ಪುತ್ತೂರು: ಶ್ರೀರಾಮಕೃಷ್ಣ ಸೇವಾ ಸಮಾಜ ಮತ್ತು ಪುತ್ತೂರಿನ ವಿವಿಧ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ನೆಲ್ಲಿಕಟ್ಟೆ ಶ್ರೀರಾಮಕೃಷ್ಣ ಸೇವಾ ಸಮಾಜದ ಎಮ್.ಸದಾಶಿವ ರಾವ್ ಸಭಾಭವನದಲ್ಲಿ ನಡೆಯಿತು. ಶ್ರೀರಾಮಕೃಷ್ಣ ಸೇವಾ ಸಮಾಜದ ಅಧ್ಯಕ್ಷ ಹಾಗೂ ನ್ಯಾಯವಾದಿ ಎನ್.ಸುಬ್ರಹ್ಮಣ್ಯಂ ಧ್ವಜಾರೋಹಣ ನೆರವೇರಿಸಿ ಶುಭಾಶಯ ತಿಳಿಸಿದರು. ಬಳಿಕ ಸಮಾಜದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಲಘುಉಪಹಾರ, ಮಧ್ಯಾಹ್ನ ಸಹಭೋಜನ ನಡೆಯಿತು.
