ತಾ.ಯುವ ಬಂಟರ ಸಂಘದಿಂದ ʼತುಳುನಾಡ ಬಂಟೆರೆ ಪರ್ಬʼ

0

ಬಂಟರ ಅಭಿವೃದ್ಧಿ ನಿಗಮಕ್ಕೆ ರಾಜ್ಯ ಸರಕಾರದಿಂದ 250 ಕೋಟಿ ರೂ.ಮೀಸಲು-ಅಶೋಕ್ ಕುಮಾರ್ ರೈ

*ತುಳುನಾಡು, ಬಂಟರ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಸ್ಪರ್ಧೆ
*ದ.ಕ.,ಉಡುಪಿ,ಕಾಸರಗೋಡಿನ 5 ತಂಡಗಳು ಭಾಗಿ
*ಬಂಟ ಸಮಾಜದ ಚೇತನತ್ರಯರ ಸ್ಮರಣೆಯ `ಬಂಟ ಸ್ಮತಿ’
*ಸಾವಿರಾರು ಮಂದಿಯಿಂದ ಸವಿಯಾದ ಭೋಜನ ಸ್ವೀಕಾರ

ಪುತ್ತೂರು:ಪುತ್ತೂರು ಯುವ ಬಂಟರ ನೇತೃತ್ವದಲ್ಲಿ ಜರಗಿದ ಅದ್ದೂರಿ ಕಾರ್‍ಯಕ್ರಮ ಬಂಟೆರೆ ಪರ್ಬ ನೋಡಿ ಅತೀ ಸಂತೋಷವಾಯಿತು.ಯುವ ಬಂಟರು ಸಮಾಜದಲ್ಲಿ ಶಕ್ತಿಯಾಗಿ ಬೆಳೆಯಬೇಕೆಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಜು.23ರಂದು ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಪುತ್ತೂರು ಕೊಂಬೆಟ್ಟು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿದ `ತುಳುನಾಡ ಬಂಟೆರೆ ಪರ್ಬ’ ಕಾರ್‍ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾಸಕರು, ಬಂಟರ ಪರವಾಗಿ ಯಾವುದೇ ಸರಕಾರ ಈತನಕ ಬೆಂಬಲ ನೀಡಿಲ್ಲ.ರಾಜ್ಯದ ಈಗಿನ ಸರಕಾರ ಬಂಟರ ಅಭಿವೃದ್ಧಿ ಪ್ರಾಧಿಕಾರಕ್ಕೆ250 ಕೋಟಿ ರೂಪಾಯಿಯನ್ನು ಮೀಸಲಿಟ್ಟಿದೆ. ಬಂಟ ಸಮಾಜದ ಸಮಗ್ರ ಅಭಿವೃದ್ಧಿ ಆಗಬೇಕೆಂಬ ಉದ್ದೇಶ ನನ್ನದು. ತುಳು ಭಾಷೆಗೆ ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ಸ್ಥಾನಮಾನ ನೀಡಬೇಕೆಂದು ನಾನು ವಿಧಾನ ಸಭಾಧಿವೇಶನದಲ್ಲಿ ಧ್ವನಿ ಎತ್ತಿದ್ದೇನೆ. ಪುತ್ತೂರು ಬಂಟ ಸಮಾಜದಿಂದ ಎಲ್‌ಕೆಜಿಯಿಂದ ಪ್ರಾಥಮಿಕ ಹಂತ, ಪದವಿ ಪೂರ್ವ ಮತ್ತು ಪದವಿ ಶಿಕ್ಷಣ ಸಂಸ್ಥೆ ಆಗಬೇಕೆಂಬ ಕಲ್ಪನೆ ಇದೆ. ಬಂಟ ಸಮಾಜದ ಅಭಿವೃದ್ಧಿಗೆ ಪೂರ್ಣ ರೀತಿಯ ಸಹಕಾರ ನೀಡುತ್ತೇನೆ. ಜೊತೆಗೆ ಬಂಟರ ಸಂಘದಿಂದ ನೂತನವಾಗಿ ಜಾಗ ಖರೀದಿಗೂ ಸಹಕಾರ ನೀಡುತ್ತೇನೆ ಎಂದು ಹೇಳಿದರಲ್ಲದೆ, ಯುವ ಬಂಟರು ಒಗ್ಗೂಡಿ ಅದ್ಭುತವಾದ ಕಾರ್‍ಯಕ್ರಮ ಆಯೋಜಿಸಿದ್ದಾರೆ. ಬಂಟರ ಭವನ ಸಮಾಜ ಬಾಂಧವರಿಂದ ತುಂಬಿದ್ದು, ತುಂಬಾ ಸಂತೋಷ ತಂದಿದೆ. ಬಂಟ ಸಮಾಜದ ಗೌರವ, ಘನತೆಯನ್ನು ಎತ್ತಿ ತೋರಿಸುವ ಕೆಲಸವನ್ನು ಸದಾ ಮಾಡುತ್ತೇನೆ. ಜೊತೆಗೆ ಭ್ರಷ್ಟಾಚಾರ ಮುಕ್ತವಾದ ಆಡಳಿತವನ್ನು ನಾನು ನೀಡುತ್ತೇನೆ ಎಂದು ಹೇಳಿದರು.

ಸಂಸ್ಕೃತಿಯ ಅನಾವರಣ- ಅಜಿತ್ ರೈ:
ಯುವ ಬಂಟರ ದಿನಾಚರಣೆಯನ್ನು ದೀಪ ಬೆಳಗಿಸಿ, ಉದ್ಘಾಟಿಸಿದ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿರವರು ಮಾತನಾಡಿ, ನಮ್ಮ ಬಂಟ ಸಮಾಜದ ಆಚಾರ ವಿಚಾರ ಸಂಸ್ಕೃತಿಯನ್ನು ತೋರಿಸುವ ಬಂಟೆರೆ ಪರ್ಬ ಕಾರ್‍ಯಕ್ರಮ ಆಯೋಜಿಸಿದ ಯುವ ಬಂಟರ ಸಂಘದ ಕಾರ್‍ಯ ಪ್ರಶಂಸನೀಯ ಎಂದರು.
ಸಂತೋಷ ತಂದಿದೆ- ಸೀತಾರಾಮ ರೈ:
ಬಂಟರ ಸಂಘದ ಮಾಜಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ ಯುವ ಬಂಟರು ಆಯೋಜಿಸಿದ ಈ ಕಾರ್‍ಯಕ್ರಮ ಇಡೀ ಸಮಾಜಕ್ಕೆ ಸಂತೋಷ ತಂದಿದೆ. ಅದರಲ್ಲೂ ಬಂಟ ಸ್ಮತಿ ಕಾರ್‍ಯಕ್ರಮದಲ್ಲಿ ಬಂಟ ಸಮಾಜದ ಏಳಿಗೆಗಾಗಿ ಶ್ರಮಿಸಿದ ಚಿಲ್ಮೆತ್ತಾರು ಕೋಚಣ್ಣ ರೈ, ಮುಂಡಾಳಗುತ್ತು ಡಾ.ತಿಮ್ಮಪ್ಪ ರೈ ಹಾಗೂ ಎನ್.ಮುತ್ತಪ್ಪ ರೈಯವರ ಸ್ಮರಣೆ ಅತ್ಯಂತ ಸಮಂಜಸವಾದ ಕಾರ್‍ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಧನೆ ಆಕಾಶದೆತ್ತರಕ್ಕೇರಲಿ- ಜಯರಾಮ ರೈ:
ಅಬುಧಾಬಿಯ ಉದ್ಯಮಿ ಮಿತ್ರಂಪಾಡಿ ಜಯರಾಮ ರೈಯವರು ಮಾತನಾಡಿ ಯುವ ಬಂಟರ ಸಾಧನೆಗಳು ಆಕಾಶದ ಎತ್ತರಕ್ಕೇರಲಿ ಎಂದು ಶುಭಹಾರೈಸಿದರು.
