





ನೆಲ್ಯಾಡಿ: ರಸ್ತೆ ದಾಟಿ ಮಣ್ಣು ರಸ್ತೆ ತಲುಪಿದ್ದ ಬಾಲಕನಿಗೆ ಕಾರು ಡಿಕ್ಕಿಯಾದ ಘಟನೆ ನ.19ರಂದು ಬೆಳಿಗ್ಗೆ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಕುಂತೂರು ಮಸೀದಿ ಬಳಿ ನಡೆದಿದೆ.


ಕುಂತೂರು ಗ್ರಾಮದ ಎರ್ಮಾಳ ನಿವಾಸಿ ರಶೀದ್ ಅವರ ಪುತ್ರ, ಕುಂತೂರು ಸರಕಾರಿ ಶಾಲಾ 4ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ಅಹಿಲ್ (10ವ.) ಗಾಯಗೊಂಡ ಬಾಲಕ. ಈತ ಮಸೀದಿಗೆ ಹೋಗಲು ರಸ್ತೆ ದಾಟಿ ಮಣ್ಣು ರಸ್ತೆಗೆ ತಲುಪಿದಾಗ ಕಡಬ ಕಡೆಯಿಂದ ಕಿರಣ್‌ಕುಮಾರ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ವೆನ್ಯೂ ಕಾರು (24ಬಿಹೆಚ್ 0553ಬಿ) ಡಿಕ್ಕಿಯಾಗಿದೆ. ಘಟನೆಯಲ್ಲಿ ಬಾಲಕ ಮೊಹಮ್ಮದ್ ಅಹಿಲ್‌ನ ಕಾಲಿಗೆ ಗಾಯವಾಗಿದ್ದು ಚಿಕಿತ್ಸೆಗೆ ಪುತ್ತೂರಿನ ಹಿತ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಪೂಂಜ ನಿವಾಸಿ ಡಿ.ಅಬೂಬಕ್ಕರ್ ಸಿದ್ದೀಕ್ ಎಂಬವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















