ಕರಾರಸಾ ನಿಗಮ ಬಿಸಿರೋಡ್ ಘಟಕದಲ್ಲಿ ಮೂರನೇ ವರ್ಷದ ಆಟಿದ ಗಮ್ಮತ್ತು ಸಂಭ್ರಮ

0

ಪುತ್ತೂರು: ಕರಾರಸಾ ನಿಗಮ ಬಿಸಿರೋಡ್ ಘಟಕದಲ್ಲಿ ಮೂರನೇ ವರ್ಷದ ಆಟಿದ ಗಮ್ಮತ್ತು ಕಾರ್ಯಕ್ರಮ ನಡೆಯಿತು. ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಘಟಕದ ಪ್ರತಿಯೊಬ್ಬ ಕಾರ್ಮಿಕರ ಶ್ರಮ ಸೇವೆ ಸಹಕಾರದಿಂದ ಉತ್ತಮ ರೀತಿಯಲ್ಲಿ ನಡೆಯುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ಹೇಳಿ ಶುಭ ಹಾರೈಸಿದರು.

ವಿಟ್ಲ ಬಸ್‌ನಿಲ್ದಾಣದ ಸಂಚಾರ ನಿಯಂತ್ರಕ ಕೋಚಣ್ಣ ಪೂಜಾರಿಯವರು ಆಟಿಯ ವೈಶಿಷ್ಟ್ಯತೆಯ ಬಗ್ಗೆ ವಿಚಾರ ಮಂಡನೆ ಮಾಡಿದರು. ವೇದಿಕೆಯಲ್ಲಿ ಪುತ್ತೂರು ವಿಭಾಗದ ಆಡಳಿತಾಧಿಕಾರಿ ರೇವತಿ, ವಿಭಾಗೀಯ ಸಂಚಲನಾಧಿಕಾರಿ ಮುರಳೀಧರ ಭಟ್ ವಿಭಾಗೀಯ ಯಾಂತ್ರಿಕ ಅಭಿಯಂತರಾದ ಆಶಾಲತ, ವಿಭಾಗೀಯ ಲೆಕ್ಕಪತ್ರ ಅಧಿಕಾರಿ ಆಶಾಲತ, ವಿಭಾಗೀಯ ಅಂಕಿ ಅಂಶ ಆಧಿಕಾರಿ ಹರೀಶ್ ಕೊಟ್ಟಾರಿ, ಪುತ್ತೂರು ಘಟಕದ ಹಿರಿಯ ಘಟಕ ವ್ಯವಸ್ಥಾಪಕ ಇಸ್ಮಾಯಿಲ್ ಉಪಸ್ಥಿತರಿದ್ದರು. ಬಿಸಿರೋಡ್ ಘಟಕ ವ್ಯವಸ್ಥಾಪಕ ಶ್ರೀಷ ಭಟ್‌ರವರು ಸ್ವಾಗತಿಸಿದರು. ಬಿಸಿರೋಡ್ ಘಟಕದ ಸಹಾಯಕ ಕಾರ್ಯಾಧೀಕ್ಷಕಿ ವಿನಯಾ ಜಿ. ರೈಯವರು ಕಾರ್ಯಕ್ರಮ ಆಯೋಜಿಸಿದ್ದರು.


ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕಡಿಮೆ ಸಿಬ್ಬಂದಿಗಳನ್ನು ಬಳಸಿ ಒಟ್ಟು ಐದು ವಾಹನಗಳ ನವೀಕರಣಗೊಳಿಸಿದ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರಿಂದ ಬಹುಮಾನ ರೂಪದಲ್ಲಿ ಪಡೆದ ರೂ.10,000 ರೂಪಾಯಿಯನ್ನು ವಿಭಾಗೀಯ ಕಾರ್ಯಾಗಾರದ ಸಿಬ್ಬಂದಿಗಳಿಗೆ ಕೊಟ್ಟಿರುವುದಕ್ಕಾಗಿ ಅವರನ್ನು ಸನ್ಮಾನಿಸಲಾಯಿತು.

ಅತಿಥಿಗಳಾಗಿ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು ಮತ್ತು ಬಿಸಿರೋಡ್ ಘಟಕದಲ್ಲಿ ನಿವೃತ್ತರಾಗಿರುವ ಸಿಬ್ಬಂದಿಗಳಿಗೆ ಗೌರವಿಸಲಾಯಿತು. ಪುತ್ತೂರು ವಿಭಾಗದಿಂದ ಬೆಂಗಳೂರಿಗೆ ವರ್ಗಾವಣೆ ಆಗಿರುವ ವಿಭಾಗೀಯ ಯಾಂತ್ರಿಕ ಅಭಿಯಂತರೆ ಆಶಾಲತರವರನ್ನು ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು.

ಘಟಕದ ಸಿಬ್ಬಂದಿಗಳು ತಾವುಗಳೇ ಮಾಡಿ ತಯಾರಿಸಿ ತಂದಿರುವ ವಿವಿಧ ಬಗೆಯ, ಆಟಿಯ ಸಮಯದಲ್ಲಿ ಮಾಡುವ ಒಟ್ಟು ಐವತ್ತು ತಿನಸುಗಳು ಭೋಜನ ಕೂಟ ವೈಶಿಷ್ಟ್ಯವಾಗಿತ್ತು. ಹಳ್ಳಿಯ ರೈತರು ಉಪಯೋಗಿಸುತ್ತಿದ್ದ ಸಾಮಾಗ್ರಿಗಳನ್ನು ಸಂಗ್ರಹಣೆ ಮಾಡಿ ಪ್ರದರ್ಶನಕ್ಕೆ ತಂದಿರುವ ಬಗ್ಗೆ ಪುತ್ತೂರು ಘಟಕದ ಕುಶಲಕರ್ಮಿ ಮಾಧವ ಶೆಣೈ ಯವರನ್ನು ಗುರುತಿಸಿ ಅಭಿನಂದಿಸಲಾಯಿತು. ಆಮಂತ್ರಣ ಪತ್ರವನ್ನು ತಯಾರಿಸಿದ ಪ್ರೇಮ್ ಸಾಗರ್ ತುಂಬೆ ಹಾಗೂ ಆಮಂತ್ರಣ ವಿಡಿಯೋ ತಯಾರಿಸಿರುವ ಚಂದ್ರಕಾಂತ್‌ರವರನ್ನು ಗುರುತಿಸಿ ಅಭಿನಂದಿಸಲಾಯಿತು. ಬಿಸಿರೋಡ್ ಘಟಕದ ಭಾಸ್ಕರರವರು ಪ್ರಾರ್ಥಿಸಿದರು. ಬಿಸಿರೋಡ್ ಘಟಕದ ನಿರ್ವಾಹಕ ದಾಮೋದರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here