ಬಂಟರ ನಾಯಕತ್ವ ಸಮಾಜಕ್ಕೆ ದೊರೆಯಲಿ-ರಮಾನಾಥ ರೈ:
ಮಾಜಿ ಸಚಿವ ರಮಾನಾಥ ರೈಯವರು ಮಾತನಾಡಿ ಯುವ ಬಂಟರ ಪ್ರತಿಭೆಯು ನಾಯಕತ್ವದ ಮೂಲಕ ಸಮಾಜಕ್ಕೆ ದೊರೆಯಲಿ ಎಂದರು.
ಶಾಸಕರಿಗೆ ಸನ್ಮಾನ:
ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಮತ್ತು ಅವರ ಪತ್ನಿ ಸುಮ ಅಶೋಕ್ ಕುಮಾರ್ ರೈಯವರನ್ನು ಯುವ ಬಂಟರ ಸಂಘದಿಂದ ಸನ್ಮಾನಿಸಲಾಯಿತು.
ಬಂಟ ಸ್ಮತಿ:
ನಿವೃತ್ತ ತಹಸಿಲ್ದಾರ್ ಚಿಲ್ಮೆತ್ತಾರು ಕೋಚಣ್ಣ ರೈಯವರ ಬಗ್ಗೆ ಕಲಾರತ್ನ ವಿಶ್ವನಾಥ ಶೆಟ್ಟಿ ನೆಲ್ಯಾಡಿ, ಡಾ.ಮುಂಡಾಳ ತಿಮ್ಮಪ್ಪ ರೈಯವರ ಬಗ್ಗೆ ಕುಂಬ್ರ ದುರ್ಗಾಪ್ರಸಾದ್ ರೈ ಹಾಗೂ ಎನ್. ಮುತ್ತಪ್ಪ ರೈಯವರ ಬಗ್ಗೆ ನಿರಂಜನ ರೈ ಮಠಂತಬೆಟ್ಟುರವರು ಮಾತನಾಡಿದರು.ಈ ಸಂದರ್ಭದಲ್ಲಿ ಕೋಚಣ್ಣ ರೈ, ಡಾ.ತಿಮ್ಮಪ್ಪ ರೈ ಹಾಗೂ ಮುತ್ತಪ್ಪ ರೈಯವರ ಕುಟುಂಬಸ್ಥರು ಉಪಸ್ಥಿತರಿದ್ದರು.

ಯುವ ಬಂಟರ ಸಂಘದಿಂದ ವಿದ್ಯಾನಿಧಿ ವಿತರಣೆ:
ಮೂವರು ವಿದ್ಯಾರ್ಥಿನಿಯರ ಕಲಿಕೆಗೆ ಯುವ ಬಂಟರ ಸಂಘದಿಂದ ವಿದ್ಯಾನಿಧಿಯನ್ನು ವಿತರಿಸಲಾಯಿತು. ಪ್ರಶಸ್ತಿ ಪುರಸ್ಕೃತ ಕೃಷಿಕ ಕಡಮಜಲು ಸುಭಾಷ್ ರೈ, ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ರೈರವರು ಉಪಸ್ಥಿತರಿದ್ದರು.
ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬಂಟರ ಸಂಘದ ಮಾಜಿ ಅಧ್ಯಕ್ಷ ನುಳಿಯಾಲು ಜಗನ್ನಾಥ ರೈ ಮಾದೋಡಿ, ತಾಲೂಕು ಯುವ ಬಂಟರ ಸಂಘದ ಸ್ಥಾಪಕಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಂಟರ ಸಂಘದ ನಿರ್ದೇಶಕ ನುಳಿಯಾಲು ರವೀಂದ್ರ ಶೆಟ್ಟಿ,ಮುಂಬೈಯ ನಿವೃತ್ತ ಪೊಲೀಸ್ ಅಧಿಕಾರಿ ಪ್ರಕಾಶ್ ಭಂಡಾರಿ, ಜಯಕರ್ನಾಟಕ ಸಂಘಟನೆಯ ರಾಜ್ಯ ಮುಖಂಡ ಪ್ರಕಾಶ್ ರೈ ದೇರ್ಲ, ಯುವ ಬಂಟರ ಸಂಘದ ಮಾಜಿ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಸಂದರ್ಭೋಚಿತ ಮಾತನಾಡಿ ಶುಭಹಾರೈಸಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಮಾತೃ ಸಂಘದ ತಾಲೂಕು ಸಂಚಾಲಕ ದಯಾನಂದ ರೈ ಮನವಳಿಕೆ, ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಪ್ರಧಾನ ಕಾರ್ಯದರ್ಶಿ ರಮೇಶ್ ರೈ ಡಿಂಬ್ರಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ, ಉಪಾಧ್ಯಕ್ಷ ಚಿಲ್ಮೆತ್ತಾರು ಜಿಗಜೀವನ್‌ದಾಸ್ ರೈ, ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ಮಾತೃ ಸಂಘದ ಸಹ ಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲುರವರುಗಳು ಉಪಸ್ಥಿತರಿದ್ದರು.
ಭೋಜನದ ಪ್ರಾಯೋಜಕತ್ವ:
ಎನ್.ಮುತ್ತಪ್ಪ ರೈಯವರ ಸಹೋದರ ಉದ್ಯಮಿ ಕರುಣಾಕರ್ ರೈ ದೇರ್ಲ ಮತ್ತು ಮನೆಯವರು ಮಧ್ಯಾಹ್ನದ ಭೋಜನದ ವ್ಯವಸ್ಥೆಯ ಪ್ರಾಯೋಜಕತ್ವ ವಹಿಸಿದ್ದರು.
ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ ಮುಂಡಾಳಗುತ್ತು ಸ್ವಾಗತಿಸಿ, ಕಾರ್‍ಯದರ್ಶಿ ರಂಜಿನಿ ಶೆಟ್ಟಿ, ಕೋಶಾಧಿಕಾರಿ ಅಶೋಕ್ ಶೆಟ್ಟಿ, ಉಪಾಧ್ಯಕ್ಷ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಕಾರ್‍ಯಕ್ರಮದ ಸಂಚಾಲಕರುಗಳಾದ ಹರ್ಷ ಕುಮಾರ್ ರೈ ಮಾಡಾವು, ಭಾಗ್ಯೇಶ್ ರೈ ಕೆಯ್ಯೂರು, ಸಂಯೋಜಕ ರವಿಪ್ರಸಾದ್ ಶೆಟ್ಟಿ ಬನ್ನೂರು, ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ ಉಪಸ್ಥಿತರಿದ್ದರು. ಕ್ರೀಡಾ ಸಂಚಾಲಕ ನವೀನ್ ರೈ ಪಂಜಳ ಮತ್ತು ಧಾರ್ಮಿಕ ಸಂಚಾಲಕ ಮನ್ಮಥ ಶೆಟ್ಟಿ ಕೊಡಿಪ್ಪಾಡಿ ಕಾರ್‍ಯಕ್ರಮ ನಿರೂಪಿಸಿದರು.
