ಬೊಳುವಾರಿನ ಇನ್ ಲ್ಯಾಂಡ್ ಮಯೂರ ಸಂಕೀರ್ಣದಲ್ಲಿ ಫ್ಲೈಟೆಕ್ ಹಾಲಿಡೇಸ್ ಟೂರ್ಸ್ & ಟ್ರಾವೆಲ್ಸ್ ನ ಶಾಖೆ ಉದ್ಘಾಟನೆ

0

ಉತ್ತಮ ಸೇವೆ ಜೊತೆಗೆ ಜನರಿಗೆ ಮಾಹಿತಿ ಕೊಡುವ ವ್ಯವಸ್ಥೆಯೂ ಸಂಸ್ಥೆಯಿಂದಾಗಲಿ: ಅಶೋಕ್ ಕುಮಾರ್ ರೈ

ಪುತ್ತೂರಿನ ಮಕುಟಕ್ಕೆ ಮತ್ತೊಂದು ಗರಿ: ಎಂ.ಎಸ್.ಮಹಮ್ಮದ್

ಪುತ್ತೂರು: ಇಲ್ಲಿನ ಬೊಳ್ವಾರಿನಲ್ಲಿರುವ ಇನ್ ಲ್ಯಾಂಡ್ ಮಯೂರ ಸಂಕೀರ್ಣದಲ್ಲಿ ನೂತನವಾಗಿ ಪ್ರಾರಂಭಗೊಂಡ ಮಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಫ್ಲೈಟೆಕ್ ಹಾಲಿಡೇಸ್ ಪ್ರೈವೇಟ್ ಲಿಮಿಟೆಡ್ ನ ಪುತ್ತೂರು ಶಾಖೆಯನ್ನು ಸಮಸ್ತ ಕೇರಳ ಜಾಮಿಯತ್ತುಲ್ ಉಲಾಮ ಮುಶಾವರ ಸದಸ್ಯರಾದ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣರವರು ಉದ್ಘಾಟಿಸಿದರು.

ಮುಝಮ್ಮಿಲ್ ತಂಗಳ್ ಕಾಸರಗೋಡು ಹಾಗೂ ಝೈನುಲ್ ಆಬೀದಿನ್ ತಂಙಳ್ ಎಣ್ಮೂರು ದುವಾ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿರವರು ಮಾತನಾಡಿ ದೇವರ ಹಾಗೂ ಹಿರಿಯರ ಆಶೀರ್ವಾದ ಇದ್ದರೆ ಸಂಸ್ಥೆ ಯಶಸ್ಸಾಗ್ತದೆ‌. ಇಂತಹ ಸಂಸ್ಥೆಯ ಅವಶ್ಯಕತೆ ಪುತ್ತೂರಿಗೆ ಬಹಳಷ್ಟಿದೆ. ಸಂಸ್ಥೆಯ ಸಿಬ್ಬಂದಿಗಳ ನಗುಮುಖದ ಸೇವೆ ಸಂಸ್ಥೆಯ ಯಶಸ್ಸಿನ ಗುಟ್ಟಾಗಿದೆ. ಎಲ್ಲರೂ‌ ಜೊತೆಯಾಗಿ‌ ಸಾಗಿದಾಗ ನಾವು ನೆನೆಸಿದ ಪಥ ತಲುಪಲು ಸಾಧ್ಯ. ಉತ್ತಮ ಸೇವೆ ಜೊತೆಗೆ ಜನರಿಗೆ ಮಾಹಿತಿ ಕೊಡುವ ವ್ಯವಸ್ಥೆಯೂ ಸಂಸ್ಥೆಯಿಂದಾಗಲಿ ಎಂದರು.

