





ನಿಡ್ಪಳ್ಳಿ: ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇರ್ದೆ ವಿಷ್ಣುಮೂರ್ತಿ ದೇವಾಲಯದಲ್ಲಿ ಆ.25 ರಂದು ನಡೆಯುವ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆಯ ಆಮಂತ್ರಣ ಪತ್ರಿಕೆಯನ್ನು ಬೆಟ್ಟಂಪಾಡಿ ವಲಯ ಕಛೇರಿಯಲ್ಲಿ ಬಿಡುಗಡೆ ಮಾಡಲಾಯಿತು.



ಕಾರ್ಯಕ್ರಮದಲ್ಲಿ ಪೂಜಾ ಸಮಿತಿ ಅಧ್ಯಕ್ಷ ಶೇಷಮ್ಮ, ಕಾರ್ಯದರ್ಶಿ ಚೇತನಾ, ಗೌರವ ಸಲಹೆಗಾರ ವಿಜಯಲಕ್ಷ್ಮಿ ಎಸ್.ರೈ, ಗೌರವಾಧ್ಯಕ್ಷ ಚೈತ್ರ ಮತ್ತು ಪದಾಧಿಕಾರಿಗಳು, ವಲಯ ಮೇಲ್ವಿಚಾರಕ ಚಂದ್ರಶೇಖರ, ಬೆಟ್ಟಂಪಾಡಿ ವಲಯ ಅಧ್ಯಕ್ಷ ಬಾಲಕೃಷ್ಣ ಪೇರಲ್ತಡ್ಕ, ಗುಮ್ಮಟೆಗದ್ದೆ ಒಕ್ಕೂಟದ ಅಧ್ಯಕ್ಷ ಹರೀಶ್ ಗೌಡ ಮತ್ತು ಎಲ್ಲಾ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.










