ದೇಶದ ಪ್ರಗತಿಗೆ ಪೂರಕ ವಾತಾವರಣ ನಿರ್ಮಿಸೋಣ: ರಶೀದ್ ರಹ್ಮಾನಿ
ಪುತ್ತೂರು: ದೇಶವು ತನ್ನ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದರೂ ದೇಶವಾಸಿಗಳು ಸಂಪೂರ್ಣ ರೀತಿಯ ಸ್ವಾತಂತ್ರ್ಯ ಅನುಭವಿಸದೆ ಸ್ವಾತಂತ್ರ್ಯದ ಅರ್ಥಪೂರ್ಣವಾಗದೆಂದು ಪರ್ಲಡ್ಕ ಖತೀಬ್ ಅಬ್ದುಲ್ ರಶೀದ್ ರಹ್ಮಾನಿ ಹೇಳಿದರು. ದೇಶದ ಕಟ್ಟಕಡೆಯ ವ್ಯಕ್ತಿಯೂ ಹಸಿವು,ಬಡತನ , ನಿರುದ್ಯೋಗದಿಂದ ಮುಕ್ತಿಪಡೆದು ಸಂವಿಧಾನಾತ್ಮಕವಾದ ಎಲ್ಲಾ ಹಕ್ಕುಗಳನ್ನು ನಿರ್ಭಯದಿಂದ ಪಡೆಯುವ ವಾತಾವರಣ ನಿರ್ಮಾಣವಾಗಬೇಕಿದ್ದು , ಇದಕ್ಕಾಗಿ ಪ್ರತಿಯೊಬ್ಬ ಪ್ರಜೆಯೂ ಪಣತೊಡಬೇಕೆಂದು ಅವರು ಹೇಳಿದರು. ಪರ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ಹಿದಾಯತುಲ್ ಇಸ್ಲಾಂ ಮದ್ರಸದ ವತಿಯಿಂದ ನಡೆದ ‘ಆವಾಝೇ ಆಝಾದಿ -2023’ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಂದೇಶ ಭಾಷಣವನ್ನು ಮಾಡಿದರು.
ಜಮಾಅತ್ ಅಧ್ಯಕ್ಷ ಅಬ್ದುಲ್ ರಝಾಕ್ ಹಾಜಿ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ನೆರವೇರಿಸಿದರು. ಯೂಸುಫ್ ಫೈಝಿ ದೇಲಂಪಾಡಿ ದುವಾ ಮಾಡಿದರು. ಸದರ್ ಉಸ್ತಾದ್ ಜಲಾಲುದ್ದೀನ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌ಕೆಎಸ್‌ಬಿವಿ ಪುತ್ತೂರು ರೇಂಜ್ ಅಧ್ಯಕ್ಷ ಶಬೀರ್ ಅಹ್ಮದ್ ಶುಭ ಹಾರೈಸಿದರು.ಎಸ್‌ಕೆಎಸ್‌ಬಿವಿ ಕಾರ್ಯದರ್ಶಿ ಮುಹಮ್ಮದ್ ಶಮ್ಮಾಸ್ ಪ್ರತಿಜ್ಞೆ ಬೋಧಿಸಿದರು. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆದ ಸ್ಪರ್ಧೆಗಳ ಬಹುಮಾನ ವಿತರಣೆ ಮಾಡಲಾಯಿತು.
ಮದ್ರಸಾ ಅಧ್ಯಾಪಕರಾದ ನಾಸಿರ್ ಫೈಝಿ, ಹನೀಫ್ ಮುಸ್ಲಿಯಾರ್, ಉಸ್ಮಾನ್ ಮುಸ್ಲಿಯಾರ್, ಜಮಾಅತ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಫಾರೂಕ್ ನಿಶ್ಮ, ಉಪಾಧ್ಯಕ್ಷ ಅಬೂಬಕ್ಕರ್, ಕೋಶಾಧಿಕಾರಿ ಹಸನ್ ಅಕ್ಕರೆ, ಕಾರ್ಯದರ್ಶಿಗಳಾದ ಶಮೀರ್, ಅಶ್ರಫ್ ಗೋಳಿಕಟ್ಟೆ ಸದಸ್ಯರಾದ ಉಬೈದ್ ಗೋಳಿಕಟ್ಟೆ, ಬಶೀರ್ ಅಕ್ಕರೆ, ಇಕ್ಬಾಲ್ ಗೋಳಿಕಟ್ಟೆ, ಅಬ್ದುಲ್ಲಾ ಗುಡ್ಡೆ, ಮೊಯ್ದೀನ್ ಕುಂಜೂರು, ಮುಹಮ್ಮದ್ ಬಳ್ಳೂರು, ಯಂಗ್‌ಮೆನ್ಸ್ ಅಧ್ಯಕ್ಷರಾದ ಸಿನಾನ್ ಪರ್ಲಡ್ಕ ಅತಿಥಿಗಳಾಗಿ ಉಪಸ್ಥಿತರಿದ್ದರು.ಮುಸ್ತಫಾ ಫೈಝಿ ಮಲಪ್ಪುರಂ ಸ್ವಾಗತಿಸಿ ವಂದಿಸಿದರು.