ಗ್ರಾಮೀಣ ಭಾಗದಲ್ಲಿ ಉಚಿತ ಶಿಕ್ಷಣಕ್ಕೆ ಬೆಂಬಲ ಅವಶ್ಯ-ರೋಟರಿ ಗವರ್ನರ್ ಎಚ್.ಆರ್.ಕೇಶವ್
ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿಯಾಗಿ ರಾಹುಲ್ ಆಚಾರ್ಯ, ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷೆಯಾಗಿ ಜ್ಯೋತಿಕಾ ಅಧಿಕಾರ ಸ್ವೀಕಾರ
ಪುತ್ತೂರು:ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯಲ್ಲಿ ನಡೆದ ಪದಪ್ರದಾನ ಸಮಾರಂಭದಲ್ಲಿ ರೋಟರ್ಯಾಕ್ಟ್ ಜಿಲ್ಲೆಯ ರೋಟರ್ಯಾಕ್ಟ್ ಅಧ್ಯಕ್ಷ, ಕಾರ್ಯದರ್ಶಿಗಳಿಗೆ ತರಬೇತಿ, ಜಿಲ್ಲೆಯ ಪ್ರಶಸ್ತಿ ಪ್ರದಾನ ಸಮಾರಂಭ, ಜಿಲ್ಲಾ ಕೌನ್ಸಿಲ್ ಮೀಟ್ ಹಾಗೂ ಕೊನೆಯಲ್ಲಿ ಸಮಾರೋಪ ಜರಗಿತು.
ನಾಲ್ಕು ಕಂದಾಯ ಜಿಲ್ಲೆಗಳನ್ನೊಳಗೊಂಡ ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿಯಾಗಿ ರಾಹುಲ್ ಆಚಾರ್ಯ ಅಧಿಕಾರ ಸ್ವೀಕರಿಸಿದರು. ರೋಟರಿ ಗವರ್ನರ್ ಎಚ್.ಆರ್. ಕೇಶವ್ ಪದಪ್ರಧಾನ ನೆರವೇರಿಸಿದರು.
ಇದೇ ಸಂದರ್ಭ ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷೆಯಾಗಿ ಜ್ಯೋತಿಕಾ ಅಧಿಕಾರ ಸ್ವೀಕರಿಸಿದರು. ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಜೈರಾಜ್ ಭಂಡಾರಿ ಪದಪ್ರಧಾನ ನೆರವೇರಿಸಿದರು. ನಿರ್ಗಮಿತ ಅಧ್ಯಕ್ಷ ಗಣೇಶ್ ಎನ್. ಕಲ್ಲರ್ಪೆ ಅವರಿಂದ ಅಧಿಕಾರ ಹಸ್ತಾಂತರ ಮಾಡಲಾಯಿತು.
ಸಮಾರಂಭದಲ್ಲಿ ಮಾತನಾಡಿದ ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್. ಗವರ್ನರ್, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು. ಅಂತಹ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದಾದರೆ, ಅಂತಹವರಿಗೆ ಬೆಂಬಲ ನೀಡುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದರು.
ಡಿ.ಆರ್.ಸಿ.ಸಿ. ಮೊಹಮ್ಮದ್ ಅಸ್ಲಾಂ ಮಾತನಾಡಿ, ಈ ರೋಟರ್ಯಾಕ್ಟ್ ವರ್ಷದಲ್ಲಿ ಗ್ರಾಮಾಂತರ ಭಾಗಗಳಲ್ಲಿ 25ರಷ್ಟು ರೋಟರ್ಯಾಕ್ಟ್ ಕ್ಲಬ್ ಗಳನ್ನು ಜಿಲ್ಲಾ ಮಟ್ಟದಲ್ಲಿ ಮಾಡಬೇಕೆಂಬ ಅಪೇಕ್ಷೆ ಇದೆ. ಈ ಮೂಲಕ ಸಮಾಜಮುಖಿ ಕೆಲಸಗಳ ಜೊತೆಗೆ ಯುವಕರಲ್ಲಿ ನಾಯಕತ್ವದ ಗುಣ ಬೆಳೆಸಲು ಇದು ಸಹಕಾರಿಯಾಗಲಿದೆ ಎಂದರು.
ರೋಟರಿಯ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈ, ನಿರ್ಗಮಿತ ಡಿ.ಆರ್.ಆರ್. ನಿಖಿಲ್ ಆರ್.ಕೆ., ರೋಟರಿ ಕಾರ್ಯದರ್ಶಿ ಸುಜಿತ್ ಡಿ. ರೈ, ನಿರ್ಗಮಿತ ಡಿ.ಆರ್.ಸಿ.ಸಿ. ರತ್ನಾಕರ್ ರೈ, ಪುತ್ತೂರು ರೋಟರ್ಯಾಕ್ಟ್ ಕ್ಲಬ್ ನಿರ್ಗಮಿತ ಸಭಾಪತಿ ಪ್ರೇಮಾನಂದ್, ನಿರ್ಗಮಿತ ಸಭಾಪತಿ ಶ್ರೀಧರ್ ಆಚಾರ್ಯ ಕೆ., ನಿಯೋಜಿತ ಝಡ್.ಆರ್.ಆರ್. ನವೀನ್ ಚಂದ್ರ, ನಿರ್ಗಮಿತ ಕಾರ್ಯದರ್ಶಿ ಮಹೇಶ್ ಚಂದ್ರ ಮೊದಲಾದವರು ಉಪಸ್ಥಿತರಿದ್ದರು.
