ದಕ್ಷಿಣ ಕೊರಿಯದಲ್ಲಿ ನಡೆಯುವ ವಿಶ್ವ ಸ್ಕೌಟ್ ಜಾಂಬೂರಿಗೆ ತೆರಳುವ ತಂಡಕ್ಕೆ ಲಯನ್ಸ್ ಪುತ್ತೂರ್ದ ಮುತ್ತು, ಲಿಯೋ ಕ್ಲಬ್ ನಿಂದ ಬೀಳ್ಕೊಡುಗೆ ಗೌರವ

0

ಪುತ್ತೂರು: ಆಗಸ್ಟ್ ಒಂದರಿಂದ ಹನ್ನೆರಡು ತಾರೀಖಿನವರೆಗೆ ದಕ್ಷಿಣ ಕೊರಿಯಾದಲ್ಲಿ ನಡೆಯುವ 25ನೇ ವಿಶ್ವ ಸ್ಕೌಟ್ ಜಾಂಬೂರಿಗೆ ತೆರಳುವ ತಂಡಕ್ಕೆ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಹಾಗೂ ಲಿಯೋ ಕ್ಲಬ್ ಪುತ್ತೂರ್ದ ಮುತ್ತು ಇವರಿಂದ ಜು.26 ಕಾರ್ಗಿಲ್ ವಿಜಯ್ ದಿನದಂದು ಬೀಳ್ಕೊಡುಗೆ ಗೌರವ ಕಾರ್ಯಕ್ರಮ ನಡೆಸಲಾಯಿತು.

ಲಯನ್ಸ್ ಪುತ್ತೂರ್ದ ಮುತ್ತು ಅಧ್ಯಕ್ಷ ಎನ್ ರವೀಂದ್ರ ಪೈ, ಮಾತನಾಡಿ ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶ ಭಾರತ. ನಮ್ಮ ದೇಶದ ಮಕ್ಕಳು ದಕ್ಷಿಣ ಕೊರಿಯಾದಲ್ಲಿ ನಡೆಯುವ ಅಂತರಾಷ್ಟ್ರೀಯ ಸ್ಕೌಟ್ ಜಾಂಬೂರಿಯಲ್ಲಿ ಭಾಗವಹಿಸಿ ನಮ್ಮ ದೇಶದ ಸಂಸ್ಕೃತಿ ಸಂಸ್ಕಾರಗಳನ್ನು ಬೇರೆ ದೇಶದ ಮಕ್ಕಳೊಂದಿಗೆ ಹಂಚಿಕೊಂಡು ಅವರ ಸಂಸ್ಕೃತಿ ಸಂಸ್ಕಾರಗಳ ಅಧ್ಯಯನ ಮಾಡಿ ಅನುಭವಗಳನ್ನು ಹೆಚ್ಚಿಸಿಕೊಳ್ಳಲು ಒಂದು ಸದಾವಕಾಶ. ಇದನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿ ಶುಭಹಾರೈಸಿದರು.
ಲಯನ್ಸ್ ಪ್ರಾಂತೀಯ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್ ಮಾತನಾಡಿ, ಸುರಕ್ಷಿತವಾಗಿ ಹೋಗಿ ತಮ್ಮ ಅನುಭವಗಳನ್ನು ಹೆಚ್ಚಿಸಿಕೊಂಡು ಬಂದು ನಮ್ಮ ಇತರೇ ಮಕ್ಕಳೊಂದಿಗೆ ಅದನ್ನು ಹಂಚಿಕೊಂಡು ಸ್ಕೌಟ್ ಗೆ ಇನ್ನಷ್ಡು ಮಕ್ಕಳು ಸೇರುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಜಿಲ್ಲಾ ಲಿಯೋ ಅಧ್ಯಕ್ಷೆ ರಂಜಿತಾ ಶೆಟ್ಟಿ ಮಾತನಾಡಿ, ನಾನು ಜಪಾನ್ ನಲ್ಲಿ ನಡೆದ ಜಾಂಬೂರಿಯಲ್ಲಿ ಭಾಗವಹಿಸಿದ ಒಂದು ಒಳ್ಳೆಯ ಅನುಭವ ನನ್ನ ಜೊತೆ ಇದೆ. ಒಂದು ಒಳ್ಳೆಯ ಅವಕಾಶ ನಿಮಗೂ ಲಭಿಸಿದ್ದು ಇದನ್ನು ಧನಾತ್ಮಕವಾಗಿ ಬಳಸಿಕೊಂಡು ನಿಮ್ಮ ಜೀವನವನ್ನು ಉಜ್ಬಲಗೊಳಿಸಿ ಎಂದು ಹೇಳಿ ಶುಭಹಾರೈಸಿದರು.
ಲಯನ್ಸ್ ಸದಸ್ಯ ಭಾಗ್ಯೇಶ್ ರೈ ಮಾತನಾಡಿ, ಕಾರ್ಗಿಲ್ ವಿಜಯ ದಿವಸವಾದ ಇಂದು ಸಿವಿಲ್ ಸರ್ವಿಸ್ ಮಾಡುತ್ತಿರುವ ಸ್ಕೌಟ್ ಗಳಿಗೆ ಗೌರವಿಸುವ ಅವಕಾಶ ಸಿಕ್ಕಿರುವುದು ತುಂಬಾ ಸಂತಸ ತಂದಿದೆ. ನೀವು ಜಾಂಬೂರಿಯಲ್ಲಿ ಯಾವುದೇ ಅಡೆತಡೆ ಇಲ್ಲದೆ ಯಶಸ್ವಿಯಾಗಿ ಭಾಗವಹಿಸಿ ಬರುವಂತೆ ಭಗವಂತನು ಅನುಗ್ರಹಿಸಲಿ. ನಾನು ಸುಮಾರು 30 ಜನರನ್ನು ನನ್ನ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯ ಮೂಲಕ ಸೈನ್ಯಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದೇನೆ. ನೀವೂ ಕೂಡ ಮುಂದಿನ ದಿನಗಳಲ್ಲಿ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಿ ಎಂದು ಹೇಳಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ರವಿಪ್ರಸಾದ್ ಶೆಟ್ಟಿ, ಅಬೂಬಕ್ಕರ್ ಮುಲಾರ್, ತಾಲೂಕು ಸ್ಕೌಟ್ ಅಧ್ಯಕ್ಷ ಶ್ರೀಧರ್ ರೈ , ಕಾರ್ಯದರ್ಶಿ ವಿದ್ಯಾಗೌರಿ, ಉಮಾ ದಿನೇಶ್ ಉಪಸ್ಥಿತರಿದ್ದರು, ಪುತ್ತೂರ್ದ ಮುತ್ತು ಲಿಯೋ ಕ್ಲಬ್ ಅಧ್ಯಕ್ಷೆ ಲೆರಿಸ್ಸಾ ಪ್ರಿನ್ಸಿ ಮಸ್ಕರೇನಸ್ ವಂದಿಸಿದರು.

