ಪೆರಾಬೆ: ಜೇಸಿಐ ಭಾರತದ ಪ್ರತಿಷ್ಠಿತ ಘಟಕವಾದ ಜೇಸಿಐ ಆಲಂಕಾರು ಘಟಕವು ಕುಂತೂರಿನಲ್ಲಿ ಸುಮಾರು 1.25 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವ 2ನೇ ಪ್ರಯಾಣಿಕ ಬಸ್ ತಂಗುದಾಣವನ್ನು ಜೇಸಿಐ ಭಾರತದ ರಾಷ್ಟ್ರಾಧ್ಯಕ್ಷ ಕಾರ್ತಿಕೇಯನ್ರವರು ಉದ್ಘಾಟಿಸಿದರು.
ಜೇಸಿಐ ಆಲಂಕಾರು ಘಟಕಕ್ಕೆ ಅಧಿಕೃತ ಭೇಟಿ ನೀಡಿದ ರಾಷ್ಟ್ರಾಧ್ಯಕ್ಷ ಕಾರ್ತಿಕೇಯನ್ರವರು ಮಾತನಾಡಿ, ದಿನಂಪ್ರತಿ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಮಳೆ, ಬಿಸಿಲಿಗೆ ಬಸ್ ಹಾಗೂ ಇತರೇ ವಾಹನಗಳಿಗೆ ರಸ್ತೆಯಲ್ಲಿಯೇ ನಿಂತು ಕಾಯುತ್ತಿರುವುದನ್ನು ಮನಗಂಡು ಜೇಸಿಐ ಆಲಂಕಾರು ದಾನಿಗಳ ಸಹಕಾರದಿಂದ ಸುಂದರ ಬಸ್ ತುಂಗುದಾಣ ನಿರ್ಮಾಣ ಮಾಡಿರುವುದು ಅತ್ಯುತ್ತಮ ಕಾರ್ಯ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಜೇಸಿಐ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿಯವರು ಮಾತನಾಡಿ, ಜೇಸಿಐ ಆಲಂಕಾರು ಘಟಕವು ಕಳೆದ 14 ವರ್ಷಗಳಿಂದ ಈ ಪರಿಸರದಲ್ಲಿ ಅದ್ಬುತ ನಾಯಕರನ್ನು ಸೃಷ್ಟಿಸಿದ್ದು ಈ ವರ್ಷದ ಬಸ್ ತಂಗುದಾಣ ಅವರ ಸಾಮಾಜಿಕ ಕಳಕಳಿಗೆ ಉತ್ತಮ ಸಾಕ್ಷಿ ಎಂದರು.
ಬಸ್ ತಂಗುದಾನಕ್ಕೆ ಸಹಕರಿಸಿದ ದಾನಿಗಳಾದ ಸೀತಾರಾಮ ರೈ ಕೇವಳ ದಂಪತಿ, ಕುಂತೂರು ಶ್ರೀ ಶಾರದಾ ಭಜನಾ ಮಂದಿರ, ಮಮತಾ ಕಮಲಾಕ್ಷ ಶೆಟ್ಟಿ ಅಂಬರಾಜೆ, ಗೆಳೆಯರ ಬಳಗ ದೇವರುಗಡ್ಡೆ, ಸುರೇಶ್ ಕುಂಡಡ್ಕ, ಜನಾರ್ದನ ಬಿ.ಎಲ್., ಪ್ರವೀಣ್ ಆಳ್ವ, ನವೀನ್ ಮಾಯಿಲ್ಗ, ಪ್ರದೀಪ್ ರೈ ಮನವಳಿಕೆ, ಪ್ರದೀಪ್ ಬಾಕಿಲ, ಹೇಮಲತಾ ಪ್ರದೀಪ್, ತೋಷಿತ್ ರೈ, ಗುರುಕಿರಣ್ ಶೆಟ್ಟಿ, ಅಜಿತ್ಕುಮಾರ್ ರೈ, ಲಕ್ಷ್ಮೀನಾರಾಯಣ ಅಲೆಪ್ಪಾಡಿ, ಸ್ಥಳ ಸಹಕಾರ ನೀಡಿದ ಕುಂತೂರು ಎ & ಬಿ ಜುಮಾ ಮಸೀದಿಯಯವರನ್ನು ಜೆಸಿಐ ರಾಷ್ಟ್ರಾಧ್ಯಕ್ಷರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಪೆರಾಬೆ ಗ್ರಾ.ಪಂ.ಅಧ್ಯಕ್ಷ ಮೋಹನ್ದಾಸ್ ರೈ ಪರಾರಿ, ವಲಯ ಉಪಾಧ್ಯಕ್ಷ ಅಜಿತ್ಕುಮಾರ್ ರೈ, ಶಾರದಾ ಭಜನಾ ಮಂಡಳಿಯ ಅಧ್ಯಕ್ಷ ಕುಶಾಲಪ್ಪ ಗೌಡ ಅನ್ನಡ್ಕ, ಜನಾರ್ದನ ಶೆಟ್ಟಿ ಕಲ್ಲಡ್ಕ, ಹಸೈನಾರ್ ಹಾಜಿ ಚಾಲ್ಕರೆ, ಆಶಾ, ಪ್ರದೀಪ್ ಬಾಕಿಲ, ಸೀತಾರಾಮ ಶೆಟ್ಟಿ ಕೇವಳ, ಜೇಸಿಐ ವಲಯ ಅಧಿಕಾರಿಗಳು, ಗ್ರಾ.ಪಂ.ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಆಲಂಕಾರು ಜೆಸಿಐ ಅಧ್ಯಕ್ಷ ಲಕ್ಷ್ಮೀನಾರಾಯಣ ಅಲೆಪ್ಪಾಡಿ ಸ್ವಾಗತಿಸಿ, ಕಾರ್ಯದರ್ಶಿ ಮಹೇಶ್ ಪಾಟಾಳಿ ವಂದಿಸಿದರು. ಈ ಸಂದರ್ಭದಲ್ಲಿ ಜೇಸಿಐ ರಾಷ್ಟ್ರಾಧ್ಯಕ್ಷ ಕಾರ್ತಿಕೇಯನ್ರನ್ನು ಆಲಂಕಾರು ಜೆಸಿಐ ಘಟಕದ ವತಿಯಿಂದ ಸನ್ಮಾನಿಸಲಾಯಿತು.