ಸಾಲ್ಮರ ಮದ್ರಸದಲ್ಲಿ ಮುಆಲ್ಲಿಮ್ ಡೇ ಆಚರಣೆ

0

ಪುತ್ತೂರು: ಸಾಲ್ಮರ ಮಿಸ್ಬಾಹುಲ್ ಹುದಾ ಮದ್ರಸ ಸಾಲ್ಮರ ಇದರ ಸಬಾಂಗಣದಲ್ಲಿ ಜು.16 ಮುಆಲ್ಲಿಮ್ ಡೇ ಆಚರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಎಸ್‌ ಎಂ ತಂಞಳ್ ಉಸ್ತಾದವರು ಪ್ರಾರ್ಥನೆ ನಡೆಸಿದರು‌.

ಸದರ್‌ಉಸ್ತಾದ್ ಬಶೀರ್ ದಾರಿಮಿಯವರು ಸ್ವಾಗತ ಮತ್ತು ಪ್ರಾಸ್ತಾವಿಕ ವಾಗಿ‌ ಮಾತನಾಡಿ ಈ ದಿನದ ಮಹತ್ವ ಮತ್ತು ಸಮಸ್ತವು ಹಿಂದುಳಿದ ಮುಅಲ್ಲಿಮರ ಕ್ಷೇಮಾಭಿವೃದ್ಧಿಗಾಗಿ ಏನೆಲ್ಲಾ ಕಾರ್ಯಕ್ರಮ ಇಟ್ಟುಕೊಂಡಿದೆ ಎಂದು ಸಂಕ್ಷಿಪ್ತವಾಗಿ ವಿವರಿಸಿದರು.
ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ ಸಯ್ಯದ್ ಮಲೆ ಜುಮಾ ಮಸ್ಜೀದ್ ನ ಅಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ ರವರು ಮಾತನಾಡಿ ಪೋಷಕರು ಮತ್ತು ಉಸ್ತಾದರ ಮದ್ಯೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಲ್ಲಿ ವಿದ್ಯಾರ್ಥಿಗಳ ಪ್ರಗತಿಗೆ ಪೂರಕವಾಗುತ್ತದೆ. ಆ ನಿಟ್ಟಿನಲ್ಲಿ ಮದ್ರಸ ಹಾಗೂ ಮುಅಲ್ಲಿಮರ ಕಷ್ಟ ಸುಖಗಳಿಗೆ ಪೋಷಕರು ಸ್ಪಂದಿಸುವವರಾಗಬೇಕು ಎಂದರು.
ಸಯ್ಯದ್ ಮಲೆ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಸಾಲ್ಮರ ರವರು ಕಾರ್ಯಕ್ರಮ ಕ್ಕೆ ಶುಭವನ್ನು ಹಾರೈಸಿದರು. ಇದೇ ಸಂದರದಭದಲ್ಲಿ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಂದ ಬುರ್ದಾ ಮಜ್ಲಿಸ್ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರ.ಕಾರ್ಯದರ್ಶಿ ಹಸನ್ ಮುದ್ದೋಡಿ, ಕಾರ್ಯದರ್ಶಿ ಇಲ್ಯಾಸ್ ತಾರಿಗುಡ್ಡೆ ಮತ್ತು ಸದಸ್ಯರಾದ ರಹಿಮಾನ್ ಸಾಲ್ಮರ,ಅಬ್ದುಲ್ ರಜಾಕ್ ತಾರಿಗುಡ್ಡೆ ಮತ್ತು ಹಲವು ಪೋಷಕರು ,ಮದ್ರಸಾದ ಉಸ್ತಾದರುಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here