ನಿಡ್ಪಳ್ಳಿ; ಪಾಣಾಜೆ ಗ್ರಾಮದ ಆರ್ಲಪದವು ಜನತಾ ಕಾಲನಿ ನಿವಾಸಿ ಚನಿಯಪ್ಪ ನಾಯ್ಕ( 50) ಎಂಬವರು ಅಲ್ಪಕಾಲದ ಅಸೌಖ್ಯದಿಂದ ಆ.10 ರಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು.
ಕೆಲವು ವರ್ಷಗಳಿಂದ ಆರ್ಲಪದವು ಜ್ಯೋತಿ ಸ್ಟೋರಿನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದು, ಅವಿವಾಹಿತರಾಗಿದ್ದ ಇವರು ಜನತಾ ಕಾಲನಿಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು.ಅನಾರೋಗ್ಯಕ್ಕೆ ತುತ್ತಾದ ಇವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಸಂಬಂಧಿಕರು ಪುತ್ತೂರು ಮಡ್ಯಲಕಟ್ಟೆಯಲ್ಲಿ ಅವರ ಅಂತಿಮ ಸಂಸ್ಕಾರ ನೆರವೆರಿಸಿದರು.