ಬೆಟ್ಟಂಪಾಡಿ; ಸೌಪರ್ಣಿಕ ನೂತನ ಸ್ವಸಹಾಯ ಸಂಘ ಉದ್ಘಾಟನೆ

0

ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್  ಪುತ್ತೂರು ಇದರ ಮಾರ್ಗದರ್ಶನದಲ್ಲಿ ಬೆಟ್ಟಂಪಾಡಿ ವಲಯದ ದೂಮಡ್ಕ ಕಾರ್ಯಕ್ಷೇತ್ರದಲ್ಲಿ ಸೌಪರ್ಣಿಕ ಎಂಬ ನೂತನ ಸ್ವ ಸಹಾಯ ಸಂಘವನ್ನು ಜು.15 ರಂದು ಉದ್ಘಾಟಿಸಲಾಯಿತು. ಪ್ರಗತಿ ಬಂದು ಸ್ವ ಸಹಾಯ ಸಂಘಗಳ ದೂಮಡ್ಕ ಒಕ್ಕೂಟದ ಅಧ್ಯಕ್ಷ ಕೃಷ್ಣ ಜಿ ಉದ್ಘಾಟಿಸಿ ಶುಭ ಹಾರೈಸಿದರು.

ಬೆಟ್ಟಂಪಾಡಿ ವಲಯ ಮೇಲ್ವಿಚಾರಕ  ಚಂದ್ರಶೇಖರ್ ಸಂಘದ ನಿಯಮಾವಳಿಗಳ ಬಗ್ಗೆ ತಿಳಿಸಿದರು. ಸಂಘದ ನೂತನ ಪ್ರಬಂಧಕರಾಗಿ  ಲಕ್ಷ್ಮಿ, ಸಂಯೋಜಕರಾಗಿ  ಜಯಪ್ರಭ, ಕೋಶಾಧಿಕಾರಿಯಾಗಿ  ಅಶ್ವಿನಿ ಆಯ್ಕೆಯಾದರು. ಸಂಘದ ನಿರ್ಣಯ ಪುಸ್ತಕ ದಾಖಲಾತಿಯನ್ನು ಮೇಲ್ವಿಚಾರಕ ಚಂದ್ರಶೇಖರ ಹಸ್ತಾಂತರ ಮಾಡಿದರು.ಸೇವಾ ಪ್ರತಿನಿಧಿ ಲೀಲಾವತಿ ಕೆ ಉಪಸ್ಥಿತರಿದ್ದರು.ಸಂಘದಲ್ಲಿ  ಒಟ್ಟು 10 ಜನ ಸದಸ್ಯರಿದ್ದಾರೆ.

LEAVE A REPLY

Please enter your comment!
Please enter your name here