ಪುತ್ತೂರು: ರೋಟರಿ ಅಂತರ್ರಾಷ್ಟ್ರೀಯ ಜಿಲ್ಲೆ 3181 ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರಗಿದೆ.
ನೂತನ ಅಧ್ಯಕ್ಷರಾಗಿ ಸುಂದರ್ ರೈ ಬಲ್ಕಾಡಿ, ಕಾರ್ಯದರ್ಶಿಯಾಗಿ ಯಶ್ವಂತ ಗೌಡ ಕಾಂತಿಲ, ಕೋಶಾಧಿಕಾರಿಯಾಗಿ ಪ್ರವೀಣ್ ಕುಮಾರ್ ರೈ ಸಾಂತ್ಯ ಆಯ್ಕೆಯಾಗಿದ್ದಾರೆ. ಉಳಿದಂತೆ ಉಪಾಧ್ಯಕ್ಷರಾಗಿ ಆನಂದ ಮೂವಪ್ಪು, ಜೊತೆ ಕಾರ್ಯದರ್ಶಿಯಾಗಿ ಸುರೇಂದ್ರ ಆಚಾರ್ಯ, ಸಾರ್ಜಂಟ್ ಎಟ್ ಆಮ್ಸ್೯ ದಿನೇಶ್ ಆಚಾರ್ಯ, ಬುಲೆಟಿನ್ ಎಡಿಟರ್ ಮಹೇಶ್ ಕೆ.ಸವಣೂರು, ಕ್ಲಬ್ ನಿರ್ದೇಶಕರಾಗಿ ರಾಮಣ್ಣ ರೈ ಕೈಕಾರ, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಸಂಧ್ಯಾರಾಣಿ ಬೈಲಾಡಿ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ದೀಪಕ್ ಬೊಳ್ವಾರು, ಇಂಟರ್ ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ಸುಭಾಶ್ ರೈ ಬೆಳ್ಳಿಪ್ಪಾಡಿ, ಯೂತ್ ಸರ್ವಿಸ್ ನಿರ್ದೇಶಕರಾಗಿ ವಿಜಯ್ ಡಿ’ಸೋಜ, ಚೇರ್ ಮ್ಯಾನ್ ಗಳಾಗಿ ನಾರಾಯಣ ರೈ ಕೆ.ಪಿ(ಪಲ್ಸ್ ಪೋಲಿಯೊ), ರೋಶನ್ ರೈ ಬನ್ನೂರು(ಟಿ.ಆರ್.ಎಫ್), ದೀಪಕ್ ಮಿನೇಜಸ್(ಜಿಲ್ಲಾ ಪ್ರಾಜೆಕ್ಟ್), ಶೀನಪ್ಪ ಪೂಜಾರಿ(ಸದಸ್ಯತನ ಅಭಿವೃದ್ಧಿ), ಚಂದ್ತಶೇಖರ ಮೂರ್ತಿ(ಟೀಚ್), ಜಯಂತ್ ಶೆಟ್ಟಿ ಕಂಬಳದಡ್ಕ(ವಿನ್ಸ್), ಮೋಹನ್ ಗೌಡ ನೆಲಪ್ಪಾಲ್(ವೆಬ್), ಸೀತಾರಾಮ ಗೌಡ(ಸಿ.ಎಲ್.ಸಿ.ಸಿ), ಮನೋಹರ್ ಕುಮಾರ್(ವಾಟರ್ & ಸ್ಯಾನಿಟೇಶನ್), ಸುನಿಲ್ ಜಾಧವ್(ಪಬ್ಲಿಕ್ ಇಮೇಜ್)ರವರು ಆಯ್ಕೆಯಾಗಿರುತ್ತಾರೆ.
ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸುಂದರ್ ರೈ ಬಲ್ಕಾಡಿರವರು ಕೃಷಿ ಇಲಾಖೆ ಮಡಿಕೇರಿ ಇಲ್ಲಿ ಕರ್ತವ್ಯ ನಿರ್ವಹಿಸಿ ಇಪ್ಪತ್ತು ವರ್ಷಗಳ ಹಿಂದೆ ಸ್ವಯಂ ನಿವೃತ್ತಿ ಹೊಂದಿದ್ದರು. ಪ್ರಸ್ತುತ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಕೋರ್ಟ್ ರಸ್ತೆ ಪುತ್ತೂರು ಸೆಂಟರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಯಶವಂತ ಗೌಡ ಕಾಂತಿಲರವರು ಪುತ್ತೂರು ಹಾಗೂ ಉಡುಪಿಯಲ್ಲಿ ವಕೀಲ ವೃತ್ತಿ ನಿರ್ವಹಿಸುತ್ತಿದ್ದು ಪುತ್ತೂರಿನ ವಕೀಲರ ಸಂಘದ ಸದಸ್ಯರಾಗಿದ್ದಾರೆ ಜೊತೆಗೆ ಸಹಕಾರ ಸಂಘಗಳ ಗೌರವ ಮಧ್ಯಸ್ತಗಾರರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ಪ್ರವೀಣ್ ಕುಮಾರ್ ರೈ ಸಾಂತ್ಯರವರು ವಾಸವಿ ಹೆಲ್ತ್ ಕೇರ್ ಪ್ರಾಡಕ್ಟ್ ನಲ್ಲಿ ಟೆರಿಟರಿ ಸೇಲ್ಸ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ರೋಟರಿ ಕ್ಲಬ್ ಸ್ವರ್ಣದ ಪ್ರಕಟಣೆ ತಿಳಿಸಿದೆ
ಜು.20 ರಂದು ಪದಪ್ರದಾನ..
ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಜು.20 ರಂದು ಸಂಜೆ ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ನಡೆಯಲಿದ್ದು, ಪದಪ್ರದಾನ ಅಧಿಕಾರಿಯಾಗಿ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿರವರು ನೂತನ ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ರೋಟರಿ 3181 ಜಿಲ್ಲಾ ಸಮಿತಿಯ ಮೆಂಬರ್ ಶಿಪ್ ಓರಿಯೆಂಟೇಶನ್ ಚೆಯರ್ ಮ್ಯಾನ್ ಬಿ.ಕೆ ರವೀಂದ್ರ ರೈ, ಗೌರವ ಅತಿಥಿಗಳಾಗಿ ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ ಮಿತ್ರಾಂಪಾಡಿ, ವಲಯ ಸೇನಾನಿ ಕೆ.ಭಾಸ್ಕರ ಕೋಡಿಂಬಾಳರವರು ಉಪಸ್ಥಿತಲಿರುವರು.
Home ಇತ್ತೀಚಿನ ಸುದ್ದಿಗಳು ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ : ಸುಂದರ್ ರೈ, ಕಾರ್ಯದರ್ಶಿ: ಯಶವಂತ ಗೌಡ, ಕೋಶಾಧಿಕಾರಿ:...