ಮಾಜಿ ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್ ರವರು ಮಾತನಾಡಿ ಇದೊಂದು ಸಂಭ್ರಮ ಸಡಗರದ ಕಾರ್ಯಕ್ರಮ. ಫ್ಲೈಟೆಕ್ ಹಾಲಿಡೇಸ್ ಜಿಲ್ಲಾ ಕೇಂದ್ರವಾಗುತ್ತಿರುವ ಪುತ್ತೂರಿನ ಮಕುಟಕ್ಕೆ ಮತ್ತೊಂದು ಗರಿ. ನಗರದ ಬೆಳವಣಿಗೆಗೆ ಇಂತಹ ಸಂಸ್ಥೆಗಳ ಹುಟ್ಟು ಪೂರಕವಾಗಿದೆ. ಹಲವಾರು ವರುಷಗಳಿಂದ ಮಂಗಳೂರಿನಲ್ಲಿ ಜನರಿಗೆ ಸೇವೆ ನೀಡುತ್ತಿರುವ ಸಂಸ್ಥೆಯ ಶಾಖೆ ಇದೀಗ ಪುತ್ತೂರಿನಲ್ಲಿ ಶುಭಾರಂಭಗೊಂಡಿದೆ. ಈ ಸಂಸ್ಥೆಯ ಏಳಿಗೆಗೆ ಎಲ್ಲರ ಸಹಕಾರ ಅಗತ್ಯ ಎಂದರು.

ಖ್ಯಾತ ಶಿಕ್ಷಣ ತಜ್ಞರಾದ ರಫೀಕ್ ಮಾಸ್ಟರ್ ರವರು ಮಾತನಾಡಿ ಮಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಈ ಸಂಸ್ಥೆಯ ಪಾಲುದಾರರು ಇದೀಗ ತಮ್ಮ ತಾಯಿನಾಡಿನಲ್ಲಿ ಶಾಖೆಯನ್ನು ತೆರೆದಿದ್ದಾರೆ. ನಾಲ್ವರು ಸ್ನೇಹಿತರು ಸೇರಿಕೊಂಡು ಪ್ರಾರಂಭಿಸಿರುವ ಈ ಸಂಸ್ಥೆ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ಸಂಸ್ಥೆಯ ಲಾಭಾಂಶದಲ್ಲಿ ಒಂದಂಶವನ್ನು ಸಮಾಜದಲ್ಲಿರುವ ಬಡಬಗ್ಗರಿಗೆ ನೀಡುವ ಗುಣ ನಿಮ್ನಲ್ಲಿರಲಿ. ತಾಳ್ಮೆ ಸಹನೆ ಇದ್ದಲ್ಲಿ ಯಶಸ್ಸು ಖಂಡಿತಾ ಎಂದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈರವರು ಮಾತನಾಡಿ ಗುಣಮಟ್ಟದ ಸೇವೆ ನೀಡಿದಾಗ ಸಂಸ್ಥೆ ಯಶಸ್ಸಾಗಿ ನಡೆಯಲು ಸಾಧ್ಯ ಎಂದರು. ಇದೇ ಸಂದರ್ಭದಲ್ಲಿ ಶಾಸಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರವರನ್ನು ಸನ್ಮಾನಿಸಲಾಯಿತು.

