್ತೂರು: ಬೆಟ್ಟಂಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿಯ ಹದಿಮೂರು ಸ್ಥಾನಗಳಿಗೆ ನಿರ್ದೇಶಕರು ಹಾಗೂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆಯಿತು.
ಸಾಮಾನ್ಯ ಕ್ಷೇತ್ರದ ಏಳು ಸ್ಥಾನಗಳಿಂಂದ ಕರುಣಾಕರ ಶೆಟ್ಟಿ ಕೊಮ್ಮಂಡ, ಶೇಷಪ್ಪ ರೈ ಮೂರ್ಕಾಜೆ, ಸದಾನಂದ ರೈ ಮೊದೆಲ್ಕಾಡಿ, ಪ್ರಭಾಕರ ರೈ ಬಾಜುವಳ್ಳಿ, ಪ್ರಮೋದ್ ಕುಮಾರ್ ರೈ, ಸೂರ್ಯನಾರಾಯಣ ಭಟ್ ಪಾರ, ಆನಂದ ಗೌಡ ಮಿತ್ತಡ್ಕ, ಮಹಿಳಾ ಮೀಸಲು ಕ್ಷೇತ್ರದಿಂದ ದೇವಕಿ ದೇವಿ, ಜಯಂತಿ, ಹಿಂದುಳಿದ ವರ್ಗ ಎ. ಸ್ಥಾನದಿಂದ ಕುಸುಮ ಎಸ್.ಎಂ., ಹಿಂದುಳಿದ ವರ್ಗ ಬಿ. ಸ್ಥಾನದಿಂದ ಶರತ್ ಕುಮಾರ್ ಪಿ.ಎಸ್., ಅನುಸೂಚಿತ ಜಾತಿ ಸ್ಥಾನದಿಂದ ಕೆ. ಕೇಶವ ನಾಯ್ಕ ಹಾಗೂ ಅನುಸೂಚಿತ ಪಂಗಡ ಸ್ಥಾನದಿಂದ ಅನಿತಾ ತಿಮ್ಮಪ್ಪ ನಾಯ್ಕರವರು ನಾಮಪತ್ರ ಸಲ್ಲಿಸಿದ್ದರು. ಎಲ್ಲಾ ಹದಿಮೂರು ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾದ ಕಾರಣ ಎಲ್ಲಾ ಸ್ಥಾನಗಳಿಗೆ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ:
ನೂತನ ಆಡಳಿತ ಮಂಡಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜು.೮ರಂದು ನಡೆಯಿತು. ಅಧ್ಯಕ್ಷರಾಗಿ ಎರಡನೇ ಅವಧಿಗೆ ಕರುಣಾಕರ ಶೆಟ್ಟಿ ಕೊಮ್ಮಂಡ ಹಾಗೂ ಉಪಾದ್ಯಕ್ಷರಾಗಿ ಅನಿತಾ ತಿಮ್ಮಪ್ಪ ನಾಯ್ಕ ಕೂವೆಂಜರವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರ ಹೆಸರನ್ನು ನಿರ್ದೇಶಕರಾದ ಸೂರ್ಯನಾರಾಯಣ ಭಟ್ ಪಾರ ಸೂಚಿಸಿ ಸದಾನಂದ ರೈ ಮೊದೆಲ್ಕಾಡಿ ಅನುಮೋದಿಸಿದರು. ಉಪಾದ್ಯಕ್ಷರ ಹೆಸರನ್ನು ಶೇಷಪ್ಪ ರೈ ಮೂರ್ಕಾಜೆ ಸೂಚಿಸಿ ಕುಸುಮ ಎಸ್.ಎಂ. ಅನುಮೋದಿಸಿದರು.
ಆಯ್ಕೆ ಬಳಿಕ ನೂತನ ಅಧ್ಯಕ್ಷ ಕರುಣಾಕರ ಶೆಟ್ಟಿ ಕೊಮ್ಮಂಡ ಸ್ವಾಗತಿಸಿ ಮಾತನಾಡಿ ಸಂಘದ ಅಭಿವೃದ್ಧಿಗೆ ಸಹಕರಿಸುವಂತೆ ತಿಳಿಸಿದರು. ಉಪಾಧ್ಯಕ್ಷೆ ಅನಿತಾ ತಿಮ್ಮಪ್ಪ ನಾಯ್ಕ ಕೂವೆಂಜ ಮಾತನಾಡಿ ಎಲ್ಲರ ಸಹಕಾರ ಕೋರಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಮಂಗಳೂರು ಉಪವಿಭಾಗದ ಅಧೀಕ್ಷಕ ಬಿ.ನಾಗೇಂದ್ರರವರು ಚುನಾವಣಾಧಿಕಾರಿಯಾಗಿದ್ದರು. ಸಂಘದ ಕಾರ್ಯದರ್ಶಿ ಸತೀಶ್ ರೈ ಮೂರ್ಕಾಜೆ ಹಾಗೂ ಸಹಾಯಕ ಉಚಿತ್ ಬದಿನಾರು ಸಹಕರಿಸಿದರು.