ಈಶ್ವರಮಂಗಲ: ಹನುಮಗಿರಿಯ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜು.20ರಂದು ʼತಾರಸಿ ತೋಟʼ ಮತ್ತು ʼಕೈತೋಟʼ ಎಂಬ ಕಾರ್ಯಕ್ರಮ ನಡೆಯಿತು.
ಗಜಾನನ ಆಂಗ್ಲ ಮಾಧ್ಯಮ ಶಾಲೆಯ ಮಾತೃಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವೇಕ ಸಂಜೀವಿನಿ ಯೋಜನೆಯಡಿಯಲ್ಲಿ ನಡೆದ ಈ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಣ ಇಲಾಖೆ ಉದ್ಯೋಗಿ ಮತ್ತು ತಾರಸಿ ಕೃಷಿಕರು ಪಡ್ಡಂಬೈಲು ಕೃಷ್ಣ ಗೌಡ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ವೇಳೆ ಅವರು ತಾರಸಿ ತೋಟದ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು. ಮಾತ್ರವಲ್ಲದೇ ತಮ್ಮದೇ ಮನೆಯ ತಾರಸಿಯಲ್ಲಿ ಬೆಳೆದ ಕೈತೋಟದ ವಿಡಿಯೋ ಚಿತ್ರಣವನ್ನು ವಿದ್ಯಾರ್ಥಿಗಳ ಮುಂದೆ ಪ್ರಸ್ತುತಿ ಪಡಿಸಿದರು. ಅತಿಥಿಯಾಗಿ ಆಗಮಿಸಿದ್ದ ಸುಳ್ಯ ಸುದ್ದಿ ಪತ್ರಿಕೆಯ ಯಶ್ವಿತ್ ಕೈತೋಟ ಮಾಡುವುದರ ಉಪಯುಕ್ತತೆ ಮತ್ತು ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು.
ಗಜಾನನ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಶಿವರಾಮ ಪಿ, ಪ್ರಾಂಶುಪಾಲ ಕೆ ಶಾಮಣ್ಣ, ಮುಖ್ಯಗುರು ಅಮರನಾಥ ಬಿ ಪಿ, ಮಂಗಳೂರು ಒಮೇಗಾ ಆಸ್ಪತ್ರೆಯ ಸಿಬ್ಬಂದಿ ಆಶೋಕ್ ಕುಮಾರ್ ಸೇರಿದಂತೆ ಶಾಲಾ ವಿದ್ಯಾರ್ಥಿಗಳ ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ತನಿಷ ಹೆಗ್ಡೆ, ಶ್ರಾವ್ಯ, ವೀಕ್ಷಾ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಅನುಷ್ಕಾ ಸ್ವಾಗತಿಸಿದರು. ಶರಜ್ ಪಿ ವಂದಿಸಿ, ಪ್ರೀತಿಕಾ ಕಾರ್ಯಕ್ರಮವನ್ನು ನಿರೂಪಿಸಿದರು.