ಧ್ವಜಾರೋಹಣ: ಧ್ವಜಾರೋಹಣ ಕಾರ್‍ಯಕ್ರಮದಲ್ಲಿ ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಮಾತೃ ಸಂಘದ ನಿರ್ದೇಶಕ ಪುರಂದರ ರೈ ಮಿತ್ರಂಪಾಡಿ, ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ರಮೇಶ್ ರೈ ಡಿಂಬ್ರಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ಉಪಾಧ್ಯಕ್ಷ ರೋಶನ್ ರೈ ಬನ್ನೂರು ಮಾಜಿ ಅಧ್ಯಕ್ಷ ರವೀಂದ್ರ ನೆಕ್ಕಿಲು ಉಪಸ್ಥಿತರಿದ್ದರು. ಹರ್ಷಕುಮಾರ್ ರೈ ಪ್ರಾಯೋಜಕತ್ವದ ಜನ್ಮ ಫೌಂಡೇಶನ್ ಪ್ರವೇಶ ದ್ವಾರದ ಉದ್ಘಾಟನೆ ಸಂದರ್ಭದಲ್ಲಿ ಬಂಟರ ಸಂಘದ ಗೌರವ ಸಲಹೆಗಾರರಾದ ಸಂಜೀವ ಆಳ್ವ ಹಾರಾಡಿ, ಬಂಟರ ಸಂಘದ ಉಪಾಧ್ಯಕ್ಷ ಜಗಜೀವನ್‌ದಾಸ್ ರೈ ಚಿಲ್ಮೆತ್ತಾರು, ಮಾತೃ ಸಂಘದ ನಿರ್ದೇಶಕ ಜೈರಾಜ್ ಭಂಡಾರಿ ನೊಣಾಲು ಉಪಸ್ಥಿತರಿದ್ದರು.ಕೋಡಿಂಬಾಡಿ ಗಿರಿಜಾ ಎಸ್ ರೈ ಪ್ರಾಯೋಜಕತ್ವದ ಪಿಜಿನಡ್ಕಗುತ್ತು ಸಂಜೀವ ರೈ ಪ್ರವೇಶ ದ್ವಾರ ಉದ್ಘಾಟನೆ ಸಂದರ್ಭದಲ್ಲಿ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಬಂಟರ ಸಂಘದ ವಿಶೇಷ ಆಹ್ವಾನಿತರಾದ ಮಿತ್ತಳಿಕೆ ಸೂರ್‍ಯನಾಥ ಆಳ್ವ ಉಪಸ್ಥಿತರಿದ್ದರು. ಡಿಂಬ್ರಿಗುತ್ತು ಸರಸ್ವತಿ ರೈ ಮತ್ತು ಮಿತ್ರಂಪಾಡಿ ಚೆನ್ನಪ್ಪ ರೈ ವೇದಿಕೆ ಉದ್ಘಾಟನೆ ಸಂದರ್ಭದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ಬೂಡಿಯಾರ್ ರಾಧಾಕೃಷ್ಣ ರೈ, ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ, ಅಬುದಾಬಿಯ ಉದ್ಯಮಿ ಮಿತ್ರಂಪಾಡಿ ಜಯರಾಮ ರೈ, ಮಾತೃ ಸಂಘದ ಸಹ ಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲು, ಮಾತೃ ಸಂಘದ ನಿರ್ದೇಶಕ ನಿತ್ಯಾನಂದ ಶೆಟ್ಟಿ ಮನವಳಿಕೆ, ಪುತ್ತೂರು ನಗರ ಬಂಟರ ಸಂಘದ ಅಧ್ಯಕ್ಷ ಶಿವರಾಮ ಆಳ್ವ ಬಳ್ಳಮಜಲುಗುತ್ತು ಉಪಸ್ಥಿತರಿದ್ದರು.
