ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರ, ಪುತ್ತೂರು ಮತ್ತು ಮಹಿಳಾ ಬಿಲ್ಲವ ವೇದಿಕೆ ಪುತ್ತೂರು ಇದರ ವತಿಯಿಂದ ಆಟಿಕೂಟವು ಆ.13 ರಂದು ನಡೆಸಲಾಯಿತು.
ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿರವರು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಸಂಘಟನೆಯಿಂದ ಬಲಾಯುತರಾಗಿರಿ ಎನ್ನುವ ಗುರುಗಳ ನಾಣ್ಣುಡಿಯಂತೆ ಮಹಿಳಾ ವೇದಿಕೆಯಿಂದ ಇನ್ನೂ ಇಂತಹ ಜನರಿಗೆ ಮಾದರಿಯಾಗುವಂತಹ ಕೆಲಸಗಳು ನಿಮ್ಮಿಂದ ನಡೆಯುವಂತಾಗಲಿ ಎಂದರು.
ಆಟಿ ಕೂಟದ ಕೇಂದ್ರ ಬಿಂದುವಾದ ಕೆ.ಎಸ್.ಆರ್.ಟಿ.ಸಿ. ಬಸ್ ನಿರ್ವಾಹಣಾಧಿಕಾರಿ ಕೂಚನ್ನ ಪೂಜಾರಿ ಕೆದಂಬಾಡಿ ಇವರು ಮಾತನಾಡು, ಆಟಿಯ ಮಹತ್ವ, ಇತಿಹಾಸ ಹಾಗೂ ನಮ್ಮ ಪೂರ್ವಜರು ಒಂದು ಹೊತ್ತಿನ ಊಟಕ್ಕೂ ಪಡುತಿದ್ದ ಕಷ್ಟ ಹಾಗೂ ಅನುಭವಿಸುತ್ತಿದ್ದ ನೋವುಗಳನ್ನು ಅದೇ ರೀತಿ ಆಟಿಯ ತಿನಿಸುಗಳ ಬಗೆಗೆ ತಿಳಿಸಿದರು.
ಮಹಿಳಾ ಸಂಘದ ನೂತನ ಸಂಚಾಲಕರಾದ ಶ್ರೀಮತಿ ಉಷಾ ಅಂಚನ್ ರವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಸಂಘಕ್ಕೆ ಇರುವ 14 ವರ್ಷಗಳ ಇತಿಹಾಸದ ಬಗ್ಗೆ ತಿಳಿಸುತ್ತಾ ಸ್ವಾಗತಿಸಿದರು.
ಅಧ್ಯಕ್ಷತೆಯನ್ನು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ವಿಮಲಾ ಸುರೇಶ್ ವಹಿಸಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ದೈವ ಆರಾಧಕರಾಗಿರುವ ಬಾಲಕೃಷ್ಣರವರು ಆಟಿಯ ಪಾಡ್ದನ ಹಾಡಿದರು. ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷರುಗಳಾದ ಶ್ರೀಮತಿ ಪೂಜಾ ವಸಂತ್ ಹಾಗೂ ಶ್ರೀಮತಿ ಚಂದ್ರಕಲಾರವರು ಪ್ರಾರ್ಥಿಸಿದರು. ಶ್ರೀಮತಿ ದೇವಿಕಾ ರವರು ಕಾರ್ಯಕ್ರಮ ನಿರೂಪಿಸಿದರು. ಬಿಲ್ಲವ ವೇದಿಕೆಯ ಕೋಶಾಧಿಕಾರಿ ಶ್ರೀಮತಿ ದೀಕ್ಷಾ ಸಾಲ್ಯಾನ್ ಧನ್ಯವಾದವಿತ್ತರು.
ವರಮಹಾಲಕ್ಷ್ಮೀ ವೃತಾಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ…
ಕಾರ್ಯಕ್ರಮದಲ್ಲಿ ಆ.25 ರಂದು ನಡೆಯಲಿರುವ ವರಮಹಾಲಕ್ಷ್ಮೀ ವೃತಾಚರಣೆಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ವಿಮಲಾ ಪಡ್ನೂರುರವರು ಆಟಿ ಕೂಟದ ಆಯೋಜನೆಗಿಂತಲೂ ಮುಂದಿನ ದಿನಗಳಲ್ಲಿ ಬರುವ ವರಮಹಾಲಕ್ಷ್ಮೀ ಕಾರ್ಯಕ್ರಮವನ್ನೂ ನಾವೆಲ್ಲರೂ ಒಗ್ಗಟ್ಟಾಗಿ ಅದ್ದೂರಿಯಾಗಿ ನಡೆಸಿಕೊಡುವ ಭರವಸೆಯನ್ನಿತ್ತರು.