ಬೀಳ್ಕೊಡುಗೆ ಗೌರವ…
ವಿಶ್ವ ಸ್ಕೌಟ್ ಜಾಂಬೂರಿಗೆ ತೆರಳುವ ಶ್ರೀ ರಾಮಕೃಷ್ಣ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಹಾಗೂ ಸ್ಕೌಟ್ ಶಿಕ್ಷಕಿ ಸುನಿತಾ, ಮೈತ್ರೇಯಿ ಅವರೊಂದಿಗೆ ವಿದ್ಯಾರ್ಥಿಗಳಾದ ಶಿಲ್ಪಾ, ಪ್ರಾರ್ಥನಾ ಬಂಗಾರಡ್ಕ, ಚಿಂತನ್ ಸಾಲ್ಯಾನ್ ಬಿ, ಸತ್ಯಪ್ರಸಾದ್, ಅಕ್ಷಯ್ ಕೃಷ್ಣ, ಅಕ್ಷತ್ ಕುಮಾರ್, ಮೊಹಮ್ಮದ್ ಅರ್ಫನ್ ಶಹನ್, ಅನಿಕೇತ್, ವೃಷಭ್ ಆರ್ ರೈ, ಆದ್ಯ ಸುಲೋಚನ,ಇರೋಲ್ ಶಮನ್ ಡಿಸೋಜ, ಸೈಲುಸ್ ಅಶಲೈ ಅಲ್ಮೇಡ, ವೈಷ್ಣವಿ, ಸಮೃದ್ಧಿ ಚೌಟ, ಶಿಲ್ಪ ಬಿ, ಶ್ರೀಕೃಷ್ಣ ನಟ್ಟೋಜ, ಧನುಷ್ ರಾಮ್ ಎಮ್, ಇಷಾ ಸುಲೋಚನಾ, ಆಫ್ಝಲ್ ಇವರುಗಳಿಗೆ ಬೀಳ್ಕೊಡುಗೆ ಗೌರವ ಮಾಡಲಾಯಿತು.

LEAVE A REPLY

Please enter your comment!
Please enter your name here