





ಪುಣಚ : ಕೇಪು ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ ಗ್ರಂಥಪಾಲಕರ ದಿನಾಚರಣೆಯನ್ನು ಗ್ರಾಮ ಪಂಚಾಯಿತಿ ಆವರಣ ಗ್ರಂಥಾಲಯದಲ್ಲಿ ಆ.12 ರಂದು ಆಚರಿಸಲಾಯಿತು.


ಕಾರ್ಯಕ್ರಮವನ್ನು ನೀರ್ಕಜೆ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಶಿಕ್ಷಕಿ ರೇವತಿಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಗ್ರಾ. ಪಂ ಅಧ್ಯಕ್ಷ ರಾಘವ ಸಾರಡ್ಕ, ನೀರ್ಕಜೆ ಶಾಲಾ ಮುಖ್ಯ ಶಿಕ್ಷಕ ಬಾಬು ನಾಯ್ಕ್, ಗ್ರಾ. ಪಂ. ಕಾರ್ಯದರ್ಶಿ ರಾಮ ನಾಯ್ಕ, ಸಿಬ್ಬಂದಿ ಚಂದ್ರಶೇಖರ್, ಗ್ರಂಥಾಲಯ ಮೇಲ್ವಿಚಾರಕಿ ಭವ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೀರ್ಕಜೆ ಶಾಲಾ ಮಕ್ಕಳು ಭಾಗವಹಿಸಿದ್ದು ಪ್ರಬಂಧ ಸ್ಪರ್ಧೆ ಹಾಗೂ ಕ್ವಿಜ್ ನಡೆಸಲಾಯಿತು











