





ಪುತ್ತೂರು: ಇಲ್ಲಿನ ಬನ್ನೂರಿನಲ್ಲಿ ಖಾಸಗಿ ಫೈನ್ ಒಂದರಲ್ಲಿ ಉದ್ಯೋಗಿಯಾಗಿರುವ ಸುಳ್ಯದ ಯುವತಿಯೋರ್ವರಿಗೆ ಹಲ್ಲೆ ಮಾಡಿ ಬೆದರಿಕೆಯೊಡ್ಡಿರುವ ಆರೋಪದಲ್ಲಿ ಸುಳ್ಯ ನಿವಾಸಿಯೋರ್ವನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.


ಸುಳ್ಯ ಬೆಟ್ಟಂಪಾಡಿಯ ಋತ್ವಿಕ್ ಆಚಾರಿ ಎಂಬವರ ವಿರುದ್ಧ ದೂರು ದಾಖಲಾಗಿದೆ. ಮೋಕ್ಷಿತಾ ಎಂಬವರು ದೂರು ನೀಡಿದವರು. ‘ಪ.ಪಂಗಡಕ್ಕೆ ಸೇರಿದ ತನಗೆ ವರ್ಷದ ಹಿಂದೆ ಋತ್ವಿಕ್ ಆಚಾರಿ ಅವರ ಪರಿಚಯವಾಗಿತ್ತು. ವಿನಾ ಕಾರಣ ಜಗಳವಾಡುತ್ತಿದ್ದುದರಿಂದ ಸುಮಾರು ಮೂರು ತಿಂಗಳಿನಿಂದ ಆತನ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದೆ.ನ.19ರಂದು ಆತ ಇನ್ಸ್ಟಾಗ್ರಾಮ್ ಮೂಲಕ ಕರೆ ಮಾಡಿ ನನ್ನನ್ನು ಪುತ್ತೂರು ರೈಲು ನಿಲ್ದಾಣದ ಬಳಿ ಬರ ಹೇಳಿದ್ದು ನಾವೀರ್ವರು ಕಾರಲ್ಲಿ ಹೋಗಿ ಊಟ ಮಾಡಿ ವಾಪಸ್ ರೈಲು ನಿಲ್ದಾಣದ ಬಳಿ ಹೋಗುತ್ತಿದ್ದಾಗ, ಭವಿತ್ ನನ್ನ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಸಪೋರ್ಟ್ ಮಾಡುತ್ತಿದ್ದಿ ಎಂದು ಹೇಳಿ ವಾಗ್ವಾದ ಮಾಡಿದ್ರು ನಾನು ನಿರಾಕರಿಸಿದರೂ ಕಾರಿನಿಂದ ಇಳಿಯಲು ಬಿಡದೆ ಎಳೆದಾಡಿ ನನ್ನ ಗಲ್ಲಕ್ಕೆ ಹಾಗೂ ಬಲಕೈಗೆ ಕಚ್ಚಿ, ನೀನು ಭವಿತ್ ಗೆ ಫೋನ್ ಮಾಡಿ ಋತ್ವಿಕ್ ಗೆ ಸಪೋರ್ಟ್ ಇದ್ದೇನೆ ಎಂದು ಹೇಳದಿದ್ದರೆ ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿರುತ್ತಾರೆ.ಕಾರು ಚಲಾಯಿಸುತ್ತಿದ್ದ ಋತ್ವಿಕ್ ಸ್ನೇಹಿತ ಕಿರಣ್ ಅವರು ಆ ಸಂದರ್ಭ ತಡೆದಿದ್ದರು. ನಾನು ಕಾರಿನಿಂದ ಇಳಿದು ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ಋತ್ವಿಕ್ ಕಾರನ್ನು ಸ್ಕೂಟರ್ ಗೆ ತಾಗಿಸಿಕೊಂಡು ಹೋಗಿದ್ದು ಸ್ಕೂಟರ್ ಚರಂಡಿಗೆ ಬಿದ್ದಿತ್ತು.ಅಲ್ಲಿಂದ ನಾನು ರಿಕ್ಷಾವೊಂದರಲ್ಲಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾಗಿ ಮೋಕ್ಷಿತಾ ಅವರು ದೂರಿನಲ್ಲಿ ತಿಳಿಸಿದ್ದಾರೆ.





ಈ ಬಗ್ಗೆ ಅವರು ಋತ್ವಿಕ್ ವಿರುದ್ದ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ನಾನು ಸಪೋರ್ಟ್ ಮಾಡಿದ್ದೇನೆಂಬ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾನು ಪುತ್ತೂರಿನಲ್ಲಿ ಕೆಲಸಕ್ಕೆ ಸೇರುವ ಸಮಯದಲ್ಲಿ ಸ್ನೇಹಿತ ಭವಿತ್ ಎಂಬವರ ಜೊತೆಯಲ್ಲಿ ಬಂದಿರುವ ಕಾರಣಕ್ಕೆ ಋತ್ವಿಕ್, ಭವಿತ್ ಅವರ ಮನೆಗೆ ಹೋಗಿ ಜಗಳದಾಡಿದ್ದು ಈ ಬಗ್ಗೆ ಅವರು ಋತ್ವಿಕ್ ವಿರುದ್ದ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ನಾನು ಸಪೋರ್ಟ್ ಮಾಡಿದ್ದೇನೆಂಬ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.







