





ಪುತ್ತೂರು: ದರ್ಬೆ-ಪಾಂಗ್ಲಾಯಿ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 2023-24ನೇ ಸಾಲಿನ ಶಾಲಾ ನಾಯಕಿಯಾಗಿ ಹತ್ತನೇ ತರಗತಿ ವಿದ್ಯಾರ್ಥಿನಿ ಕೊಂಬೆಟ್ಟು ನಿವಾಸಿ ಏಂಜಲಿಕಾ ಮೆಲಾನಿ ಪಿಂಟೋರವರು ಆಯ್ಕೆಯಾಗಿದ್ದಾರೆ.


ಶಾಲೆಯಲ್ಲಿ ಇತ್ತೀಚೆಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಏಂಜಲಿಕಾ ಮೆಲಾನಿರವರು ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ.
ಏಂಜಲಿಕಾ ಮೆಲಾನಿ ಪಿಂಟೋರವರು ಓರ್ವೆ ಲೆದರ್ ಬಾಲ್ ಕ್ರಿಕೆಟ್ ಪಟುವಾಗಿದ್ದು, ಮಹಿಳಾ ದಿನಾಚರಣೆಯ ಪ್ರಯುಕ್ತ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಅಂಡರ್ 19 ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಪುತ್ತೂರು ತಂಡ ವಿಜಯಗಳಿಸುವ ಮುಖಾಂತರ ಏಂಜಲಿಕಾ ಮೆಲಾನಿರವರು ಅತ್ಯುತ್ತಮ ಬ್ಯಾಟರ್ ಎನಿಸಿಕೊಂಡಿರುತ್ತಾರೆ. ಆರು ಓವರಿನ ಆ ಪಂದ್ಯಾಟದಲ್ಲಿ ಏಂಜಲಿಕಾರವರು ಓಪನರ್ ಆಗಿ ಕಣಕ್ಕಿಳಿದು ಅಜೇಯ 35 ರನ್ ಗಳನ್ನು ಗಳಿಸಿದ್ದರು.







ಬ್ರಹ್ಮಾವರದಲ್ಲಿ ನಡೆದ ಆಹ್ವಾನಿತ ರಾಜ್ಯಮಟ್ಟದ ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಪಂದ್ಯಾಟದಲ್ಲಿ ಚಿಕ್ಕಮಗಳೂರು ಜಿಲ್ಲಾ ತಂಡದ ಎದುರು ಅಜೇಯ 52 ರನ್ ಬಾರಿಸುವ ಮೂಲಕ ಅತ್ಯುತ್ತಮ ಬ್ಯಾಟರ್ ಆಗಿ ಪ್ರಶಸ್ತಿ ಗಳಿಸಿರುತ್ತಾರೆ. ಏಂಜಲಿಕಾ ಮೆಲಾನಿರವರು ಬ್ಯಾಟರ್ ಹಾಗೂ ಬೌಲರ್ ಆಗಿದ್ದು ಪ್ರತಿಭಾವಂತ ಅಲ್ರೌಂಡರ್ ಎನಿಸಿಕೊಂಡಿರುವ ಇವರು ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಎಲ್ಯಾಸ್ ಪಿಂಟೋ ಹಾಗೂ ಸಂತ ಫಿಲೋಮಿನಾ ಪ್ರೌಢಶಾಲೆಯ ಶಿಕ್ಷಕಿಯಾಗಿರುವ ಶ್ರೀಮತಿ ಮೋಲಿ ಫೆರ್ನಾಂಡೀಸ್ ರವರ ಪುತ್ರಿ.









