ಸೂರಿಕುಮೇರು: ಕಾರುಗಳ ಮಧ್ಯೆ ಅಪಘಾತ

0

ವಿಟ್ಲ : ಡಿವೈಡರ್ ಮೇಲಿನಿಂದ ಕೆಳಕ್ಕೆ ಬಿದ್ದ ಕಾರೊಂದು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೇರೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರು ಚಾಲಕಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸೂರಿಕುಮೇರು ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ನಡೆದಿದೆ.


ಬಿಸಿರೋಡು ನಿವಾಸಿ ರಮ್ಯ ರವರು ಕಾರಿನಲ್ಲಿ ಬಿಸಿರೋಡಿನಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್ ಮೇಲೆ ಹತ್ತಿ ಕೆಳಗೆ ರಸ್ತೆಗೆ ಇಳಿದು ಎದುರಿನಿಂದ ಬರುತ್ತಿದ್ದ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದೆ.


ಕಾರು ಚಲಾಯಿಸುತ್ತಿದ್ದ ರಮ್ಯಾರವರಿಗೆ ಗಾಯವಾಗಿದ್ದು, ಅವರನ್ನು ಬಿಸಿರೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ರಮ್ಯರವರು ಒಬ್ಬರೇ ಇದ್ದರು. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here