ನರೇಂದ್ರ ಪ.ಪೂ.ಕಾಲೇಜಿನಲ್ಲಿ ಔಷಧೀಯ ಸಸ್ಯಗಳ ಸಂರಕ್ಷಣೆ ಮತ್ತು ಸಮರ್ಥನೀಯ ಬಳಕೆ ಬಗ್ಗೆ ಮಾಹಿತಿ ಕಾರ್‍ಯಕ್ರಮ

0

ಪುತ್ತೂರು: ಔಷಧೀಯ ಗಿಡಮೂಲಿಕೆಗಳು ನಶಿಸಿ ಹೋಗುತ್ತಿರುವ ಕಾಲ ಘಟ್ಟದಲ್ಲಿ ಅವುಗಳ ಸಂರಕ್ಷಣೆಯ ಮಹತ್ವದ ಕುರಿತು ಇಂದಿನ ಯುವ ಸಮೂಹದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಭಾರತೀಯ ಸಂಸ್ಕೃತಿಯಲ್ಲಿ ಪರಂಪರಾನುಗತವಾಗಿ ಗಿಡಮೂಲಿಕೆಯ ಉಪಚಾರವನ್ನು ನಡೆಸಿಕೊಂಡು ಬರಲಾಗುತ್ತಿದೆ. ವಿವಿಧ ರೋಗಗಳ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗಾಗಿ ಔಷಧೀಯ ಸಸ್ಯಗಳ ಬಳಕೆಯು ಹಳೆಯ ಅಭ್ಯಾಸವಾಗಿದೆ. ಭಾರತೀಯ ವೈದ್ಯ ಪದ್ಧತಿಯ ಸಾಂಪ್ರದಾಯಿಕ ಪದ್ಧತಿಯಾದ ಆಯುರ್ವೇದವು ವಿವಿಧ ಕಾಯಿಲೆಗಳಿಗೆ ಗಿಡಮೂಲಿಕೆಗಳ ಪರಿಹಾರಗಳನ್ನು ವಿವರಿಸಿದೆ. ಈ ನಿಟ್ಟಿನಲ್ಲಿ ಔಷಧೀಯ ಸಸ್ಯ ಸಂಕುಲದ ಸಂರಕ್ಷಣೆಯ ಉದ್ದೇಶದ ಜೊತೆಗೆ ಅವುಗಳ ಸಂವರ್ಧನೆ , ಬಳಕೆಯಾದಾಗ ಮಾತ್ರ ಅಂತಹ ಅಮೂಲ್ಯ ಸಂಪತ್ತನ್ನು ಉಳಿಸಲು ಸಾಧ್ಯ. ಎಂದು ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆ ಪೇರಲ್ತಡ್ಕ ಇರ್ದೆ ಶಿಕ್ಷಕಿ ಯಶೋಧ ಹೇಳಿದರು.

ಶಿಕ್ಷಕಿ ಯಶೋಧ ಔಷಧೀಯ ಸಸ್ಯಗಳನ್ನು ಬಳಸಿ ಔಷಧೀಯ ವನವನ್ನು ನಿರ್ಮಿಸಿ ಹಲವು ಖಾಯಿಲೆಗಳಿಗೆ ಮದ್ದು ನೀಡುತ್ತಿದ್ದು, ಹಳ್ಳಿ ಮದ್ದು ಅಷ್ಟೋತ್ತರ ಎಂಬ ಪುಸ್ತಕವನ್ನೂ ರಚಿಸಿದ ಸಾಧನೆಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು.ಕಾರ್‍ಯಕ್ರಮದಲ್ಲಿ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅಗಮ್ಯ ಸ್ವಾಗತಿಸಿ ,ವಂದಿಸಿದರು.

LEAVE A REPLY

Please enter your comment!
Please enter your name here