ಕೋಡಿಂಬಾಳ ಮಾಲೇಶ್ವರದಲ್ಲಿ ಮನೆ ಕುಸಿತ -ಅಪಾರ ನಷ್ಟ

0

ಕಡಬ: ಕೋಡಿಂಬಾಳ ಗ್ರಾಮದ ಮಾಲೇಶ್ವರ ಎಂಬಲ್ಲಿ ಶೇಖ್ ಬ್ಯಾರಿ ಎಂಬವರ ವಾಸದ ಮನೆ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಕುಸಿದಿರುವ ಘಟನೆ ನಡೆದಿದೆ.
ಮನೆ ಕುಸಿತದ ವೇಳೆ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಮತ್ತು ಪಟ್ಟಣ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಮನೆ ಕುಸಿತದಿಂದ ಮನೆ ಸಂಪೂರ್ಣ ಜಖಂಗೊಂಡಿದ್ದು ಇವರಿಗೆ ವಾಸ ಮಾಡಲು ಬೇರೆ ಮನೆಯೇ ನಿರ್ಮಿಸಬೇಕಾಗಿದೆ. ಈಗಾಗಲೇ ಇವರನ್ನು ಸ್ಥಳಾಂತರಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಘಟನಾ ಸ್ಥಳಕ್ಕೆ ಮಾಜಿ ತಾ.ಪಂ. ಸದಸ್ಯ ಫಝಲ್ ಕೋಡಿಂಬಾಳ ಭೇಟಿ ನೀಡಿದ್ದು ಸೂಕ್ತ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದ್ಧಾರೆ.

LEAVE A REPLY

Please enter your comment!
Please enter your name here