ನೂತನ ಪದಾಧಿಕಾರಿಗಳ ಆಯ್ಕೆ-ವಿವಿಧ ಉಪ ಸಮಿತಿಗಳ ರಚನೆ
ಪುತ್ತೂರು: ದಶಮಾನೋತ್ಸವ ಸಂಭ್ರಮದ ಹೊಸ್ತಿಲಲ್ಲಿರುವ ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಪ್ರಥಮ ಸಭೆ ಕಳೆದ ಸಾಲಿನ ಅಧ್ಯಕ್ಷೆ ರತಿ ಕೊರಗಪ್ಪ ರೈಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ2023-24ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು. ದಶಮಾನೋತ್ಸವದ ಅಂಗವಾಗಿ ಹಲವಾರು ಉಪಸಮಿತಿಗಳನ್ನು ಕೂಡಾ ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಸರೋಜಿನಿ ವಿ ನಾಗಪ್ಪಯ್ಯ ಈಶ್ವರಮಂಗಲ, ಅಧ್ಯಕ್ಷರಾಗಿ ಅಮಿತಾ ಸೀತಾರಾಮ ಮನೋಳಿತ್ತಾಯ ಪಂಚೋಡಿ, ಉಪಾಧ್ಯಕ್ಷರಾಗಿ ಮೋಹನಾಂಗಿ ಬೀಜಂತಡ್ಕ ಹಾಗೂ ಸುಮತಿ ಗಣೇಶ್ ರೈ ಪಿಲಿಪಂಜರ, ಪ್ರಧಾನಕಾರ್ಯದರ್ಶಿಯಾಗಿ ರತಿ ರಮೇಶ್ ಪೂಜಾರಿ ಮುಂಡ್ಯ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಗಳಾಗಿ ಗಾಯತ್ರಿ ಚಂದ್ರಶೇಖರ ಕತ್ರಿಬೈಲು, ಅರುಣ ಸತೀಶ್ ಶೆಟ್ಟಿ ಮುಂಡ್ಯ, ಸಂಘಟನಾ ಕಾರ್ಯದರ್ಶಿಯಾಗಿ ಅರುಣ ನಾರಾಯಣ ಮೆಣಸಿನಕಾನ, ಕೋಶಾಧಿಕಾರಿ ಕೋಮಲ ಕೃಷ್ಣಪ್ಪ ಗೌಡ ನೀರಳಿಕೆ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ರವಿಕಿರಣ್ ಶೆಟ್ಟಿ ಬೆದ್ರಾಡಿ, ರವೀಂದ್ರ ಮಾಣಿಲತ್ತಾಯ(ಪ್ರಧಾನ ಅರ್ಚಕರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ) ಶಿವರಾಮ ಪಿ ಈಶ್ವರಮಂಗಲ, ಬಾಲಕೃಷ್ಣ ಆಳ್ವ ಅಲೆಪ್ಪಾಡಿ, ಸಂದೀಪ ಕಾರಂತ ಈಶ್ವರಮಂಗಲ, ಜತ್ತಪ್ಪ ಗೌಡ ಕೊಂಕಣಿಗುಂಡಿ, ಸುಭಾಸ್‌ಚಂದ್ರ ರೈ ಮೈರೋಳು, ರಾಮ ಮೇನಾಲ, ವಸಂತಿ ಪಟ್ರೋಡಿ, ಶಂಕರ ಪಟ್ರೋಡಿ ಆಯ್ಕೆಯಾದರು.
