ಪುತ್ತೂರು: ಕಲಿಯುಗ ಕಲೆ,ಕಾರಣಿಕ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಜಲು ಸ್ವಾಮಿ ಕೊರಗಜ್ಜ, ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ಜು.30ರಂದು ಮಧ್ಯಾಹ್ನ ದೈವಗಳಿಗೆ ಹಗಲು ಕೋಲ,ಅಗೇಲು ಸೇವೆ ನಡೆದು ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಮಣಿಸ್ವಾಮಿ ತಿಳಿಸಿದ್ದಾರೆ.
ಕ್ಷೇತ್ರದಲ್ಲಿ ಪ್ರತಿ ತಿಂಗಳ ಸಂಕ್ರಮಣದಂದು ಮಧ್ಯಾಹ್ನ 12 ಗಂಟೆಯಿಂದ ಕೆಂಡದರ್ಶನ ಸೇವೆ, ಅಗ್ನಿ ಕಲ್ಲುರ್ಟಿ ಮತ್ತು ಸ್ವಾಮಿ ಕೊರಗಜ್ಜ ದೈವಕ್ಕೆ ಕೋಲ, ಅಗೇಲು ಸೇವೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತದೆ. ಪ್ರತಿ ಆದಿತ್ಯವಾರ ಮಧ್ಯಾಹ್ನ ಸ್ವಾಮಿ ಕೊರಗಜ್ಜ ದೈವದ ಹಗಲು ಕೋಲ, ಅಗೇಲು ಸೇವೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತದೆ.ಪ್ರತಿ ಸೋಮವಾರ, ಮಂಗಳವಾರ, ಶುಕ್ರವಾರ ಮತ್ತು ಶನಿವಾರ ಪ್ರಶ್ನಾ ಚಿಂತನೆ ಹಾಗೂ ಬುಧವಾರ, ಗುರುವಾರ ಸೂಚಿತ ಪರಿಹಾರ ಕಾರ್ಯ ನಡೆಯುತ್ತದೆ ಎಂದು ಕ್ಷೇತ್ರದ ಧರ್ಮದರ್ಶಿ ಮಣಿಸ್ವಾಮಿ ತಿಳಿಸಿದ್ದಾರೆ.
ಸಂಕ್ರಮಣ ದಿನವೂ ಹಗಲು ಕೋಲ ಕ್ಷೇತ್ರದಲ್ಲಿ ಇನ್ನು ಮುಂದೆ ಸಂಕ್ರಮಣ ದಿನದಂದೂ ದೈವಗಳಿಗೆ ರಾತ್ರಿ ಬದಲು ಹಗಲು ಕೋಲ,ಅಗೇಲು ಸೇವೆ ನಡೆಯಲಿದೆ.ಮಧ್ಯಾಹ್ನ 12 ಗಂಟೆಗೆ ಸೇವೆ ಆರಂಭಗೊಂಡು ರಾತ್ರಿ 7 ಗಂಟೆ ವೇಳೆಗೆ ಸಮಾಪ್ತಿಯಾಗಲಿದೆ. ಸೇವೆ ಮಾಡಲಿಚ್ಚಿಸುವ ಭಕ್ತಾದಿಗಳು ಮೊ:9740463437ನ್ನು ಸಂಪರ್ಕಿಸುವಂತೆ ಕ್ಷೇತ್ರದ ಧರ್ಮದರ್ಶಿ ಮಣಿಸ್ವಾಮಿ ತಿಳಿಸಿದ್ದಾರೆ.