![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ವಿಟ್ಲ: ಬಂಟ್ವಾಳ ತಾಲೂಕು ಗಡಿಯಾರದಲ್ಲಿರುವ ಬುಡೋಳಿ ವಿಸ್ಡಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗ್ರೀನ್ ಡೇ ಆಚರಿಸಲಾಯಿತು. ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಹಾಗೂ ಹಸಿರು ಉತ್ಪತ್ತಿಯ ಪ್ರಯೋಜನದ ಬಗ್ಗೆ ಅರಿವು ಮೂಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶಾಲಾ ಮಕ್ಕಳು ತಮ್ಮ ಮನೆಗಳಿಂದ ವಿವಿಧ ಗಿಡಗಳನ್ನು ತಂದು ಶಾಲಾ ಪರಿಸರದಲ್ಲಿ ನೆಟ್ಟು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಔಷಧೀಯ ಗಿಡಗಳನ್ನು ನೆಟ್ಟು ಅವುಗಳ ಮಹತ್ವವನ್ನು ತಿಳಿಸಲಾಯಿತು ಪೂರ್ತಿ ಶಾಲೆಯು ಹಸಿರಿನಿಂದ ಕಂಗೊಳಿಸುತ್ತಿತ್ತು ಮಕ್ಕಳು ಹಸಿರು ವಸ್ತ್ರ ಧರಿಸುವುದರ ಮೂಲಕ ಈ ದಿನವನ್ನು ಆಚರಿಸಿದರು ಶಾಲೆ ಪ್ರಾಂಶುಪಾಲರಾದ ವಿಸ್ಮಿತ ಬಂಗೇರ ಕುರಮಜಲುಗುತ್ತು ಮತ್ತು ಇಕೋ ಕ್ಲಬ್ ಸಂಯೋಜಕರಾದ ಫಾತಿಮತ್ ಸಿನಾನ, ಫರ್ ಹತ್ ಶಬಾನ ಮೊದಲಾದವರು ಉಪಸ್ಥಿತರಿದ್ದರು.
![](https://puttur.suddinews.com/wp-content/uploads/2023/07/9ee418dd-7f89-408e-a4ec-ad7d141c0247.jpg)
![](https://puttur.suddinews.com/wp-content/uploads/2023/07/de2d4c6a-b155-4733-b967-3718da919f77.jpg)
![](https://puttur.suddinews.com/wp-content/uploads/2023/07/b488825c-2b44-48a8-a157-ca934bbe79c7.jpg)