ಮಂಗಳೂರು: ಪ್ರಾಥಮಿಕ ಆರೋಗ್ಯ ಕೇಂದ್ರ ಬೋಂದೆಲ್, ಕಸ್ವಿ ಹಸಿರು ದಿಬ್ಬಣ ಮತ್ತು ಮುತ್ತೂಟ್ ಫೈನಾನ್ಸ್ ಸಿಎಸ್‌ಆರ್ ವಿಭಾಗ ಜೊತೆಗೂಡಿ ವಿಶ್ವ ಸ್ತನ್ಯ ಪಾನ ಸಪ್ತಾಹದ ಪ್ರಯುಕ್ತ ಬೋಂದೆಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಿಶು ಪೋಷಣಾ ಕೊಠಡಿಯ ಉದ್ಘಾಟನೆ ಮಾಡಲಾಯಿತು,
ಮೂಡುಶೆಡ್ಡೆ ಗ್ರಾ.ಪಂ.ಅಧ್ಯಕ್ಷೆ ಜಯಶ್ರೀಯವರು ಉದ್ಘಾಟಿಸಿದರು. ಅತಿಥಿಯಾಗಿದ್ದ ಮಂಗಳೂರು ತಾಲೂಕು ಆರೋಗ್ಯ ಅಧಿಕಾರಿ ಡಾ. ಸುಜಯ್‌ರವರು ಮಾತನಾಡಿ, ಶಿಶು ಪೋಷಣಾ ಕೊಠಡಿಯು ಕೇವಲ ಕೊಠಡಿಯಾಗಿರದೆ ಬಹುಪಯೋಗಿಯಾಗಲಿದೆ. ಇದು ಲಸಿಕಾ ಮಾಹಿತಿ, ಪೌಷ್ಟಿಕ ಆಹಾರಗಳ ಮಾಹಿತಿ ಹೀಗೆ ಹಲವು ಉಪಯುಕ್ತ ಮಾಹಿತಿ ಒಳಗೊಂಡ ವಿಶೇಷ ಕೊಠಡಿ ಎಂದರು. ಬೋಂದೆಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸವಿತಾ ಎಸ್.ಜಿ.,ಯವರು ಮಾತನಾಡಿ, ಸಾರ್ವಜನಿಕ ಸ್ಥಳದಲ್ಲಿ ಶಿಶು ಪೋಷಣ ಕೊಠಡಿಯ ಅವಶ್ಯಕತೆ ಬಗ್ಗೆ ಮನವರಿಕೆ ಮಾಡಿ, ಮುತ್ತೂಟ್ ಸಿಎಸ್‌ಆರ್ ಮತ್ತು ಕಸ್ವಿ ಹಸಿರು ದಿಬ್ಬಣದ ಸೇವೆಯನ್ನು ಶ್ಲಾಘಿಸಿದರು.
ಮುತ್ತೂಟ್ ಫೈನಾನ್ಸ್‌ನ ರೀಜನಲ್ ಅಡ್ಮಿನ್ ಆಫೀಸರ್ ರಾಹುಲ್ ರಾಘವನ್, ಕ್ಲಸ್ಟರ್ ಮ್ಯಾನೇಜರ್ ಪವಿತ್ರ ಕುಮಾರ್, ಕದ್ರಿ ಬ್ರಾಂಚ್ ಮ್ಯಾನೇಜರ್ ಚಂದ್ರಶೇಖರ್ ಯು., ಸಿಎಸ್‌ಆರ್ ಮ್ಯಾನೇಜರ್ ಪ್ರಸಾದ್ ಕುಮಾರ್, ಪೃಥ್ವಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷೆ ಲೋಲಾಕ್ಷಿ ಫೆರ್ನಾಂಡಿಸ್, ರಿಸೋರ್ಸ್ ಮ್ಯಾನೇಜರ್ ಲತೀಶ್, ಕೋ ಆರ್ಡಿನೇಟರ್ ಪ್ರಜ್ವಲ್, ನೋಯೆಲ್ ಕುಮಾರ್, ಕಸ್ವಿ ಹಸಿರು ದಿಬ್ಬಣದ ಅಧ್ಯಕ್ಷೆ ಶ್ರದ್ದಾ ಕೇಶವ ರಾಮಕುಂಜ, ಕೇಶವ್ ರಾಮಕುಂಜ ಉಪಸ್ಥಿತರಿದ್ದರು.
ಸನ್ಮಾನ:
ನಾಟಿ ಪ್ರಸೂತಿ ತಜ್ಞರಾದ ಸೂಲಗಿತ್ತಿ ಸರೋಜ ಗೌಡ ಸುಳ್ಯ ಇವರ ಸೇವೆಯನ್ನು ಗುರುತಿಸಿ ಸನ್ಮಾನ ಮಾಡಲಾಯಿತು. ಜಿಲ್ಲಾ ಕೈಗಾರಿಕಾ ಕೇಂದ್ರದ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಕಾರ್ಯಕ್ರಮ ನಿರೂಪಿಸಿದರು.