ಪಾಪೆತ್ತಡ್ಕ ಮುಹಿಯದ್ದೀನ್ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಪಾಪೆತ್ತಡ್ಕ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಜಮಾಅತ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಕೊಂಬಾಳಿ ಧ್ವಜಾರೋಹಣಗೈದರು. ಸ್ಥಳೀಯ ಖತೀಬ್ ಯೂಸುಫ್ ಫೈಝಿ ತ್ಯಾಗರಾಜೆ ದುವಾ ನೆರವೇರಿಸಿದರು.
ಮುಅಲ್ಲಿಂ ಉಸ್ತಾದರಾದ ಅಬ್ದುರ್ರಹ್ಮಾನ್ ಮೌಲವಿ ಕುಂಬ್ರ ಸ್ವಾತಂತ್ರ್ಯ ಪ್ರತಿಜ್ಞಾ ವಿಧಿ ಬೋಧನೆ ಮಾಡಿದರು.

ಮದ್ರಸ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು. ಜಮಾಅತ್ ಕಾರ್ಯದರ್ಶಿಗಳಾದ ಅಶ್ರಫ್ ಆನಾಜೆ, ಹನೀಫ್ ನರಿಮೊಗರು, ಕೋಶಾಧಿಕಾರಿ ಮುಹಮ್ಮದ್ ಹಾಜಿ ದರ್ಖಾಸ್, ಮಾಜಿ ಅಧ್ಯಕ್ಷರಾದ ಸುಲೈಮಾನ್ ಪರಮಾರ್ಗ, ಮಾಜಿ ಕೋಶಾಧಿಕಾರಿ ಇಬ್ರಾಹಿಂ ಬೊಳ್ಳಮೆ, ಸ್ವಲಾತ್ ಕಮಿಟಿ ಅಧ್ಯಕ್ಷ ಸಮೂನ್ ಪಾಪೆತ್ತಡ್ಕ, ಕಾರ್ಯದರ್ಶಿ ಹಾರಿಸ್ ಕೊಡಿನೀರು, ಕೋಶಾಧಿಕಾರಿ ಅಬ್ದುರ್ರಹ್ಮಾನ್ ಕಾಳಿಂಗಹಿತ್ಲು. ಎಸ್‌ಕೆಎಸ್‌ಎಸ್‌ಎಫ್ ಕಾರ್ಯದರ್ಶಿ ಶಮೀರ್ ಪಾಪೆತ್ತಡ್ಕ ಹಾಗೂ ಜಮಾಅತ್ ಪದಾಧಿಕಾರಿಗಳು, ಪೋಷಕರು, ಊರವರು, ಮದ್ರಸ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಮದರಸದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.ಬಳಿಕ ಸಿಹಿ ತಿಂಡಿ ವಿತರಣೆ ನಡೆಯಿತು. ಜಮಾಅತ್ ಪ್ರ.ಕಾರ್ಯದರ್ಶಿ ಉಮರ್ ಶಾಫಿ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here