ವರ್ಗಾವಣೆಗೊಂಡ ಕಾಮಜಾಲು ಹಿ. ಪ್ರಾ. ಶಾಲಾ ಸಹಶಿಕ್ಷಕಿ ಶಾರದಾರವರಿಗೆ ಬೀಳ್ಕೊಡುಗೆ

0

ವಿಟ್ಲ: ಮಾಣಿಲ ಗ್ರಾಮದ ಮುರುವ ಕಾಮಜಾಲು ಹಿರಿಯ ಪ್ರಾಥಮಿಕ ಶಾಲೆಯಿಂದ ವರ್ಗಾವಣೆ ಗೊಂಡ ಸಹಶಿಕ್ಷಕಿ ಶಾರದಾರವರನ್ನು ಶಾಲಾ ಎಸ್.ಡಿ.ಎಂ.ಸಿ ವತಿಯಿಂದ ಹಾಗೂ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಬೀಳ್ಕೊಡಲಾಯಿತು.

ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸುಂದರ ಕುಲಾಲ್ ಪಳನೀರುರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷರು ವನಿತಾ ತಾರಿದಾಳ, ಗೌರವ ಶಿಕ್ಷಕರು ಎಂ.ಕೆ ಕುಕ್ಕಾಜೆ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪುಷ್ಪವಾತಿ ಬಳ್ಳಾಲ್ , ಎಸ್.ಡಿ.ಎಂ.ಸಿ. ಉಪಾಧ್ಯಕ್ಷರಾದ ಮೋಹನ್ ಕಕ್ವೆ, ಗ್ರಾಮ ಪಂಚಾಯತ್‌ ಸದಸ್ಯರಾದ ರಾಜೇಶ್ ಬಾಳೆಕಲ್ಲು, ಶ್ರೀಧರ್ ಬಾಳೆಕಲ್ಲು ಹಾಗೂ ಹೇಮಂತ್ ರೈ ಮೊದಲಾದವರು ಉಪಸ್ಥಿತರಿದ್ದರು. ಗೌರವ ಶಿಕ್ಷಕಿ ಮಾಲತಿ ಡಿ. ಸ್ವಾಗತಿಸಿ. ಅತಿಥಿ ಶಿಕ್ಷಕಿ ಮಾಲತಿ ಪುಣಚ ವಂದಿಸಿದರು.
ಅತಿಥಿ ಶಿಕ್ಷಕಿ ಸುಶ್ಮಿತಾ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here