ಸ್ವಾಗತ ಸಮಿತಿ ಅಧ್ಯಕ್ಷರಾಗಿ ರವಿಕಿರಣ್ ಶೆಟ್ಟಿ ಬೆದ್ರಾಡಿ ಆಯ್ಕೆಯಾದರು. ಸದಸ್ಯರಾಗಿ ವಿ ನಾಗಪ್ಪಯ್ಯ ಈಶ್ವರಮಂಗಲ, ಪ್ರೇಮ ಜೆ ರೈ ಈಶ್ವರಮಂಗಲ, ವೇದಾವತಿ ಎಸ್ ರೈ, ದೀಪಿಕಾ ರೈ ಮರಕ್ಕಡ, ರಮೇಶ್ ಆಳ್ವ ಅಲೆಪ್ಪಾಡಿ, ರೋಹಿಣಿ ಶಿವರಾಮ ಕತ್ರಿಬೈಲು, ಮಾಲತಿ ಪಟ್ಲಡ್ಕ ಆಯ್ಕೆಯಾದರು. ವೇದಿಕೆ ಮತ್ತು ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾಗಿ ರಾಮ ಮೇನಾಲ ಆಯ್ಕೆಯಾದರು. ಸದಸ್ಯರಾಗಿ ಸವಿತಾ ರೈ, ಶೋಭಾ ಅದಿಂಜ, ಭವ್ಯ ರಾಜೇಶ್, ಶೇಖರ ಪೂಜಾರಿ ಮುಂಡ್ಯ, ದೇವಿ ಪ್ರಕಾಶ್ ಶೆಟ್ಟಿ ಕುತ್ಯಾಳ ಹಾಗೂ ರಮೇಶ್ ಶಿಲಾಲ್ ಆಯ್ಕೆಯಾದರು. ಆಹಾರ ಸಮಿತಿ ಅಧ್ಯಕ್ಷರಾಗಿ ರತಿ ಕೊರಗಪ್ಪ ರೈ ಆಯ್ಕೆಯಾದರು. ಸದಸ್ಯರಾಗಿ ಆನಂದ ಗೌಡ ಕೆಮ್ಮತ್ತಡ್ಕ, ಶರತ್ ರೈ ಕರ್ನೂರು, ಜಯಂತ್ ರೈ ಮೇನಾಲ, ಪ್ರೇಮ ಮಾಣಿಲತ್ತಾಯ, ಸುಪ್ರಭ ಸುಬ್ರಹ್ಮಣ್ಯರಾವ್, ವೇದಾವತಿ ಶೇಖರ ಪೂಜಾರಿ, ಉಷಾ ಕಲ್ಲಾಜೆ, ರಮೇಶ್ ಪೂಜಾರಿ ಮುಂಡ್ಯ, ಬಾಲಕೃಷ್ಣ ರೈ ಮೇನಾಲ, ಕೊರಗಪ್ಪ ರೈ ಸುರುಳಿಮೂಲೆ, ಜಯರಾಜ್ ಕತ್ರಿಬೈಲು, ಚಂದ್ರಶೇಖರ ಕತ್ರಿಬೈಲು, ಯತೀಶ್ ಹಿರಿಯಾನ, ಜಯಾನಂದ ಕೋರಿಗದ್ದೆ, ಜಯಚಂದ್ರ ಸೇರಾಜೆ,ರಾಮದಾಸ್ ತಲೆಬೈಲು ಆಯ್ಕೆಯಾದರು.ಅಲಂಕಾರ ಮತ್ತು ಸ್ವಚ್ಛತಾ ಸಮಿತಿ ಅಧ್ಯಕ್ಷರಾಗಿ ಕಸ್ತೂರಿ ರೈ ಮೇನಾಲ ಆಯ್ಕೆಯಾದರು. ಸದಸ್ಯರಾಗಿ ಅರ್ಚನಾ ರವಿಕಿರಣ್ ಶೆಟ್ಟಿ ಬೆದ್ರಾಡಿ, ವಿನೋದಾ ರೈ, ರವೀಂದ್ರ ಅದಿಂಜ, ಸೇವಂತಿ ಮಡ್ಯಲಮಜಲು, ಪ್ರಫುಲ್ಲ ರೈ ಮದಕ, ಸಂಜೀವ ರೈ ಬೆಡಿಗುಡ್ಡೆ, ದೇವಿಪ್ರಶಾಂತಿ ಅಡ್ಡಂತಡ್ಕ, ರಾಜೀವಿ ಚಿಮಿಣುಗುಡ್ಡೆ, ರವಿ ಹೊಸಂಗಡಿ ಆಯ್ಕೆಯಾದರು.