ವಿಟ್ಲ: ಸುನ್ನಿ ಮೇನೆಜ್ಮೆಂಟ್ ಅಸೋಸಿಯೇಶನ್ ಕರ್ನಾಟಕ ರಾಜ್ಯ ಎಸ್ ಎಂ ಎ ವಿಟ್ಲ ಝೋನಲ್ ಸಮಿತಿ ವತಿಯಿಂದ ಸಂಸ್ಕೃತಿಯ ಉಳಿವಿಗಾಗಿ ಅಭಿಯಾನದ ಅಂಗವಾಗಿ ಹಮ್ಮಿಕೊಂಡ ಮದರಸ ವಿದ್ಯಾರ್ಥಿ ಸಂಗಮ ಒಕ್ಕೆತ್ತೂರು ನೂರುಲ್ ಹುದಾ ಸಭಾಭವನದಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್ ಎಂ ಎ ರಾಜ್ಯ ಕೋಶಾಧಿಕಾರಿ ಹಾಜಿ ಹಮೀದ್ ಕೊಡುಂಗಾಯಿ ಇವತ್ತಿನ ವಿದ್ಯಾರ್ಥಿಗಳು ಮುಂದಿನ ಭವಿಷ್ಯದ ನಾಯಕರು, ಆದ್ದರಿಂದ ಇವತ್ತಿನ ಇಂಟರ್ನೆಟ್ ಕಾಲದಲ್ಲಿ ಜೀವಿಸುತ್ತಿರುವ ನಾವು ಮೊಬೈಲ್ ಬಳಸುವುದನ್ನು ಕಡಿಮೆ ಮಾಡಿ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು.ಈ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು ವಿದ್ಯಾರ್ಥಿಗಳು ಉತ್ತಮ ವ್ಯಕ್ತಿಗಳೊಂದಿಗೆ ಕೈಜೋಡಿಸಿ ಉತ್ತಮ ಸಂಸ್ಕಾರವನ್ನು ಬೆಳೆಸಬೇಕು. ಇದು ನಮ್ಮ ಪ್ರವಾದಿಯವರ ಆದರ್ಶವಾಗಿದೆ. ಇದನ್ನು ನಾವು ಮೈಗೂಡಿಸಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ವಿದ್ಯಾರ್ಥಿಗಳಿಂದ ಸಾಧ್ಯ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಎಂ ಎ ಝೋನಲ್ ಸಮಿತಿ ಅಧ್ಯಕ್ಷ ಅಬ್ದುಲ್ ರಹ್ಮಾನ್ ಹಾಜಿ ಅರಿಯಡ್ಕ ವಹಿಸಿದ್ದರು.
ವಿಷಯ ಮಂಡನೆ ನಡೆಸಿದ ಖ್ಯಾತ ತರಬೇತುದಾರ ಟ್ಯಾಲೆಂಟ್ ರಫೀಕ್ ಮಾಸ್ಟರ್ ಮಾತನಾಡಿ ವಿದ್ಯಾರ್ಥಿಗಳು ಸಂಸ್ಕೃತಿಯ ಉಳಿವಿಗಾಗಿ ವಿದ್ಯಾಭ್ಯಾಸಕ್ಕೆ ಒತ್ತು ಕೊಟ್ಟು ದುಷ್ಟ ಚಟಕ್ಕೆ ಬಲಿಯಾಗದೆ ಸಂಸ್ಕಾರ ಜೀವನ ಅಳವಡಿಸುವುದರ ಮೂಲಕ ಮಾದರಿ ಯೋಗ್ಯ ಜೀವನ ನಡೆಸಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ವಿಟ್ಲ ಠಾಣಾ ಪೊಲೀಸ್ ಅಧಿಕಾರಿ ದಿವ್ಯ ಗಣೇಶ್ ಕಾರ್ಯಕ್ರಮಕ್ಕೆ ಶುಭಾ ಹಾರೈಸಿದರು.ಕಾರ್ಯಕ್ರಮದಲ್ಲಿ ಒಕ್ಕೆತ್ತೂರು ಮುದರ್ರಿಸ್ ರಫೀಕ್ ಅಹ್ಸನಿ
ದುವಾ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಎಸ್ ಎಂ ಎ ವಿಟ್ಲ ಝೋನಲ್ ಪ್ರಧಾನಕಾರ್ಯದರ್ಶಿ ಕಾಸಿಂ ಸಖಾಫಿ ಪ್ರಾಸ್ತಾವಿಕ ಭಾಷಣ ಮಾಡಿದರು. ಹಲವು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾತ್ ಈಸ್ಟ್ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಅಬ್ದುಲ್ ರಹಮಾನ್ ಹಾಜಿ ಅರಿಯಡ್ಕ ಅವರನ್ನು ಎಸ್ ಎಂ ಎ ವಿಟ್ಲ
ಝೋನಲ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ ಎಂ ಎ ಝೊನಲ್ ಸಂಘಟನಾ ಕಾರ್ಯದರ್ಶಿ ಹಾರಿಸ್ ಮದನಿ ಶಾಂತಿನಗರ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಪುತ್ತೂರು ಎಸ್ ಜೆ ಎಂ ಅಧ್ಯಕ್ಷ ಶರೀಫ್ ಸಖಾಫಿ ಎಸ್ ಜೆಎಂ ಕನ್ಯಾನ ಅಧ್ಯಕ್ಷ ಎಂಬಿ ಸಖಾಫಿ ಎಸ್ ಜೆಎಂ ಮಾಣಿ ಅಧ್ಯಕ್ಷ ಯುನುಸ್ ಸಅದಿ ಎಸ್ ಜೆಎಂ ವಿಟ್ಲ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಪುರ್ಖಾನಿ ವಿಟ್ಲ ಎಸ್ಎಂಎ ವಿಟ್ಲ ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಸಖಾಫಿ ಒಕ್ಕೆತ್ತೂರು, ಎಸ್ಎಂಎ ಅಧ್ಯಕ್ಷ ಎಸ್ ಎಂ ಹಕೀಂ ಎಸ್ಎಂಎ ಕನ್ಯಾನ ಅಧ್ಯಕ್ಷ ಇಸ್ಮಾಯಿಲ್ ಕನ್ಯಾನ ಎಸ್ಎಂಎ ಮಾಣಿ ಅಧ್ಯಕ್ಷ ಮುಹಮ್ಮದ್ ಕೆಮ್ಮಾನ್ ಎಸ್ಎಂಎ ಪುತ್ತೂರು ಅಧ್ಯಕ್ಷ ಶಿಹಾಬುರ್ರಹ್ಮಾನ್,ಯುಸುಫ್ ಗೌಸಿಯಾ, ಒಕ್ಕೆತೂರು ಜಮಾಅತ್ ಸಮಿತಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಚಂದಲಿಕೆ ಉಪಸ್ಥಿತರಿದ್ದರು.