ತರಬೇತಿ ಕಾರ್ಯಕ್ರಮವನ್ನು ಪಿ.ಡಿ.ಆರ್.ಆರ್.ಗಳಾದ ಹಿತೈಷಿ, ಗಣೇಶ್ ಜಿ.ಟಿ. ಭಟ್, ಡೆರಿಲ್ ಡಿಸೋಜಾ, ಡಿ.ಆರ್.ಆರ್. ರಾಹುಲ್ ಆಚಾರ್ಯ ನಡೆಸಿಕೊಟ್ಟರು. ಇದೇ ಸಂದರ್ಭ ನಿರ್ಗಮಿತ ಅಧ್ಯಕ್ಷ ಗಣೇಶ್ ಎನ್. ಕಲ್ಲರ್ಪೆ, ನಿರ್ಗಮಿತ ಸಭಾಪತಿ ಶ್ರೀಧರ್ ಕೆ., ನಿರ್ಗಮಿತ ಕಾರ್ಯದರ್ಶಿ ಮಹೇಶ್ಚಂದ್ರ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷೆ ಜ್ಯೋತಿಕಾ ಸ್ವಾಗತಿಸಿ, ಜಿಲ್ಲಾ ಅಸೆಂಬ್ಲಿ ಛೇರ್’ಮೆನ್ ಸುಪ್ರೀತ್ ಮನೋರಾಜ್, ಕಾರ್ಯದರ್ಶಿ ಧನುಷಾ ವಂದಿಸಿದರು. ಜಿಲ್ಲಾ ಸಮುದಾಯ ಸೇವಾ ನಿರ್ದೇಶಕ ಶಶಿಧರ್ ಕೆ. ಮಾವಿನಕಟ್ಟೆ, ಐಪಿಪಿ ಹಾಗೂ ಪಬ್ಲಿಕೇಶನ್ಸ್ ಕೋ-ಎಡಿಟರ್ ಗಣೇಶ್ ಎನ್. ಕಲ್ಲರ್ಪೆ, ಜಿಲ್ಲಾ ದಿವ್ಯಾಂಗ ಚೇತನರ ವಿಭಾಗದ ನಿರ್ದೇಶಕ ಸುಬ್ರಮಣಿ ಕಾರ್ಯಕ್ರಮ ನಿರೂಪಿಸಿದರು.
ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿಗೆ ಪ್ರಶಸ್ತಿ:
46 ವರ್ಷ ಪೂರೈಸಿ ಮುನ್ನಡೆಯುತ್ತಿರುವ ರೋಟರ್ಯಾಕ್ಟ್ ಜಿಲ್ಲೆಯ ಪ್ರತಿಷ್ಠಿತ ಕ್ಲಬ್ಬುಗಳಲ್ಲಿ ಒಂದಾಗಿರುವ ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಸತತ 5ನೇ ಬಾರಿ ಜಿಲ್ಲಾ ಮಟ್ಟದ ಉತ್ತಮ ಕ್ಲಬ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ರೋಟರಿ ಸದಸ್ಯ, ರೋಟರ್ಯಾಕ್ಟ್ ಸಭಾಪತಿ ಶ್ರೀಧರ್ ಆಚಾರ್ಯ ಕೆ. ಅವರ ಮಾರ್ಗದರ್ಶನದಲ್ಲಿ ಯುವಕರ ನೇತೃತ್ವದಲ್ಲೇ ಮುನ್ನಡೆಯುತ್ತಿರುವ ರೋಟರ್ಯಾಕ್ಟ್ ಕ್ಲಬ್ ವರ್ಷಪೂರ್ತಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಈ ಎಲ್ಲಾ ಕಾರ್ಯಕ್ರಮಗಳು ರೋಟರಿ ಕಾರ್ಯಕ್ರಮಗಳಿಗೆ ಸಮನಾಗಿದ್ದುದರಿಂದ ಈ ಬಾರಿಯ ಬೆಸ್ಟ್ ಕ್ಲಬ್ ಪ್ರಶಸ್ತಿಯನ್ನು ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಪಡೆದುಕೊಂಡಿದೆ ಎಂದು 2022-23ನೇ ಸಾಲಿನ ಡಿ.ಆರ್.ಆರ್. ನಿಖಿಲ್ ಆರ್.ಕೆ. ಘೋಷಿಸಿದರು.
4 ಕಂದಾಯ ಜಿಲ್ಲೆಗಳನ್ನೊಳಗೊಂಡ ರೋಟರ್ಯಾಕ್ಟ್ ಜಿಲ್ಲೆಯ ಬೆಸ್ಟ್ ಅಧ್ಯಕ್ಷ ಪ್ರಶಸ್ತಿಯನ್ನು ಗಣೇಶ್ ಎನ್. ಕಲ್ಲರ್ಪೆ ಪಡೆದುಕೊಂಡರು. ಅದೇ ರೀತಿ ಬೆಸ್ಟ್ ಸೆಕ್ರೆಟರಿ ಪ್ರಶಸ್ತಿಯನ್ನು ಮಹೇಶ್ಚಂದ್ರ ಪಡೆದುಕೊಂಡರು. ಇದರೊಂದಿಗೆ ಕ್ಲಬ್ಬಿಗೆ ಬೆಸ್ಟ್ ಕಮ್ಯೂನಿಟಿ ಸರ್ವಿಸ್ ಪ್ರಶಸ್ತಿ, ದಿವ್ಯಾಂಗಚೇತನರ ಉತ್ತಮ ಕಾರ್ಯಕ್ರಮ ಪ್ರಶಸ್ತಿ ಲಭಿಸಿತು.