ಪುತ್ತೂರು ಮುಸ್ಲೀಂ ಜಮಾಅತ್ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಹಾಜಿ, ಮುಹಮ್ಮದ್ ತಂಙಳ್ ಸಾಲ್ಮರ,ಮಾಜಿ ಶಾಸಕರಾದ ಶಕುಂತಳಾ ಟಿ. ಶೆಟ್ಟಿ, ಕೆ.ಐ.ಸಿ.ಕುಂಬ್ರ ಇದರ ಅಧ್ಯಕ್ಷರಾದ ಕೆ.ಪಿ. ಅಹಮ್ಮದ್ ಹಾಜಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಮಿತ್ತೂರು ದಾರುಲ್ ಇರ್ಶಾದ್ ಸಂಸ್ಥೆಯ ಆಡಳಿತಾಧಿಕಾರಿ ಬದ್ರುದ್ದೀನ್ ಅಹ್ಸನಿ, ವಕೀಲರಾದ ನೂರುದ್ದೀನ್ ಸಾಲ್ಮರ, ಕೆಪಿಸಿಸಿ ಜಿಲ್ಲಾ ವಕ್ತಾರ ಮೊಹಮ್ಮದ್ ಬಡಗನ್ನೂರು ನಗರ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದಾಲಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶುಕರ್ ಹಾಜಿ,ಯುವ ಮುಖಂಡ ಹರ್ಷಾದ್ ದರ್ಬೆ ಎಸ್.ಡಿ.ಪಿ.ಐ. ಪುತ್ತೂರು ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಸಾಲ್ಮರ ,ಎಸ್.ಟಿ.ಘಟಕದ ಅಧ್ಯಕ್ಷ ಮಾಲಿಂಗ ನಾಯ್ಕ್, ಒಳಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಶ್ರಫ್, ಪ್ರಮುಖುರಾದ ಇಸ್ಮಾಯಿಲ್ ನಾಟೆಕಲ್ಲು, ಮೌರೀಸ್ ಮಸ್ಕರೇನಸ್, ಸಿದ್ದೀಕ್ ಸುಲ್ತಾನ್,
ಪ್ರಹ್ಲಾದ್ ಬೆಳ್ಳಿಪ್ಪಾಡಿ, ರಂಜಿತ್ ಬಂಗೇರ, ರೋಶನ್ ರೈ ಬನ್ನೂರು, ಶರೀಫ್ ಬಲ್ನಾಡು, ಹನೀಫ್ ಮಾಡಾವು, ಇಮ್ತಿಯಾಸ್, ಆರೀಪ್, ಇಝಾಸ್, ಜಲೀಲ್ ಬಲ್ನಾಡು, ರಫೀಕ್ ಯು.ಪಿ.ಬಲ್ನಾಡು, ಮಜೀದ್ ಪದವು, ಬಾತೀಷ್ ಬಲ್ನಾಡು, ಸಿನಾನ್ ಎಮ್ಮಸ್, ಸಲ್ಮಾನ್ ಪಡೀಲ್, ಸಿರಾಜ್ ಫಿದಾಸ್, ರಫೀಕ್ ಯು.ಪಿ., ಅಶ್ರಫ್ ಉಜ್ರೋಡಿ ಮೊದಲಾದವರು ಆಗಮಿಸಿ‌ ಸಂಸ್ಥೆಗೆ ಶುಭಹಾರೈಸಿದರು. ಪಾಲುದಾರರಾದ ಮಹಮ್ಮದ್ ಸಲ್ಮಾನ್ ಕಾರ್ಯಕ್ರಮ ನಿರೂಪಿಸಿದರು. ಪಾಲುದಾರರಾದ ಮಹಮ್ಮದ್ ಇಹ್ ತೀಶಾಂ, ಮಹಮ್ಮದ್ ಅನ್ಸಾರ್ ಹಾಗೂ ಮಹಮ್ಮದ್ ಸಿರಾಜ್ ರವರು ಅತಿಥಿಗಳನ್ನು ಸ್ವಾಗತಿಸಿ, ವಂದಿಸಿದರು.

ಸಂಸ್ಥೆಯ ವಿಶೇಷತೆ
ಸಂಸ್ಥೆಯಲ್ಲಿ ಹನಿಮೂನ್ ಹಾಗೂ ಹಾಲಿಡೇಸ್ ಪ್ಯಾಕೇಜ್, ವಿಮಾನ ಟಿಕೇಟ್, ಡಾಕ್ಯುಮೆಂಟ್ ಅಟೆಸ್ಟೇಶನ್ ಲಭ್ಯವಿದೆ. ಇಷ್ಟು ಮಾತ್ರವಲ್ಲದೆ ಉಮ್ರಾ ಪ್ಯಾಕೇಜ್ ಗಳು ಲಭ್ಯವಿದೆ.

ಉಮ್ರಾ ಪ್ಯಾಕೇಜ್ ಬುಕ್ಕಿಂಗ್ ಆರಂಭ:
*ಮೊಹರಂ ನಿಂದ ರಂಝಾನ್ ವರೆಗೆ
*ಮಂಗಳೂರಿನಿ೦ದ ಮಂಗಳೂರಿಗೆ
*ನುರಿತ ಅನುಭವೀ ಅಮೀರರ ನೇತೃತ್ವ
*ಹರಂ ಶರೀಫ್ ನಿಂದ 250 ಮೀಟರ್ ದೂರದಲ್ಲಿ ವಾಸ್ತವ್ಯ
*ಬದ್ರ್ ಝಿಯಾರತ್ ಮಸ್ಜಿದ್ ಅಲ್ ಜಿರಾನ
*ಮಕ್ಕಾ ಮದೀನಾ ಝಿಯಾರತ್ ಹಾಗೂ ಐತಿಹಾಸಿಕ ಸ್ಥಳಗಳ ಭೇಟಿ
*ಟ್ರಾವೆಲ್ ಕಿಟ್

LEAVE A REPLY

Please enter your comment!
Please enter your name here