ಚೆಲ್ಯಡ್ಕ ಕಿಂಡಿ ಅಣೆಕಟ್ಟಿನಲ್ಲಿ ಸಿಕ್ಕಿಕೊಂಡ ಮರಗಳ ತೆರವು- ಸಾರ್ವಜನಿಕರಿಂದ ಪ್ರಶಂಸೆಗೊಳಪಟ್ಟ ಇರ್ದೆ ಬೆಟ್ಟಂಪಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡ

0

ನಿಡ್ಪಳ್ಳಿ: ಇರ್ದೆ ಬೆಟ್ಟಂಪಾಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಚೆಲ್ಯಡ್ಕ ಕಿಂಡಿ ಅಣೆಕಟ್ಟಿನಲ್ಲಿ ಮಳೆಗಾಲದಲ್ಲಿ ನೀರಿನಲ್ಲಿ ಬಂದು ಸಿಕ್ಕಿ ಕೊಂಡ ಮರ ಮತ್ತು ಕಸ ಕಡ್ಡಿಗಳನ್ನು ಆ.15 ರಂದು ತೆರವುಗೊಳಿಸಿದರು. ಈ ಘಟಕದ ಸದಸ್ಯರು ಈ ಶ್ರಮದಾನ ಮಾಡುವ ಮೂಲಕ ಸ್ವಾತಂತ್ರ್ಯ ದಿನವನ್ನು ವಿಶಿಷ್ಟವಾಗಿ ಆಚರಿಸಿದರು.ಇವರ ಈ ನಿಸ್ವಾರ್ಥ ಸೇವೆಗೆ ಸಾರ್ವಜನಿಕರಿಂದ ಬಾರಿ ಪ್ರಶಂಸೆ ವ್ಯಕ್ತವಾಯಿತು.


ಸುಬ್ರಹ್ಮಣ್ಯ, ಆನಂದ, ಹರಿ ಪ್ರಸಾದ್  ಸಿ.ಎಚ್, ಸತೀಶ ಎಂ, ಅಶೋಕ, ದಿನೇಶ್, ರವಿ ಕೆ, ಉಮೇಶ್, ಗೀತಾ, ಸಂಪಲಾ, ಜಲಜಾಕ್ಷಿ, ಶ್ರೀಮತಿ, ಪದ್ಮಾವತಿ .ಡಿ, ಹರೀಶ್, ಮನೋಜ್,ಚಂದ್ರ, ಹೇಮಾವತಿ, ಪ್ರವೀಣ್ ಇವರು ಶ್ರಮದಾನದಲ್ಲಿ ಪಾಲ್ಗೊಂಡರು.

ವಲಯದ ಶಾಲೆಗಳಿಗೆ ಸಿಹಿ ತಿಂಡಿ ವಿತರಣೆ- ಸ್ವಾತಂತ್ರ್ಯೋತ್ಸವ ಅಂಗವಾಗಿ ಬೆಟ್ಟಂಪಾಡಿ ವಲಯದ ಒಟ್ಟು 9 ಪ್ರಾಥಮಿಕ ಶಾಲೆಗಳಿಗೆ ವಿಪತ್ತು ನಿರ್ವಹಣಾ ಘಟಕದಿಂದ ಸಿಹಿ ತಿಂಡಿ ಹಂಚಿ ಸ್ವಾತಂತ್ರ್ಯವನ್ನು ಮಕ್ಕಳೊಂದಿಗೆ ಆಚರಿಸಿಕೊಂಡರು.

LEAVE A REPLY

Please enter your comment!
Please enter your name here