ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ- ವಿವೇಕಾನಂದ ಆ.ಮಾ ಶಾಲಾ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

0

ಪುತ್ತೂರು: ವಿದ್ಯಾಭಾರತಿ ಕರ್ನಾಟಕ ವತಿಯಿಂದ ನಡೆದ ಜಿಲ್ಲಾ ಮಟ್ಟದ ವಿದ್ಯಾಭಾರತಿ ಯೋಗಾಸನ ಸ್ಪರ್ಧೆ ಸರಸ್ವತಿ ವಿದ್ಯಾಲಯ ಕಡಬ, ಇಲ್ಲಿ ಜು.27ರಂದು ನಡೆಯಿತು. ಈ ಸ್ಪರ್ಧೆಯಲ್ಲಿ ವಿವೇಕಾನಂದ ಆ. ಮಾ ಶಾಲಾ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

ರಿದಮಿಕ್ ಯೋಗ(ನೃತ್ಯ)ದಲ್ಲಿ ಬಾಲವರ್ಗದ ಬಾಲಕರ ವಿಭಾಗದಲ್ಲಿ ಸ್ಮರಣ್, 7ನೇ ತರಗತಿ(ಶ್ರೀ ರಾಮಕೃಷ್ಣ ಮತ್ತು ಶ್ರೀಮತಿ ರವಿಕಲಾ ದಂಪತಿ ಪುತ್ರ) ದ್ವಿತೀಯ ಸ್ಥಾನ ಹಾಗೂ ಬಾಲವರ್ಗ ಬಾಲಕಿಯರ ವಿಭಾಗದಲ್ಲಿ ಮೋಕ್ಷ, 8ನೇ ತರಗತಿ ( ಶ್ರೀ ಕಿಶೋರ್ ಕುಮಾರ್.ಬಿ ಮತ್ತು ಶ್ರೀಮತಿ ರತ್ನ ದಂಪತಿ ಪುತ್ರಿ) ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಬಾಲವರ್ಗದ ಬಾಲಕಿಯರ ತಂಡದಲ್ಲಿ : ಅಪೇಕ್ಷಾ, 8ನೇ ತರಗತಿ(ಶ್ರೀ ವೆಂಕಟರಮಣ ಕಾರಂತ್ ಮತ್ತಿ ಶ್ರೀಮತಿ ಸಂಧ್ಯಾ ದಂಪತಿ ಪುತ್ರಿ), ಚೈತ್ರಾ, 7ನೇ ತರಗತಿ(ಶ್ರೀ ಕೃಷ್ಣಕುಮಾರ್ ಮತ್ತು ಶ್ರೀಮತಿ ಪ್ರೇಮ ದಂಪತಿ ಪುತ್ರಿ), ಸಾನ್ವಿ, 6ನೇ ತರಗತಿ(ಶ್ರೀ ಜಯರಾಮ ಮತ್ತು ಶ್ರೀಮತಿ ಉಷಾಲತ ದಂಪತಿ ಪುತ್ರ), ಪಾರ್ವತಿ, (ಶ್ರೀ ಈಶ್ವರ ಪ್ರಕಾಶ್ ಮತ್ತು ಚೈತನ್ಯ ಪ್ರಕಾಶ್ ದಂಪತಿ ಪುತ್ರಿ), ಅನ್ವಿ, 7ನೇ ತರಗತಿ(ಶ್ರೀ ವಿಜಯ ಕುಮಾರ್ ಮತ್ತು ಶ್ರೀಮತಿ ನವ್ಯ ದಂಪತಿ ಪುತ್ರಿ)

ಕಿಶೋರ ವರ್ಗದ ಬಾಲಕರ ತಂಡದಲ್ಲಿ ಜೀವನ್, 8ನೇ ತರಗತಿ(ಶ್ರೀ ಧರ್ಮಪಾಲ ಮತ್ತು ಶ್ರೀಮತಿ ವಾರಿಜ ದಂಪತಿ ಪುತ್ರ್ರ), ತನುಷ್, 9ನೇ ತರಗತಿ(ಶ್ರೀ ಹರೀಶ್ ಮತ್ತು ಶ್ರೀಮತಿ ಗೀತಾ ದಂಪತಿ ಪುತ್ರ), ಸನ್ಮಿತ್, ೯ನೇ ತರಗತಿ(ಶ್ರೀ ಸುರೇಶ್ ಮತ್ತು ಶ್ರೀಮತಿ ಉಷಾ ಸುರೇಶ್ ದಂಪತಿ ಪುತ್ರ), ಮತ್ತು ಜೀತನ್, 9ನೇ ತರಗತಿ(ಶ್ರೀ ಲಿಂಗಪ್ಪ ಮತ್ತು ಶ್ರೀಮತಿ ನಯನ ದಂಪತಿ ಪುತ್ರ).

ಬಾಲವರ್ಗದಲ್ಲಿ ಗುಂಪು ಸ್ಪರ್ಧೆಯಲ್ಲಿ ಸೃಜನ್, 8ನೇ ತರಗತಿ (ಶ್ರೀ ರಾಮಕೃಷ್ಣ ಮತ್ತು ಶ್ರೀಮತಿ ರವಿಕಲಾ ದಂಪತಿ ಪುತ್ರ) 5ನೇ ಸ್ಥಾನ ಹಾಗೂ ಕಿಶೋರ ವರ್ಗದಲ್ಲಿ – ಪ್ರಣೀತಕೃಷ್ಣ, 9ನೇ ತರಗತಿ(ಶ್ರೀ ಮುರಳೀಧರ.ಕೆ ಮತ್ತು ಶ್ರೀಮತಿ ಪ್ರಿಯದರ್ಶಿನಿ ದಂಪತಿ ಪುತ್ರ) 5ನೇ ಸ್ಥಾನ ಪಡೆದಿದ್ದು, ಬಾಲವರ್ಗದಲ್ಲಿ ಬಾಲಕಿಯರು ಹಾಗೂ ಕಿಶೋರ ವರ್ಗದಲ್ಲಿ ಬಾಲಕರು ದ್ವಿತೀಯ ಸಮಗ್ರ ಪ್ರಶಸ್ತಿ ಗಳಿಸಿ, ಆಗಸ್ಟ್ 17 ಮತ್ತು 18ರಂದು ಬೆಳಗಾಂನಲ್ಲಿ ನಡೆಯಲಿರುವ ಪ್ರಾಂತ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here