ವಿಟ್ಲ: ದಕ್ಷಿಣ ಕೊರಿಯಾದಲ್ಲಿ ಆ. 1 ರಿಂದ 12 ರವರೆಗೆ ನಡೆಯಲಿರುವ ಸ್ಕೌಟ್ ಗೈಡ್ ವಿಶ್ವ ಜಾಂಬೂರಿ ಉತ್ಸವದಲ್ಲಿ ಪಾಲ್ಗೊಳ್ಳುವ 10ನೇ ತರಗತಿಯ ವಿದ್ಯಾರ್ಥಿಗಳಾದ ಸುಜನಾ ರೈ ಹಾಗೂ ಅನೀಶ್ ಕೃಷ್ಣ ಆಚಾರ್ಯ ರವರನ್ನು ಶಾಲಾ ವತಿಯಿಂದ ಬೀಳ್ಕೊಡುವ ಸಮಾರಂಭ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆಯಿತು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಲ್. ಎನ್ ಕೂಡೂರು ಸಂಸ್ಥೆಯ ಪ್ರತಿನಿಧಿಗಳಾಗಿ ಆಯ್ಕೆಯಾದ ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ವತಿಯಿಂದ ಕಿರು ಕಾಣಿಕೆ ನೀಡಿ ಶುಭ ಪ್ರಯಾಣಕ್ಕೆ ಹಾರೈಸಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀಧರ್ ಶೆಟ್ಟಿ, ಕಾರ್ಯದರ್ಶಿಯಾದ ಮೋಹನ್, ಖಜಾಂಚಿಯಾದ ಪ್ರಭಾಕರ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾದ ಪ್ರಕಾಶ್ ಕುಕ್ಕಿಲ, ಹಿರಿಯ ನಿರ್ದೇಶಕರಾದ ಮೋನಪ್ಪ ಶೆಟ್ಟಿ ಹಾಗೂ ವಿಜಯಪಾಯಸ್, ಅಳಿಕೆ ವಿದ್ಯಾಸಂಸ್ಥೆಯ ಸ್ಕೌಟ್ ಮಾಸ್ಟರ್ ನಾರಾಯಣ್ ನಾಯಕ್, ಆಡಳಿತಾಧಿಕಾರಿ ರಾಧಾಕೃಷ್ಣ ಎರುಂಬು ಪ್ರಾಂಶುಪಾಲರಾದ ಜಯರಾಮ್ ರೈ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೋಷಕರಾದ ಸವಿತಾ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ವಿದ್ಯಾರ್ಥಿನಿಯರಾದ ಮನೋಜ್ಞ,ಮಹಿಮಾ, ಅನ್ವಿತಾ ಹಾಗೂ ಅಶ್ವಿನಿ ಪ್ರಾರ್ಥನೆ ಹಾಡಿದರು. ಪ್ರಾಂಶುಪಾಲರಾದ ಜಯರಾಮ್ ರೈ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಜೇಸೀಸ್ ಶಾಲೆಯ ಗೈಡ್ ಶಿಕ್ಷಕಿ ಜಯಶ್ರೀ ವಿಶ್ವ ಜಾಂಬೂರಿ ಯ ಕಿರುಪರಿಚಯ ನೀಡಿದರು. ವಿದ್ಯಾರ್ಥಿ ವೃಂದದ ಪರವಾಗಿ ಉಪನಾಯಕಿ 7ನೇ ತರಗತಿಯ ವಂದ್ಯ ಶುಭಾಶಯ ಕೋರಿದರು. ಸ್ಕೌಟ್ ಮತ್ತು ಗೈಡ್ ವತಿಯಿಂದ ಸಾತ್ವಿಕ್ ಕೃಷ್ಣ ಶುಭ ಕೋರಿ ಮಾತನಾಡಿದರು. ಉಪ ಪ್ರಾಂಶುಪಾಲೆ ಜ್ಯೋತಿ ಶೆಣೈ ವಂದಿಸಿದರು. ಶಿಕ್ಷಕಿ ಕವಿತಾ ಎಸ್. ಗೌಡ ಕಾರ್ಯಕ್ರಮ ನಿರೂಪಿಸಿದರು.