ಪುತ್ತೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು, ವಕೀಲರ ಸಂಘ ಪುತ್ತೂರು, ಶಾಲಾ ಶಿಕ್ಷಣ ಇಲಾಖೆ ಪುತ್ತೂರು, ಅನಿಕೇತನ ಎಜುಕೇಶನಲ್ ಟ್ರಸ್ಟ್ ಪುತ್ತೂರು ಮತ್ತು ಮಾನವ ಕಳ್ಳ ಸಾಗಾಣಿಕೆ ತಡೆ ಘಟಕ, ಸಂತ ಫಿಲೋಮಿನಾ ಕಾಲೇಜು ಪುತ್ತೂರು ಇವರ ಸಂಯುಕ್ತ ಸಹಯೋಗದೊಂದಿಗೆ ‘ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ – 2023’ ಇದರ ಅಂಗವಾಗಿ ಆಯ್ದ ಶಾಲೆಗಳಲ್ಲಿ ಸರಣಿ ಮಾಹಿತಿ ಸಪ್ತಾಹ ನಡೆಯುತ್ತಿದ್ದು, ಸುದಾನ ವಸತಿ ಶಾಲೆಯಲ್ಲಿ ಆಗಸ್ಟ್ 2ರಂದು ಕಾರ್ಯಗಾರ ನಡೆಯಿತು.
ಈ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವಕೀಲೆ ಸ್ವಾತಿ ಜೆ ರೈ ಮಾನವ ಕಳ್ಳಸಾಗಾಣಿಕೆ ಎಂದರೇನು. ಹೇಗೆ ನಡೆಯುತ್ತದೆ. ತಡೆಯುವುದು ಹೇಗೆ. ಎನ್ನುವುದನ್ನು ವಿವರಿಸಿದರು.
ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಅನಿಕೇತನ ಎಜುಕೇಶನಲ್ ಟ್ರಸ್ಟ್ ನ ಸಂಚಾಲಕ, ವಕೀಲ ಕೃಷ್ಣ ಪ್ರಸಾದ್ ನಡ್ಸಾರ್ ಮಾತನಾಡಿ ವಿದ್ಯಾರ್ಥಿಗಳು ಹೊಣೆಗಾರಿಕೆಗಳ ಬಗ್ಗೆ ಜಾಗೃತರಾಗಬೇಕು, ಸದವಕಾಶಗಳನ್ನು ಗುರುತಿಸಿ ಚೆನ್ನಾಗಿ ಬಳಸಿಕೊಳ್ಳಬೇಕು. ಆಗ ಸಮಾಜವು ಸಶಕ್ತವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಪುತ್ತೂರಿನ ಫಿಲೊಮಿನಾ ಕಾಲೇಜಿನ ಪ್ರಾಧ್ಯಾಪಕಿ ಭಾರತಿ. ಎಸ್. ರೈ ಪ್ರಸ್ತಾವಿಕ ಮಾತುಗಳನ್ನಾಡಿದರು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಸುದಾನ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಮಾನವ ಕಳ್ಳ ಸಾಗಾಣೆಯ ಪಿಡುಗು ಬಹಳ ಕಾಲದಿಂದ ಸಮಾಜವನ್ನು ಕಾಡುತ್ತಿದೆ. ಯುವ ಜನತೆ ಇದರ ಬಗೆಗೆ ಜಾಗೃತರಾಗಬೇಕು. ಹಾಗಾದರೆ ಮಾತ್ರ ಇದನ್ನು ತಡೆಯಬಹುದು ಎಂದು ನುಡಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರತ್ನಾಕುಮಾರಿ ಶುಭಾಶಂಸನೆಗೈದರು. ಪುತ್ತೂರು ವಕೀಲರ ಸಂಘಧ ಜೊತೆ ಕಾರ್ಯದರ್ಶಿಗಳಾದ ವಕೀಲೆ ಸೀಮಾ ನಾಗರಾಜ್, ವಕೀಲೆ ಪ್ರಿಯಾ ಮಹೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲೆಯ ಸೋಶಿಯಲ್ ಕ್ಲಬ್ ಜಾಗೃತಿಯ ವಿದ್ಯಾರ್ಥಿ ಪ್ರತಿನಿಧಿ ದಿಯಾ ಪ್ರಮೋದ್(10ನೇ) ಪ್ರತಿಜ್ಞಾ ವಿಧಿಯನ್ನು ನಡೆಸಿಕೊಟ್ಟರು. ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಸ್ವಾಗತಿಸಿ, ಸಹಶಿಕ್ಷಕಿ ಮತ್ತು ಜಾಗೃತಿ ಸೋಶಿಯಲ್ ಕ್ಲಬ್ ನ ನಿರ್ದೇಶಕಿ ನಿಶ್ಮಿತ ಧನ್ಯವಾದವನ್ನು ಅರ್ಪಿಸಿದರು. ಸಹ ಶಿಕ್ಷಕಿ ಯೋಗಿತಾ ಪ್ರದೀಪ್ ಕಾರ್ಯಕ್ರಮವನ್ನು ನಿರೂಪಿಸಿದರು. ಲೀಗಲ್ ಸರ್ವಿಸ್ ಕಮಿಟಿಯ ಸದಸ್ಯ ಹರೀಶ್, ಸಹ ಮುಖ್ಯಶಿಕ್ಷಕಿ ಲವೀನಾ ಹನ್ಸ್, ಸಹ ಶಿಕ್ಷಕಿ ಲತಾ, ಆಶಾಲತಾ ರವರು ಸಹಕರಿಸಿದರು.