ಯುವ ಬಂಟರ ಸಂಘದ ನಿಕಟ ಪೂರ್ವಾಧ್ಯಕ್ಷ ಪ್ರಕಾಶ್ ರೈ ಸಾರಕರೆ, ಗೌತಮ್ ರೈ ಸಾಂತ್ಯ , ಸತೀಶ್ ಶೆಟ್ಟಿ ಉಪ್ಪಿನಂಗಡಿ, ಪ್ರಜನ್ ಶೆಟ್ಟಿ ಕಂಬಳತಡ್ಡ, ಕೃಷ್ಣಪ್ರಸಾದ್ ರೈ ಕಣಿಯಾರು, ಸಂದೀಪ್ ರೈ ಚಿಲ್ಮೆತ್ತಾರು, ಸದಾಶಿವ ಶೆಟ್ಟಿ ಮಾರಂಗ, ಯೋಗೀಶ್ ಸಾಮಾನಿ, ಕಾರ್ತಿಕ್ ರೈ, ರಂಜಿತಾ ಶೆಟ್ಟಿ ಕಾವು, ಯಶುಭ ರೈ, ಸ್ವಸ್ತಿಕ್ ಶೆಟ್ಟಿ ಸಹಿತ ಅನೇಕ ಮಂದಿ ವಿವಿಧ ಕಾರ್‍ಯಕ್ರಮದಲ್ಲಿ ಸಹಕರಿಸಿದರು.

ಸ್ವರ್ಧೆಗಳು:
ತುಳುನಾಡು,ಬಂಟ ಸಂಸ್ಕೃತಿಗಳನ್ನು ಬಿಂಬಿಸುವ ನಿಟ್ಟಿನಲ್ಲಿ ನಡೆದ ದ.ಕ.,ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ವ್ಯಾಪ್ತಿಯಲ್ಲಿ ನಡೆದ ಸ್ವರ್ಧೆಯಲ್ಲಿ ಬಂಟ ಸಮಾಜದ 5 ತಂಡಗಳು ಭಾಗವಹಿಸಿದ್ದವು.ಸುಮಾರು 4 ಸಾವಿರಕ್ಕೂ ಹೆಚ್ಚು ಮಂದಿ ಸಮಾರಂಭದಲ್ಲಿ ಭಾಗವಹಿಸಿದ್ದರು.ಮಹಿಳಾ ಮತ್ತು ಮಕ್ಕಳ ಫ್ಯಾಶನ್ ಶೋ, ಫಿಲ್ಮ್ ಡ್ಯಾನ್ಸ್, ಸೋಲೋ ಡ್ಯಾನ್ಸ್ ವಿಶೇಷವಾಗಿ ರಂಜಿಸಿತು.ಬೆಳಿಗ್ಗೆ 8.30ಕ್ಕೆ ಆರಂಭಗೊಂಡ ಕಾರ್‍ಯಕ್ರಮ ರಾತ್ರಿ 8.30ರ ತನಕ ನಡೆಯಿತು.

ಬಂಟ ಸಮಾಜ ಬಾಂಧವರು ಮಳೆಯ ನಡುವೆಯೂ ಕಾರ್‍ಯಕ್ರಮಕ್ಕೆ ಆಗಮಿಸಿ, ಅಪರೂಪದ ಕಾರ್‍ಯಕ್ರಮವನ್ನು ವೀಕ್ಷಿಸಿದರು. ಬಂಟರ ಭವನದ ಆಸನಗಳು ಜನರಿಂದ ತುಂಬಿ ಭರ್ತಿಯಾಗಿದೆ. ಐತಿಹಾಸಿಕ ದಾಖಲೆಯ ನಿರ್ಮಾಣ, ಮಳೆಯ ನಡುವೆಯೇ ಜನಸಾಗರ ಮೇಳೈಸಿದ ವಿಶಿಷ್ಟ ಕಾರ್‍ಯಕ್ರಮ ಸಂಪೂರ್ಣ ಯಶಸ್ಸು ಕಂಡಿದೆ.
ಯುವ ಬಂಟರ ಸಂಘ ಸಮಾಜದಲ್ಲಿ ಹೆಸರನ್ನು ಪಡೆಯಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು-
ಮುಂಡಾಳಗುತ್ತು ಶಶಿರಾಜ್ ರೈ,
ಅಧ್ಯಕ್ಷರು,ಯುವ ಬಂಟರ ಸಂಘ ಪುತ್ತೂರು

LEAVE A REPLY

Please enter your comment!
Please enter your name here