ಪುತ್ತೂರು: ಮುಖ್ಯರಸ್ತೆಯ ಮಹಮ್ಮಾಯ ದೇವಸ್ಥಾನದ ಬಳಿಯ ಚೇತನಾ ಆಸ್ಪತ್ರೆಯಲ್ಲಿ ಉಚಿತ ಮಧುಮೇಹ(RBS), HBA1C(3 ತಿಂಗಳ ಸರಾಸರಿ ಶುಗರ್ ಪರೀಕ್ಷೆ), ಹಾಗೂ PFT(ಶ್ವಾಸಕೋಶ ಕಾರ್ಯ ಪರೀಕ್ಷೆ)ಯ ತಪಾಸಣೆ ಶಿಬಿರವು ಜು.11 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು.
ತಪಾಸಣೆಗೆ ಆಗಮಿಸಿದ ಫಲಾನುಭವಿಗಳಿಗೆ ಚೇತನಾ ಆಸ್ಪತ್ರೆಯ ವೈದ್ಯರಾದ ಡಾ.ಜೆ.ಸಿ ಆಡಿಗರವರು ಸೂಕ್ತ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಲ್ಯಾಬೋರೇಟರಿ ಮುಖ್ಯಸ್ಥ ಹಾಗೂ ಮ್ಯಾನೇಜರ್ ನೋಯಲ್ ಡಿ’ಸೋಜ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗ, ಗ್ಲೆನ್ ಮಾರ್ಕ್ ಹಾಗೂ ಸಿಪ್ಲಾ ಸಂಸ್ಥೆಯ ಸಿಬ್ಬಂದಿ ಸಹಕರಿಸಿದರು.