ಅಜಲಡ್ಕದಲ್ಲಿ ಪುನಶ್ಚೇತನಗೊಳಿಸಲಾದ ಕೆರೆ ಲೋಕಾರ್ಪಣೆ, ಶಾಸಕರಿಂದ ಬಾಗಿನ ಅಪ೯ಣೆ

0

ಸರಕಾರ ಮಾಡಲಾಗದ ಕೆಲಸವನ್ನು ಖಾವಂದರು ಮಾಡಿದ್ದಾರೆ-ಅಶೋಕ್ ಕುಮಾರ್ ರೈ

ಪುತ್ತೂರು:ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಪುತ್ತೂರು, ಒಳಮೊಗ್ರು ಗ್ರಾ.ಪಂ ಹಾಗೂ ಅಜಲಡ್ಕ ಕೆರೆ ಅಭಿವೃದ್ಧಿ ಸಮಿತಿ ಇವರ ಸಹಯೋಗದೊಂದಿಗೆ 541 ನೇ ನಮ್ಮೂರ ನಮ್ಮ ಕೆರೆ’ ಕಾಯ೯ಕ್ರಮದಡಿಯಲ್ಲಿ ಹೂಳೆತ್ತಿ ಪುನಶ್ಚೇತನಗೊಳಿಸಲಾದ ಅಜಲಡ್ಕ ಕೆರೆ’ ಲೋಕಾರ್ಪಣೆ ಹಾಗೂ ನಾಮಫಲಕ ಅನಾವರಣ ಕಾಯ೯ಕ್ರಮವು ಆ.9ರಂದು ಅಜಲಡ್ಕ ಕೆರೆ ಆವರಣದಲ್ಲಿ ನಡೆಯಿತು.


ಅಚ೯ಕರ ಮೂಲಕ ಕೆರೆದಂಡೆಯಲ್ಲಿ ಗಂಗಾ ಪೂಜೆ ಹಾಗೂ ಇತರ ವಿದಿವಿಧಾನಗಳು ನಡೆದ ಬಳಿಕ ಕೆರೆಗೆ ಮುತ್ತೈದೆಯರ ಮೂಲಕ ಹಾಗೂ ಕೆರೆ ಸಮಿತಿ, ಗ್ರಾಮ ಪಂಚಾಯತ್, ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯರೊಂದಿಗೆ ಶಾಸಕ ಅಶೋಕ್ ರೈಯವರು ಬಾಗಿನ ಅಪ೯ಣೆ ಮಾಡಿದರು. ಬಳಿಕ ಕೆರೆಯ ನಾಮಫಲಕ ಅನಾವರಣ ಹಾಗೂ ಕೆರೆ ಅಂಗಳದಲ್ಲಿ ಗಿಡನಾಟಿ ಮಾಡಲಾಯಿತು.


ಕೆರೆಗೆ ಬಾಗಿನ ಸಮರ್ಪಿಸಿ, ನಾಮಫಲಕ ಅನಾವರಣಗೊಳಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಕೆರೆ ನಿಮಾ೯ಣ ಮಾಡುವುದರಿಂದ ನೀರು ಶೇಖರಣೆಯಾಗಿ ಅಂತಜ೯ಲ ಮಟ್ಟ ವೃದ್ಧಿಯಾಗುತ್ತದೆ ಹಾಗೂ ಪರಿಸರದಲ್ಲಿರುವ ಪ್ರಾಣಿ ಪಕ್ಷಿಗಳಿಗೆ, ಜಲಚರ ಜೀವಿಗಳಿಗೆ ನೀರಿನ ಆಸರೆಯಾಗುತ್ತದೆ. ಸುತ್ತಮುತ್ತಲಿನ ಪರಿಸರದಲ್ಲಿ ಕೃಷಿ ಕಾರ್ಯಗಳಿಗೂ ಸಹಕಾರಿಯಾಗಲಿದೆ. 1.71 ಎಕ್ರೆ ವಿಸ್ತಾರವುಳ್ಳ ಈ ಬೃಹದಾಕಾರದ ಕೆರೆಯನ್ನು ರೂ 3,20,000ವೆಚ್ಚದಲ್ಲಿ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಧನ ಸಹಾಯದೊಂದಿಗೆ ಹೂಳೆತ್ತಿ ಪುನಶ್ಚೇತನಗೊಳಿಸಲಾಗಿದೆ. ಪುತ್ತೂರಿನಲ್ಲಿ 3 ಪಂಚಾಯತ್‌ನಲ್ಲಿ 3 ಕೆರೆ ನಿಮಾಣ ಮಾಡುವ ಮೂಲಕ ಸರಕಾರದಿಂದ ಆಗದ ಕೆಲಸವನ್ನು ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಾಡಿರುತ್ತದೆ ಎಂದರು.


ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದ.ಕ ಜಿಲ್ಲೆ-2 ಜಿಲ್ಲಾ ನಿದೇ೯ಶಕ ಪ್ರವೀಣ್ ಕುಮಾರ್ ಕೆರೆಯನ್ನು ಗ್ರಾಮ ಪಂಚಾಯತ್‌ಗೆ ಹಸ್ತಾಂತರಿಸಿದರು. ಎಪಿಎಂಸಿ ಮಾಜಿ ಸದಸ್ಯ, ಕೆರೆ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದರು.


ತಾ.ಪಂ ಸಹಾಯಕ ನಿರ್ದೇಶಕಿ ಶೈಲಜ ಪ್ರಕಾಶ್, ಒಳಮೊಗ್ರು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉಪಾಧ್ಯಕ್ಷೆ ಸುಂದರಿ, ಪಿಡಿಓ ಅವಿನಾಶ್, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಶ್ ರೈ ಪಪು೯ಂಜ, ಜನಜಾಗೃತಿ ವೇದಿಕೆ ವಲಯಾಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷ ಉದಯ ಕುಮಾರ್, ಕುಂಬ್ರ ವಲಯಾಧ್ಯಕ್ಷ ಮಾಧವ ರೈ ಕುಂಬ್ರ, ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಕೆರೆ ವಿಭಾಗದ ಇಂಜಿನಿಯರ್ ಭರತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ತಾಲೂಕು ಯೋಜನಾಧಿಕಾಧಿಕಾರಿ ಶಶಿಧರ್ ಎಮ್ ಸ್ವಾಗತಿಸಿದರು. ಬೆಟ್ಟಂಪಾಡಿ ವಲಯದ ಮೇಲ್ವಿಚಾರಕ ಚಂದ್ರಶೇಖರ್ ಎಸ್. ಕಾಯ೯ಕ್ರಮ ನಿರೂಪಿಸಿದರು. ಪುತ್ತೂರು ತಾಲೂಕು ಕೃಷಿ ಮೇಲ್ವಿಚಾರಕಾದ ಉಮೇಶ್ ಬಿ. ವಂದಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿಗಳು, ಪಂಚಾಯತ್ ಸದಸ್ಯರು, ಸ್ವ-ಸಹಾಯ ಸಂಘದ ಸದಸ್ಯರು, ಬೆಟ್ಟಂಪಾಡಿ ಘಟಕದ ಶೌಯ೯ ವಿಪತ್ತು ಸ್ವಯಂ ಸೇವಕರು, ಒಕ್ಕೂಟದ ಪಧಾಧಿಕಾರಿಗಳು, ಹಾಗೂ ಜನಜಾಗೃತಿ ಸದಸ್ಯರು ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here